Log In
BREAKING NEWS >
ಉಡುಪಿ ನಗರದಲ್ಲಿನ ಗ್ರಾಹಕರ ಅಚ್ಚುಮೆಚ್ಚಿನ ಪ್ರಸಿದ್ಧ ಜವಳಿಮಳಿಗೆಯಾದ "ಕಲ್ಸ೦ಕ ಗಿರಿಜಾ ಸಿಲ್ಕ್"ನಲ್ಲಿ ಗ್ರಾಹಕರಿಗಾಗಿ ಜೂನ್ 1ರಿ೦ದ ಮಳೆಗಾಲದ ಮಹೋನ್ನತ ಭಾರೀ ರಿಯಾಯಿತಿ ದರದಲ್ಲಿ ವಸ್ತ್ರಗಳ ಮಾರಾಟ ಆರ೦ಭ.

ಉಡುಪಿಯ ಶ್ರೀಭಗವಾನ್ ನಿತ್ಯಾನ೦ದ ಸ್ವಾಮಿ ಮ೦ದಿರ ಮಠದಲ್ಲಿ -ಜನವರಿ16ರ೦ದು ನವೀಕೃತ ಮ೦ದಿರ ಲೋಕಾರ್ಪಣೆ, ಗುರುಗಳ ವಿಗ್ರಹ ಪ್ರತಿಷ್ಠೆ

ಉಡುಪಿ, ಜ. 2: ಉಡುಪಿಯ ಕೆ.ಎಂ.ಮಾರ್ಗದಲ್ಲಿ ಸಂಪೂರ್ಣ ಜೀರ್ಣೋದ್ಧಾರಗೊಂಡು ಶ್ರೀ ಭಗವಾನ್ ನಿತ್ಯಾನಂದ ಸ್ವಾಮಿ ಮಂದಿರ ಮಠದಲ್ಲಿ ಪ್ರತಿಷ್ಠಾಪಿಸಲ್ಪಡುವ ಶ್ರೀ ಗುರುವರ್ಯರ ಪಂಚಲೋಹದ ವಿಗ್ರಹದ ಮೆರವಣಿಗೆಯು ಜ.15ರಂದು ನಡೆಯಲಿದ್ದು, ಜ.16ರ ಸೋಮವಾರದ೦ದು ನವೀಕೃತ ಮಂದಿರ ಲೋಕಾರ್ಪಣೆ, ಗರ್ಭಗೃಹ ಸಮರ್ಪಣೆ, ಗುರುಗಳ ವಿಗ್ರಹ ಪ್ರತಿಷ್ಠೆ ಧಾರ್ಮಿಕ ಸಭೆ, ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಲಿವೆ.

ಜ.15ರ ಭಾನುವಾರದ೦ದು ವಿಗ್ರಹವನ್ನು ಕೊಡವೂರಿನ ಶಿರ್ಡಿಶ್ರೀಸಾಯಿಬಾಬಾ ಮ೦ದಿರರಿ೦ದ ಶೋಭಾಯಾತ್ರೆಯ ಮೂಲಕವಾಗಿ ಮ೦ದಿರಕ್ಕೆ ತರಲಾಗುವುದು.ಅ೦ದು ಸಾಯ೦ಕಾಲ 4ಕ್ಕೆ ಬೆ೦ಗಳೂರಿನ ಎ೦ಇಎ೦ಜಿ ಅಧ್ಯಕ್ಷರಾಗಿರುವ ಡಾ.ರ೦ಜನ್ ಪೈಯವರು ಮೆರವಣಿಗೆಗೆ ಚಾಲನೆಯನ್ನು ನೀಡಲಿದ್ದಾರೆ.

ಜ.16ರ೦ದು 6.30ಕ್ಕೆ ನಡೆಯಲಿರುವ ಸಭೆಯಲ್ಲಿ ಎ೦ಎ೦ಎನ್ ಎಲ್ನ ಕಾರ್ಯನಿರ್ವಾಹಕ ಅಧ್ಯಕ್ಷರಾದ ಟಿ.ಸತೀಶ್ ಯು ಪೈ, ಮಾಹೆ ವಿ.ವಿ.ಸಹಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್ , ಮು೦ಬಯಿಯ ಉದ್ಯಮಿ ಕೆ.ಕೆ.ಆವರ್ಸೇಕರ್ ಗೌರವಿಸಲಿದ್ದಾರೆ.

ಜೀರ್ಣೋದ್ದಾರ ಕಾರ್ಯಕ್ರಮ…2022ರ ಫೆ.20ರ೦ದು ಮಾಣಿಲ ಕ್ಷೇತ್ರದ ಶ್ರೀಮೋಹನದಾಸ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಶ೦ಕು ಸ್ಥಾಪನೆಯನ್ನು ನೆರವೇರಿಸಲಾಯಿತು.

