Log In
BREAKING NEWS >
ಉಡುಪಿ ನಗರದಲ್ಲಿನ ಗ್ರಾಹಕರ ಅಚ್ಚುಮೆಚ್ಚಿನ ಪ್ರಸಿದ್ಧ ಜವಳಿಮಳಿಗೆಯಾದ "ಕಲ್ಸ೦ಕ ಗಿರಿಜಾ ಸಿಲ್ಕ್"ನಲ್ಲಿ ಗ್ರಾಹಕರಿಗಾಗಿ ಜೂನ್ 1ರಿ೦ದ ಮಳೆಗಾಲದ ಮಹೋನ್ನತ ಭಾರೀ ರಿಯಾಯಿತಿ ದರದಲ್ಲಿ ವಸ್ತ್ರಗಳ ಮಾರಾಟ ಆರ೦ಭ.

ಚಂಡಮಾರುತಕ್ಕೆ ಅಮೆರಿಕ ತತ್ತರ: ಮಳೆ, ಹಿಮ, ಶೀತದಿಂದಾಗಿ 18 ಜನರು ಸಾವು, ವಿವಿಧೆಡೆ ವಿದ್ಯುತ್ ಸಂಪರ್ಕ ಕಡಿತ

ಬಫಲೋ: ಚಳಿಗಾಲದ ಚಂಡಮಾರುತದ ಆರ್ಭಟಕ್ಕೆ ಅಮೆರಿಕ ತತ್ತರಿಸಿದ್ದು, ದೇಶದಾದ್ಯಂತ ಕನಿಷ್ಠ 18 ಜನರನ್ನು ಬಲಿ ಪಡೆದಿದೆ. ನೂರಾರು ಸಾವಿರ ಮನೆಗಳು ಮತ್ತು ವ್ಯವಹಾರಗಳಿಗೆ ವಿದ್ಯುತ್ ಸಂಪರ್ಕ ಇಲ್ಲದಂತಾಗಿದೆ. ಬಿರುಗಾಳಿಗೆ ಲಕ್ಷಾಂತರ ಜನರು ಮನೆಯಿಂದ ಹೊರಗೆ ಬಾರದಂತಾಗಿದೆ. ಗಡಗಡ ನಡುಗುವ ಚಳಿ, ಭಾರಿ ಬಿರುಗಾಳಿ ಮಳೆಯಿಂದ ತತ್ತರಿಸಿರುವ ಜನರಿಗೆ ಕ್ರಿಸ್‌ಮಸ್ ಹಾಗೂ ಹೊಸ ವರ್ಷದ ಸಂಭ್ರಮಕ್ಕೆ ಅಡ್ಡಿಯಾಗಿದೆ.

ನ್ಯೂಯಾರ್ಕ್‌ನ ಬಫಲೋ ಚಂಡಮಾರುತದ ದಾಳಿಗೆ ತುತ್ತಾಗಿದ್ದು, ತುರ್ತು ರಕ್ಷಣಾ ಕಾರ್ಯಾಚರಣೆಗೂ ಕೂಡ ತಡೆಯುಂಟುಮಾಡಿದೆ. ನಗರದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಮುಚ್ಚಲಾಗಿದೆ.

14 ಲಕ್ಷಕ್ಕೂ ಹೆಚ್ಚಿನ ಮನೆಗಳು ಮತ್ತು ಉದ್ಯಮಗಳು ಬಾಂಬ್ ಸೈಕ್ಲೋನ್ ಕಾರಣದಿಂದಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಸಂಪರ್ಕ ಕಡಿತ, ವಿದ್ಯುತ್ ಅಭಾವ ಮತ್ತು ತಾಪಮಾನ ಕುಸಿತ ಜನರನ್ನು ಕಂಗಾಲಾಗಿಸಿದೆ. ಭಾರಿ ವೇಗವಾಗಿ ಬೀಸುತ್ತಿರುವ ಗಾಳಿಯು ಮರಗಳು ಹಾಗೂ ವಿದ್ಯುತ್ ಕಂಬಗಳನ್ನು ಧರೆಗುರುಳಿಸಿದೆ.

ಅಮೆರಿಕದಾದ್ಯಂತ, ಕಾರು ಅಪಘಾತಗಳು, ಮರಗಳು ಧರೆಗುರುಳಿರುವುದು ಮತ್ತು ಚಂಡಮಾರುತದಿಂದಾಗಿ ಉಂಟಾದ ಇತರ ಪರಿಣಾಮಗಳಿಂದ ಹಲವು ಜನರು ಸಾವಿಗೀಡಾಗಿದ್ದಾರೆ. ಬಫಲೋ ಪ್ರದೇಶದಲ್ಲಿ ಕನಿಷ್ಠ ಮೂರು ಜನರು ಸಾವಿಗೀಡಾದರೆ, ಇಬ್ಬರು ತಮ್ಮ ಮನೆಗಳಲ್ಲಿಯೇ ವೈದ್ಯಕೀಯ ತುರ್ತುಸ್ಥಿತಿಗಳನ್ನು ಎದುರಿಸಿದರು ಮತ್ತು ಐತಿಹಾಸಿಕ ಹಿಮಪಾತದ ಪರಿಸ್ಥಿತಿಗಳ ನಡುವೆ ತುರ್ತು ಸಿಬ್ಬಂದಿ ಅವರನ್ನು ತಲುಪಲು ಸಾಧ್ಯವಾಗದ ಕಾರಣ ಅವರು ಮೃತಪಟ್ಟಿದ್ದಾರೆ.

ದಾಖಲೆ ಮಟ್ಟದಲ್ಲಿ ಬೀಳುತ್ತಿರುವ ಹಿಮ, ಕಡಿಮೆ ತಾಪಮಾನ ಮತ್ತು ವಿದ್ಯುತ್ ಸಂಪರ್ಕ ಕಡಿತವು ಬಫಲೋ ನಿವಾಸಿಗಳನ್ನು ಶನಿವಾರ ಪರದಾಡುವಂತೆ ಮಾಡಿತು.

ನ್ಯೂಯಾರ್ಕ್ ಗವರ್ನರ್ ಕ್ಯಾಥಿ ಹೊಚುಲ್ ಮಾತನಾಡಿ, ಬಫಲೋ ನಯಾಗರಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸೋಮವಾರ ಬೆಳಿಗ್ಗೆಯವರೆಗೆ ಮುಚ್ಚಲಾಗುವುದು ಮತ್ತು ನಗರದ ಪ್ರತಿಯೊಂದು ಅಗ್ನಿಶಾಮಕ ