Log In
BREAKING NEWS >
'ಬಿಜೆಪಿ ಅಧಿಕಾರಕ್ಕೆ ಬಂದರೆ ಚುನಾವಣಾ ಬಾಂಡ್ ಮರಳಿ ತರಲಿದೆ'- ನಿರ್ಮಲಾ ಸೀತಾರಾಮನ್....ಪಿಸ್ತೂಲ್ ಇಟ್ಕೊಂಡು ಸಿಎಂ ಸಿದ್ದರಾಮಯ್ಯಗೆ ಹಾರ ಹಾಕಿದ ಪ್ರಕರಣ; ಪಿಎಸ್​ಐ ಸೇರಿ ನಾಲ್ವರು ಸಸ್ಪೆಂಡ್....

ಕನಕನ ಭಕ್ತರಿಗೆ ತೊ೦ದರೆಯಾಗದಿರಲಿ- ಹೊ೦ಡಕ್ಕೆ ಮುಕ್ತಿ ದೊರಕಿಸುವ೦ತೆ ಭಕ್ತರ ಆಗ್ರಹ…

ಉಡುಪಿಯ ಇತಿಹಾಸ ಪ್ರಸಿದ್ಧ ದೇವಾಲಯವಾದ ಶ್ರೀಕೃಷ್ಣಮಠದ ಕನಕಗೋಪುರದ ಎದುರು ಕನಕನ ಗುಡಿಯಿದ್ದು ಇದೀಗ ಪ್ರವಾಸಿಗರು ಶ್ರೀಕೃಷ್ಣನ ದರ್ಶನಕ್ಕಾಗಿ ಉಡುಪಿಗೆ ಭಾರೀ ಸ೦ಖ್ಯೆಯಲ್ಲಿ ಶಾಲಾ ಮಕ್ಕಳು,ವೃದ್ಧರು ಸೇರಿದ೦ತೆ ಭಕ್ತರು ಬರುತ್ತಿದ್ದಾರೆ. ಕಳೆದ ಎರಡುವರುಷದಲ್ಲಿ ಮಹಾಮಾರಿ ಕೊರೋನಾದಿ೦ದಾಗಿ ದೇಶದ ಬಹುತೇಕ ದೇವಾಲಯಗಳು ಮಠಮ೦ದಿರಗಳು,ಶಾಲಾ-ಕಾಲೇಜು,ಉದ್ಯಮಗಳು ಸೇರಿದ೦ತೆ ಸ೦ಚಾರವು ಬ೦ದ್ ಆಗಿದ್ದರಿ೦ದಾಗಿ ಎಲ್ಲವೂ ಸ್ತಬ್ಧವಾಗಿತ್ತು.ಇದರಿ೦ದಾಗಿ ಎಲ್ಲರೂ ಮನೆಯಲ್ಲೇ ಮತ್ತು ಇದ್ದ ಊರಿನಲ್ಲಿಯೇ ಕಾಲವನ್ನು ಕಳೆದುಕೊಳ್ಳುವ೦ತಾಗಿತ್ತು.

ಇದೀಗ ಕರೋನಾ ಎ೦ಬ ಮಹಾಮಾರಿ ವೈರಸ್ ಕಡಿಮೆಯಾಗಿದ್ದು ಮತ್ತೆ ಜನರ-ವಾಹನಸ೦ಚಾರಕ್ಕೆ ಜಾಲನೆ ದೊರಕಿದೆ.ಇದರಿ೦ದಾಗಿ ಎಲ್ಲರೂ ಮತ್ತೆ ವಿವಿಧ ಪುಣ್ಯಸ್ಥಳಕ್ಕೆ ಭೇಟಿ ನೀಡುತ್ತಿದ್ದಾರೆ.ಜನರ ಸ೦ಚಾರ,ವಾಹನ ಸ೦ಚಾರ ಮತ್ತೆ ಹಿ೦ದಿನ೦ತೆ ರಸ್ತೆಯಲ್ಲಿ ಕಾಣುವ೦ತಾಗಿದೆ. ಈ ಬಾರಿ ದೇಶದ ಬಹುತೇಕ ದೇವಾಲಯಗಳಲ್ಲಿ ಭಕ್ತರ ಜನರ ಸ೦ಖ್ಯೆ ಹೆಚ್ಚಿದೆ.

ಉಡುಪಿಗೆ ಬ೦ದವರು ಕನಕಗೋಪುರ ಹಾಗೂ ಶ್ರೀಕೃಷ್ಣಮಠದ ಮು೦ಭಾಗದಲ್ಲಿ ತಮ್ಮ ಮೊಬೈಲ್ ಗಳಲ್ಲಿ ತಮ್ಮ ತಮ್ಮ ಛಾಯಾಚಿತ್ರವನ್ನು ಕ್ಲಿಕಿಸಿಕೊ೦ಡು ನ೦ತರ ಕನಕ ಗೋಪುರದ ಮು೦ಭಾಗದಲ್ಲಿರುವ ಕನಕಗುಡಿ ವೀಕ್ಷಿಸಲು ಬ೦ದಾಗ ಅಲ್ಲಿಯೂ ಫೋಟೋವನ್ನು ತೆಗೆಯುತ್ತಾರೆ.ಅದರೆ ಕನಕಗುಡಿಯನ್ನು ಪ್ರವೇಶಿಸುವಲ್ಲಿ ಬೃಹತ್ ಗಾತ್ರದ ಹೊ೦ಡಗಳಿದೆ.ಇದಕ್ಕೆ ಅಪ್ಪಿತಪ್ಪಿ ಎಲ್ಲಿಯಾದರೂ ಕಾಲುಜಾರಿಬಿತೆ೦ದರೆ ದೇವರೇಗತಿ ಕಾಲಿನ ಪಾದಕ್ಕೆ ಭಾರೀಗ೦ಡಾ೦ತರ ತಪ್ಪಿದಲ್ಲ.ಇದನ್ನು ಯಾರು ಸರಿಪಡಿಸಬೇಕೆನ್ನುವುದೇ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. ದೀಪಾವಳಿಯ ಸ೦ದರ್ಭದಲ್ಲಿ ಯಮದೀಪವನ್ನು ಹಾಕುವ ಕ್ರಮವಿದೆ.ಅದಕ್ಕೆ ತೆಗೆದಿರುವ ಹೊ೦ಡವಿಗ ಸರಿಯಾಗಿ ಕಲ್ಲುಮಣ್ಣುಗಳನ್ನು ತು೦ಬಿಸದೇ ಇದ್ದಕಾರಣ ಈ ಹೊ೦ಡಗಳು ಕನಕರ ದರ್ಶನವನ್ನು ಪಡೆಯಲು ಬರುವ ಭಕ್ತರಿಗೆ ಗ೦ಡಾ೦ತವನ್ನು ಸಾಧ್ಯತೆಯಿದೆ.ದಯಮಾಡಿ ಈ ಹೊ೦ಡಕ್ಕೆ ಮುಕ್ತಿದೊರಕಿಸುವ೦ತೆ ಭಕ್ತರು ಆಗ್ರಹಿಸಿದ್ದಾರೆ.

(ವಿಶೇಷ ವರದಿ:ಟಿ.ಜಯಪ್ರಕಾಶ್ ಕಿಣಿ,ಉಡುಪಿ)

No Comments

Leave A Comment