ಉಜ್ವಲ್ ಡೆವಲಪರ್ಸ್ ಪುರುಷೋತ್ತಮ ಪಿ ಶೆಟ್ಟಿಯವರನ್ನು ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷರನ್ನಾಗಿಮಾಡಿ ಸರ್ವ ಭಕ್ತರ ಸಹಕಾರದಿ೦ದ ಗಣೇಶಪುರಿಯ ಸಮಾಧಿ ಮ೦ದಿರದ ಮಾದರಿಯ೦ತೆ ಕೋಡೆ ಪ್ಯಾಮಿಲಿ ಟ್ರಸ್ಟ್ ನ ರಾಮಚ೦ದ್ರ ಕೋಡೆ, ಕೆ.ಕೆ.ಆವರ್ಸೇಕರ್ ಅವರ ಸಹಕಾರದೊ೦ದಿಗೆ ಆರ್ಕಿಟೆಕ್ಚರ್ ನಾಗೇಶ್ ಹೆಗ್ಡೆಯವರ ವಿನ್ಯಾಸದೊ೦ದಿಗೆ ಕೇವಲ ೧೧ತಿ೦ಗಳಲ್ಲಿ ಮ೦ದಿರ ಮಠದ ನಿರ್ಮಾಣ ಕಾರ್ಯ ಪೂರ್ಣಗೊಳ್ಳುತ್ತಿದೆ.

11 ತಿಂಗಳಿನಿಂದ ಸ್ವಾಮಿಯ ಬಿಂಬವನ್ನು ಸೀತಮ್ಮ ಶೆಟ್ಟಿಯವರ ಕುಟುಂಬದವರ ಮನೆಯ ಸ್ಥಳದಲ್ಲಿ ಬಾಲಾಲಯದಲ್ಲಿರಿಸಿ ಪ್ರತಿದಿನ ಭಜನೆ, ಸಂಕೀರ್ತನೆ, ಪೂಜೆ, ಪುರಸ್ಕಾರ ನಡೆಸಲಾಗುತ್ತಿದೆ ಮಂದಿರ ಮಠದ ಮುಖ್ಯಸ್ಥ ಕೊಡವೂರು ತೋಟದ ಮನೆ ದಿವಾಕರ ಶೆಟ್ಟಿ ಯವರು ತಿಳಿಸಿದ್ದಾರೆ.

ಸಾದ್ವಿ ಸೀತಮ್ಮ ಶೆಟ್ಟಿಯವರ ಸ೦ಕಲ್ಪ….
ಶ್ರೀ ಭಗವಾನ್ ನಿತ್ಯಾನಂದ ಸ್ವಾಮಿಯವರು 1960ರ ಆ. 8ರಂದು ಗಣೇಶಪುರಿಯಲ್ಲಿ ಸಮಾಧಿಯಾಗುವುದಕ್ಕೆ1 ವರ್ಷದ ಹಿಂದೆ ಉಡುಪಿ ಮೂಲದ ಮುಂಬಯಿ ನಿವಾಸಿ ಸ್ವಾಮಿಯವರ ಪರಮ ಭಕ್ತಿ ಸಾದ್ವಿ ಸೀತಮ್ಮ ಶೆಟ್ಟಿಯವರು ಗಣೇಶಪುರಿಯಲ್ಲಿರುವ ಶ್ರೀ ನಿತ್ಯಾನಂದ ಸ್ವಾಮಿಯವರನ್ನು ದರ್ಶನದೊಂದಿಗೆ ಪೂಜೆ ಸಲ್ಲಿಸುತ್ತಿದ್ದರು.

ಹುಟ್ಟೂರಿನಲ್ಲಿ ಮಂದಿರ ನಿರ್ಮಿಸುವ ತಮ್ಮ ಸಂಕಲ್ಪದಂತೆ ಸೀತಮ್ಮನವರು ಉಡುಪಿಯ ಅಲಂಕಾರ್ ಟಾಕೀಸ್ ಬಳಿ ಸದ್ಗುರು ಶ್ರೀ ಜನಾನಂದ ಸ್ವಾಮಿಯವರ ಮೂಲಕ 1961ರ ನ. 24ರಂದು ಮಂದಿರ ಮಠ ಸ್ಥಾಪಿಸಿದರು.ಸೀತಮ್ಮನವರು ತಮ್ಮ ಕಾಲದಲ್ಲಿಯೇ ಕೇರಳದ ಕಾಜ೦ಗಾಡಿನಲ್ಲಿರುವ ನಿತ್ಯಾನಂದ ಸ್ವಾಮಿಗಳ ಮೂಲಮಠಕ್ಕೆ ಸದ್ಗುರು ಶ್ರೀ ಜನಾನಂದ ಸ್ವಾಮಿಯವರ ಮೂಲಕ ಉಡುಪಿಯ ಮಂದಿರ ಮಠವನ್ನು ದಾನವಾಗಿ ನೀಡಿದರು.ಇದೀಗ ಮ೦ದಿರ ಮಠದ ಜೀರ್ಣೋದ್ದಾರಕಾರ್ಯ ನಡೆದು ಲೋಕಾರ್ಪಣೆಗೊಳ್ಳಲಿದೆ.

https://karavalikirana.com/160713old news link

No Comments

Leave A Comment