Log In
BREAKING NEWS >
ಉಡುಪಿ ನಗರದಲ್ಲಿನ ಗ್ರಾಹಕರ ಅಚ್ಚುಮೆಚ್ಚಿನ ಪ್ರಸಿದ್ಧ ಜವಳಿಮಳಿಗೆಯಾದ "ಕಲ್ಸ೦ಕ ಗಿರಿಜಾ ಸಿಲ್ಕ್"ನಲ್ಲಿ ಗ್ರಾಹಕರಿಗಾಗಿ ಜೂನ್ 1ರಿ೦ದ ಮಳೆಗಾಲದ ಮಹೋನ್ನತ ಭಾರೀ ರಿಯಾಯಿತಿ ದರದಲ್ಲಿ ವಸ್ತ್ರಗಳ ಮಾರಾಟ ಆರ೦ಭ.

ಫಿಲಿಪೈನ್ಸ್‌ನಲ್ಲಿ ಭಾರಿ ಮಳೆ: ಪ್ರವಾಹದಿಂದಾಗಿ 32 ಮಂದಿ ಸಾವು, 24 ಜನರು ನಾಪತ್ತೆ

ಮನಿಲಾ: ಕ್ರಿಸ್‌ಮಸ್ ವಾರಾಂತ್ಯದಲ್ಲಿ ಫಿಲಿಪೈನ್ಸ್‌ನ ಕೆಲವು ಭಾಗಗಳಲ್ಲಿ ತೀವ್ರ ಮಳೆಯಾಗುತ್ತಿದ್ದು, ಭಾರಿಯಿಂದಾಗಿ ಉಂಟಾಗಿರುವ ಪ್ರವಾಹದಿಂದ ಕನಿಷ್ಠ 32 ಮಂದಿ ಸಾವಿಗೀಡಾಗಿದ್ದಾರೆ ಮತ್ತು 24 ಮಂದಿ ಕಾಣೆಯಾಗಿದ್ದಾರೆ ಎಂದು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಸಂಸ್ಥೆ ಗುರುವಾರ ತಿಳಿಸಿದೆ.

ಪೂರ್ವ, ಮಧ್ಯ ಮತ್ತು ದಕ್ಷಿಣ ಫಿಲಿಪೈನ್ಸ್‌ನಲ್ಲಿ ಹವಾಮಾನ ವೈಪರಿತ್ಯದಿಂದಾಗಿ ಕ್ರಿಸ್‌ಮಸ್‌ ಆಚರಣೆಗೆ ಅಡ್ಡಿಯುಂಟಾಗಿದ್ದು, ಮಳೆಯಿಂದಾಗಿ 56,000ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ.

ಮಿಸಾಮಿಸ್ ಆಕ್ಸಿಡೆಂಟಲ್‌ನ ದಕ್ಷಿಣ ಪ್ರಾಂತ್ಯದಲ್ಲಿನ ಫೋಟೊಗಳಲ್ಲಿ, ರಕ್ಷಣಾ ಕಾರ್ಯಾಚರಣೆ ನಡೆಸುತ್ತಿರುವ ತಂಡವು ವಯಸ್ಸಾದ ಮಹಿಳೆಯನ್ನು ಪ್ಲಾಸ್ಟಿಕ್ ಕುರ್ಚಿಯ ಮೇಲೆ ಕೂರಿಸಿ ಹೊತ್ತುಕೊಂಡು ಪ್ರವಾಹಕ್ಕೆ ಸಿಲುಕಿದ ಬೀದಿಯಲ್ಲಿ ಸಾಗುತ್ತಿರುವುದನ್ನು ಕಾಣಬಹುದು.

ಕರಾವಳಿ ಕಾವಲು ಪಡೆಯು ಹಗ್ಗವನ್ನು ಬಳಸಿ ಎದೆಯ ಆಳದ ಪ್ರವಾಹಕ್ಕೆ ಅಡ್ಡಲಾಗಿ ಎಳೆದು ಪ್ರಾಂತ್ಯದ ಕೆಲವು ನಿವಾಸಿಗಳನ್ನು ರಕ್ಷಿಸುತ್ತಿರುವುದು ಕಂಡುಬಂದಿದೆ.

ಸಾವಿಗೀಡಾದ 32 ಮಂದಿಯಲ್ಲಿ 18 ಮಂದಿ ಉತ್ತರ ಮಿಂಡಾನಾವೊ ಪ್ರದೇಶದಲ್ಲಿ ವರದಿಯಾಗಿವೆ. ನಾಪತ್ತೆಯಾಗಿರುವ 24 ಮಂದಿಯ ಪೈಕಿ 22 ಜನ ಮಧ್ಯ ಫಿಲಿಪೈನ್ಸ್ ಮತ್ತು ಪೂರ್ವ ಬಿಕೋಲ್ ಪ್ರದೇಶದ ವಿಸಾಯಾಸ್‌ನಿಂದ ಬಂದವರು ಎಂದು ರಾಷ್ಟ್ರೀಯ ವಿಪತ್ತು ಅಪಾಯ ಕಡಿತ ಮತ್ತು ನಿರ್ವಹಣಾ ಮಂಡಳಿ ತಿಳಿಸಿದೆ.

ಹೆಚ್ಚಿನ ಸಾವುಗಳು ಪ್ರವಾಹದಲ್ಲಿ ಮುಳುಗುವಿಕೆಯಿಂದ ಸಂಭವಿಸಿದ್ದು, ನಾಪತ್ತೆಯಾದವರಲ್ಲಿ ದೋಣಿಗಳು ಮುಳುಗಿದ ಮೀನುಗಾರರು ಎಂದು ಸಂಸ್ಥೆ ತಿಳಿಸಿದೆ.

ರಸ್ತೆಗಳು ಮತ್ತು ಸೇತುವೆಗಳ ಜೊತೆಗೆ 4,000 ಕ್ಕೂ ಹೆಚ್ಚು ಮನೆಗಳು ಪ್ರವಾಹದಿಂದ ಹಾನಿಗೊಳಗಾಗಿವೆ ಮತ್ತು ಕೆಲವು ಪ್ರದೇಶಗಳಲ್ಲಿ ವಿದ್ಯುತ್ ಅಥವಾ ನೀರಿನ ಸಂಪರ್ಕ ಕಡಿತಗೊಂಡಿದೆ ಎಂದು ಸಂಸ್ಥೆ ವರದಿ ಮಾಡಿದೆ.

‘ಬೆಚ್ಚಗಿನ ಮತ್ತು ತಣ್ಣನೆಯ ಗಾಳಿಯು ಸಂಧಿಸುವ ಬಿಂದು’ವಿನ ಶಿಯರ್ ರೇಖೆಯು ದೇಶದ ಕೆಲವು ಭಾಗಗಳಲ್ಲಿ ಮಳೆಗೆ ಕಾರಣವಾಯಿತು. ಪ್ರವಾಹದಿಂದ ಪೀಡಿತವಾಗಿರುವ ಕೆಲವು ಪ್ರದೇಶಗಳಲ್ಲಿ ಮುಂದಿನ 24 ಗಂಟೆಗಳಲ್ಲಿ ಲಘುವಾರಿ ಭಾರಿ ಮಳೆಯಾಗಲಿದೆ ಎಂದು ರಾಜ್ಯ ಹವಾಮಾನ ಬ್ಯೂರೋ ಹೇಳಿದೆ.

No Comments

Leave A Comment