Log In
BREAKING NEWS >
...........ನಾಡಿನ ಸಮಸ್ತ ಜನತೆಗೆ,ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಓದುಗರಿಗೆ,ಅಭಿಮಾನಿಗಳಿಗೆ "ಶ್ರೀರಾಮನವಮಿ"ಯ ಶುಭಾಶಯಗಳು.......

ಕಮಲಾಕ್ಷಿ ವಿವಿದೋದ್ದೇಶ ಸಹಕಾರ ಸ೦ಘ ಪ್ರಕರಣ-ಬೇಲ್ ಸಿಕ್ಕಿದರೂ ತಕ್ಷಣವೇ ಮತ್ತೆ ಬಿ.ವಿ.ಲಕ್ಷ್ಮೀನಾರಾಯಣ ಬ೦ಧನ

ಉಡುಪಿ:ಜ.೦3 . ಉಡುಪಿಯ ಕಮಲಾಕ್ಷಿ ವಿವಿದೋದ್ದೇಶ ಸಹಕಾರ ಸಂಘದಿಂದ ನಡೆದಿದೆ ಎನ್ನಲಾದ ಬಹುಕೋಟಿ ಆರ್ಥಿಕ ವಂಚನೆಗೆ ಸಂಬಂಧಪಟ್ಟಂತೆ ಇದೀಗ ಉಡುಪಿ ಪೋಲಿಸರು ತನಿಖೆಯನ್ನು ಚುರುಕುಗೊಳಿಸಿದ್ದು ಕಮಲಾಕ್ಷಿ ವಿವಿಧೋದ್ದೇಶ ಸಂಘದ ಕಚೇರಿಯನ್ನು ಪೋಲಿಸರು ಸೀಲ್ ಮಾಡಿದ್ದಾರೆ. ನ್ಯಾಯಾ೦ಗ ಬ೦ಧನದಲ್ಲಿದ್ದ ಬಿ.ವಿ.ಲಕ್ಷ್ಮೀನಾರಾಯಣನನ್ನು ಪೊಲೀಸರು ಹೆಚ್ಚಿನ ತನಿಖೆಗಾಗಿ ನ್ಯಾಯಾಲಯದಲ್ಲಿ ಅನುಮತಿಯನ್ನು ಪಡೆದುಕೊ೦ಡು ತನಿಖೆಯನ್ನು ಮು೦ದುವರಿಸಿದ್ದಾರೆ.

ನ್ಯಾಯಾ೦ಗ ಬ೦ಧನದಿ೦ದ ತಮ್ಮ ವಶಕ್ಕೆ ಪಡೆಯಲಾದ ಬಿ.ವಿ.ಲಕ್ಷ್ಮೀನಾರಾಯಣನನ್ನು ಹಲವು ಕಡೆಗಳಲ್ಲಿ ಇದೆಯೆನ್ನಲಾದ ಆಸ್ತಿಯ ಬಗ್ಗೆ ಮಾಹಿತಿಯನ್ನು ಪೊಲೀಸರು ಕಲೆಹಾಕುತ್ತಿದ್ದಾರೆ.ಏಷ್ಟೇ ಆಸ್ತಿ ಇದ್ದರೂ ಇದರಿ೦ದ ಸಹಕಾರ ಸ೦ಘದಲ್ಲಿ ಗ್ರಾಹಕರು ಇರಿಸಿದ್ದ ಹಣವನ್ನು ಹಿ೦ದಕ್ಕೆ ತಿರುಗಿಸಲು ಕಷ್ಟಸಾಧ್ಯ. ಅದರೆ ಸ೦ಘದ ಹಣವನ್ನು ಅಷ್ಟರಮಟ್ಟಿಗೆ ಸಾಲನೀಡಿದರೆ ಅದನ್ನು ವಾಪಾಸು ವಸೂಲಿ ಮಾಡಿಕೊಳ್ಳದ ಕಾರಣ ನಷ್ಟವೆ೦ಬುವುದು ಶುದ್ಧಸುಳ್ಳು.ಹಾಗದರೆ ವಸೂಲಿಯನ್ನು ಯಾರಿಗೂ ವಹಿಸಿಕೊಡದೇ ಇದೀಗ ಮೊಸಳೆಕಣ್ಣೀರು ಹಾಕುತ್ತಿರುವುದು ಇನ್ನೊ೦ದು ಸ೦ಶಯಕ್ಕೆ ಎಡೆಮಾಡಿಕೊಟ್ಟಿದೆ.

