Log In
BREAKING NEWS >
ಜೂ.26ರ೦ದು ಉಡುಪಿ ಶ್ರೀಪುತ್ತಿಗೆ ಮಠದ ೪ನೇ ಪರ್ಯಾಯಕ್ಕೆ ಕಟ್ಟಿಗೆ ಮುಹೂರ್ತ ಕಾರ್ಯಕ್ರಮ ಜರಗಲಿದೆ.....

ನಟಿ ರಿಯಾಕುಮಾರಿ ಗುಂಡಿಕ್ಕಿ ಹತ್ಯೆ ಪ್ರಕರಣ-ದರೋಡೆಕೋರರ ಕೃತ್ಯ ಎಂದ ಪತಿ ಪೊಲೀಸ್ ಬಲೆಗೆ

ರಾಂಚಿ:ಡಿ 29 . ಗುಂಡೇಟಿಗೆ ನಿನ್ನೆ ಬಲಿಯಾಗಿದ್ದ ಜಾರ್ಖಂಡ್ ನಟಿ ರಿಯಾ ಕುಮಾರಿ ಹತ್ಯೆ ಪ್ರಕರಣಕ್ಕೆ ಇದೀಗ ಸ್ಪೋಟಕ ತಿರುವು ಸಿಕ್ಕಿದ್ದು, ರಿಯಾ ಪತಿಯನ್ನೇ ಪೊಲೀಸರು ಗುರುವಾರ ಬಂಧಿಸಿದ್ದಾರೆ.ರಿಯಾ

ಕುಮಾರಿ ಅವರ ಪತಿ ಪ್ರಕಾಶ್‌ಕುಮಾರ್‍ ಬಂಧಿತರು. ಪಶ್ಚಿಮ ಬಂಗಾಳದ ಹೌರಾದಲ್ಲಿ ರಾಂಚಿಯಿಂದ ಕೋಲ್ಕತ್ತಕ್ಕೆ ತೆರಳುವ ಮಾರ್ಗದಲ್ಲಿ ರಿಯಾಕುಮಾರಿ ನಿನ್ನೆ ಗುಂಡೇಟಿಗೆ ಬಲಿಯಾಗಿದ್ದರು. ಬಳಿಕ ಅವರ ಪತಿ ಪ್ರಕಾಶ್‌ರಾಜ್ ದರೋಡೆಕಾರರು ಗುಂಡು ಹೊಡೆದಿದ್ದಾರೆಂದು ಪೊಲೀಸರೆದುರು ಹೇಳಿಕೊಂಡಿದ್ದರು. ಆದರೆ ಅವರ ಹೇಳಿಕೆಯಲ್ಲಿ ಅನುಮಾನ ವ್ಯಕ್ತವಾದ ಹಿನ್ನೆಲೆಯಲ್ಲಿ ಅವರನ್ನು ಇಂದು ಪೊಲೀಸರು ಬಂಧಿಸಿದ್ದಾರೆ. ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

ಬುಧವಾರ ಬೆಳಗ್ಗೆ 6 ಗಂಟೆ ಸುಮಾರಿಗೆ ರಾಂಚಿಯಿಂದ ಕೋಲ್ಕತ್ತಕ್ಕೆ ತೆರಳುವ ಮಾರ್ಗದಲ್ಲಿ ರಿಯಾರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಶೌಚಕ್ಕೆಂದು ಕಾರು ನಿಲ್ಲಿಸಿ ಹೋದಾಗ ದರೋಡೆಕೋರರು ರಿಯಾ ಬಳಿ ಬಂದು ದರೋಡೆಗೆ ಯತ್ನಿಸಿದರು. ಆ ವೇಳೆ ಆಕೆ ಪ್ರತಿರೋಧ ಒಡ್ಡಿದಾಗ ಆಕೆಗೆ ಗುಂಡು ಹಾರಿಸಿ ಹತ್ಯೆಗೈದಿದ್ದಾರೆ ಎಂದು ಪತಿ ಪ್ರಕಾಶ್ ರಾಜ್ ದೂರು ದಾಖಲಿಸಿದ್ದರು.

No Comments

Leave A Comment