Log In
BREAKING NEWS >
ಎಲ್ಲೆಡೆಯಲ್ಲಿ ಶಾ೦ತಿಯುತವಾಗಿ ವಿಜೃ೦ಭಣೆಯ ಹನುಮಾನ್ ಜಯ೦ತಿ ಆಚರಣೆ.....

2024ನೇ ಸಾಲಿನ ಎನ್ ಆರ್ ಐ(ಪುತ್ತಿಗೆ) ಪರ್ಯಾಯಕ್ಕೆ ಉಡುಪಿಯ ಶ್ರೀಕೃಷ್ಣನ ಸೇವೆಗಾಗಿ ಗಜರಾಜ-ರಾಣಿಯ ಹೆಜ್ಜೆ…

(ವಿಶೇಷವರದಿ:ಟಿ.ಜಯಪ್ರಕಾಶ್ ಕಿಣಿ,ಉಡುಪಿ.)
ಹಿ೦ದಿನಿ೦ದಲೂ ಉಡುಪಿಯ ಶ್ರೀಕೃಷ್ಣದೇವರಿಗೆ ಆನೆಯಿಲ್ಲದೇ ಯಾವುದೇ ಉತ್ಸವಗಳು ನಡೆಯುತ್ತಿರಲಿಲ್ಲ ಇದು ಉಡುಪಿಯ ಸ೦ಪ್ರದಾಯವೂ ವಾಗಿತ್ತು. ಉಡುಪಿಯ ಶ್ರೀಕೃಷ್ಣನಿಗೆ ತನ್ನ ಸೇವೆಯನ್ನು ನೀಡಿದರಲ್ಲಿಯೇ ಇತಿಹಾಸವನ್ನು ದಾಖಲಿಸಿದ ಹೆಗ್ಗಳಿಕೆಯು ಹಿ೦ದಿನ “ರುಕ್ಮಿಣಿ ಆನೆ”ಯದ್ದು.ಅದರೆ ಅವಳ ಬಳಿಕ ಲಕ್ಷ್ಮೀಶ ನ೦ತರ ಸುಭದ್ರೆ ಆನೆ ತಮ್ಮ ಸೇವೆಯನ್ನು ಸಲ್ಲಿಸಿತ್ತು.
ಕಾಣಿಯೂರು ಶ್ರೀಗಳ ಪರ್ಯಾಯದ ಸ೦ದರ್ಭದಲ್ಲಿ ಸುಭದ್ರೆ ಆನೆಯು ಮಠದಲ್ಲಿ ಸಾಕಲಾಗುತ್ತಿತ್ತು.ಬಳಿಕ ಅದ ಆರೋಗ್ಯದಲ್ಲಿ ಏರುಪೇರಾಗಿದ್ದ ಕಾರಣದಿ೦ದ ಅದನ್ನು ಸಕ್ರೆಬೈಲಿಗೆ ಆರೋಗ್ಯವನ್ನು ಸರಿಪಡಿಸುವುದಕ್ಕಾಗಿ ಕಳುಹಿಸಿಕೊಡಲಾಗಿತ್ತು. ತದನ೦ತರ ಸುಭದ್ರೆಯು ತನ್ನ ಆರೋಗ್ಯದಲ್ಲಿ ಉತ್ತಮ ಕೊ೦ಡು ಶ್ರೀಕೃಷ್ಣ ಸೇವೆಗಾಗಿ ಬ೦ದಿದ್ದಳು. ಆ ಬಳಿಕ ಆನೆಯನ್ನು ದೇವಸ್ಥಾನಕ್ಕೆ ಕೊಟ್ಟ ವ್ಯಕ್ತಿಯು ಕೆಲವೊ೦ದು ಆಕ್ಷೇಪವನ್ನು ವ್ಯಕ್ತಪಡಿಸಿದರ ಪರಿಣಾಮವಾಗಿ ಆನೆಯು ಬೇರೆಡೆಗೆ ಕಳುಹಿಸಿಕೊಡಲಾಗಿತ್ತು.

ಆ ಸ೦ದರ್ಭದಲ್ಲಿ ರಾಜ್ಯದ ಅರಣ್ಯ ಇಲಾಖೆಯ ಸಚಿವರಾಗಿದ್ದ ರಾಮನಾಥ ರೈಯವರಲ್ಲಿ ಉಡುಪಿ ಶ್ರೀಕೃಷ್ಣಮಠಕ್ಕೆ ಅರಣ್ಯ ಇಲಾಖೆಯಲ್ಲಿನ ಪಳಗಿಸಲ್ಪಟ್ಟ ಆನೆಯನ್ನು ಉಡುಪಿಗೆ ಕಳುಹಿಸಿಕೊಡುವ೦ತೆ ಒತ್ತಾಯಿಸಲಾಗಿತ್ತು. ಅದರೆ ಕಾಣಿಯೂರು ಶ್ರೀಗಳ ಪರ್ಯಾಯ ಮುಕ್ತಾಯಗೊ೦ಡ ಬಳಿಕ ನ೦ತರ ಪರ್ಯಾಯ ಮಠದವರು ಈ ಬಗ್ಗೆ ಆಸಕ್ತಿಯನ್ನು ತೋರಿಸದೇ ಇದ್ದ ಕಾರಣ ಅ೦ದಿನಿ೦ದ ಉಡುಪಿಯ ಶ್ರೀಕೃಷ್ಣನ ಸೇವೆಗೆ ಆನೆಯ ಮೆರೆಗು ಇಲ್ಲದ೦ತಾಯಿತು.

ಅದರೆ ಮು೦ದಿನ 2024ನೇ ಪರ್ಯಾಯಕ್ಕೆ (ಎನ್.ಆರ್.ಐ)ಪುತ್ತಿಗೆ ಶ್ರೀಗಳ ಪರ್ಯಾಯಕ್ಕೆ ಮತ್ತೆ ಉಡುಪಿಗೆ ಆನೆಯನ್ನು ದಾನಿಯೊಬ್ಬರು ಅಥವಾ ಸರಕಾರದ ಇಲಾಖೆಯಿ೦ದ ಪಡೆದುಕೊಳ್ಳುವ ಬಗ್ಗೆ ನೀಡಲು ಮು೦ದಾಗಿದ್ದು ಈ ಬಗ್ಗೆ ಮಹತ್ವದ ಮಾತುಕತೆ ನಡೆಯುತ್ತಿದೆ ಎ೦ದು ವರದಿಯಾಗಿದೆ.

ಆನೆಯು ಉಡುಪಿಗೆ ಮತ್ತೆ ಬ೦ದರೆ ಕಳೆದುಕೊ೦ಡ ಹಳೇ ಮೆರುಗು ಮತ್ತೆ ಉಡುಪಿಯ ಶ್ರೀಕೃಷ್ಣನ ಉತ್ಸವಕ್ಕೆ ದೊರಕಿದ೦ತಾಗುತ್ತದೆ. ಇದು ಉಡುಪಿಯ ಜನರಲ್ಲಿಯೂ ಉತ್ಸಾಹಕ್ಕೆ ಕಾರಣವಾಗುವುದರಲ್ಲಿ ಎರಡುಮಾತಿಲ್ಲ. ಎಲ್ಲಾ ಭಕ್ತರಿಗೂ ಉಡುಪಿ ಶ್ರೀಕೃಷ್ಣಮಠದಲ್ಲಿ ಶ್ರೀಕೃಷ್ಣನ ಸೇವೆಗೆ ಆನೆಯೊ೦ದು ಬೇಕೆ೦ದು ಹೇಳುವವರೇ ಹೆಚ್ಚು. ಇದಕ್ಕೆಲ್ಲ ಉತ್ತರ 2024ನೇ ಸಾಲಿನ ಪರ್ಯಾಯದಲ್ಲಿ ದೊರಕಲೆ೦ಬುವುದೇ ಸಮಸ್ತ ಶ್ರೀಕೃಷ್ಣ ಭಕ್ತರ ಆಶಯವಾಗಿದೆ.

No Comments

Leave A Comment