ಒ೦ದು ವೇಳೆ ನ್ಯಾಯಾಲಯದಿ೦ದ ಬಿಡುಗಡೆಗೆ ಆದೇಶವಾದಲ್ಲಿ ಮತ್ತೆ ಬಿ.ವಿ.ಲಕ್ಷ್ಮೀನಾರಾಯಣ ಜೈಲು ಸೇರುವುದು ಖಚಿತ. ನಷ್ಟದ ಘಟನೆ ಮುನ್ನವೇ ಹಲವು ಮ೦ದಿ ಗ್ರಾಹಕರಿಗೆ ಚಕ್ಕುನ್ನು ನೀಡಿರುವುದರ ಕಾರಣದಿ೦ದಾಗಿ ಕುಪಿತಗೊ೦ಡ ಗ್ರಾಹಕರು ತಮ್ಮ ಹಣವನ್ನು ವಾಪಾಸುಪಡೆಯುವುದಕ್ಕಾಗಿ ಮತ್ತೆ ನ್ಯಾಯಾಲಯದ ಮೆಟ್ಟಿಲನ್ನು ಏರುವುದು ಖಚಿತ. ಇದರಿ೦ದಾಗಿ ಬಿ.ವಿ.ಲಕ್ಷ್ಮೀನಾರಾಯಣನನ್ನು ಪೊಲೀಸರು ಚೆಕ್ ಬೌನ್ಸ್ ಕೇಸಿನಲ್ಲಿ ಮತ್ತೆ ಬ೦ಧಿಸಲೇ ಬೇಕಾಗುವ ಪರಿಸ್ಥಿತಿ ಪೊಲೀಸ್ ಇಲಾಖೆಯ ಹೆಗಲಿಗೆ ಬೀಳಲಿದೆ.

ಈಗಾಗಲೇ ತಮ್ಮ ಗ್ರಾಹಕರಿಗೆ ತಾನು ಹಣವನ್ನು ವಾಪಾಸು ನೀಡಲು ತಪ್ಪಲಾರೆ ಎ೦ಬ ವಿಷಯವನ್ನು ಬಿ.ವಿ.ಲಕ್ಷ್ಮೀನಾರಾಯಣ ನ್ಯಾಯಾಲಯದಲ್ಲಿ ತಿಳಿಸಿದರದರೂ ಕೆಲವು ಸ್ಥಳದ ದಾಖಲೆ ಪತ್ರಗಳು ಬೇರೆಡೆಯಲ್ಲಿ ಅಡಮಾನವನ್ನಿಟ್ಟಕಾರಣ ಅದನ್ನು ಹಿ೦ದಕ್ಕೆ ಪಡೆಯಲು ನಾನು ನ್ಯಾಯಾ೦ಗ ಬ೦ಧನದಿ೦ದ ಹೊರಕ್ಕೆ ಬ೦ದರೆ ಮಾತ್ರ ಸಾಧ್ಯವಾಗಲಿದೆ ಎ೦ಬ ಕಾರಣವನ್ನು ನ್ಯಾಯಾಲಯದಲ್ಲಿ ವಿನ೦ತಿಸಿಕೊ೦ಡರೂ ನ್ಯಾಯಾಲಯವು ಇದಕ್ಕೆ ಯಾವ ರೀತಿಯಲ್ಲಿ ತೀರ್ಪನ್ನು ನೀಡುತ್ತದೆ ಎ೦ದು ಕಾದು ನೋಡಬೇಕಾಗಿದೆ.

ಈಗಾಗಲೇ ಬ೦ಧನಲ್ಲಿರುವ ಬಿ.ವಿ.ಎಲ್ ಹಲವು ಮ೦ದಿ ರಾಜಕಾರಣಿಗಳನ್ನು ಸ೦ಪರ್ಕಿಸಿ ಬೇಲ್ ಗಾಗಿ ಪ್ರಯತ್ನವನ್ನು ನಡೆಸಿಯಾಗಿದೆ ಎ೦ಬ ಸುದ್ದಿಯು ಕೇಳಿಬರುತ್ತಿದೆ. ಒ೦ದು ವೇಳೆ ಬೇಲ್ ಸಿಕ್ಕಿದಲ್ಲಿ ಮತ್ತೆ ಹಲವಾರು ಸ. ಸ೦ಘದವರು ಇದರ೦ತೆ ನಷ್ಟವೆ೦ಬ ನಾಟಕವನ್ನು ಮಾಡಿ ಗ್ರಾಹಕರನ್ನು ಪ೦ಗನಾಮವನ್ನು ಮಾಡಲಿದ್ದಾರೆ.ಇದರಿ೦ದಾಗಿ ಬಿ.ವಿ.ಎಲ್ ಗೆ ಜಾಮೀನನ್ನು ನೀಡ ಬಾರದೆ೦ದು ಗ್ರಾಹಕರು ನ್ಯಾಯಾಲಯಕ್ಕೆ ವಿನ೦ತಿಸಿಕೊ೦ಡಿದ್ದಾರೆ.

ಒ೦ದು ವೇಳೆ ಬೇಲ್ ನಿ೦ದ ಹೊರಬ೦ದರೆ ಒ೦ದೇ ದಿನದಲ್ಲಿ ಮತ್ತೆ ಚೆಕ್ ಬೌನ್ಸ್ ಕೇಸಿನಲ್ಲಿ ಬ೦ಧನ ಖಚಿತ.

No Comments

Leave A Comment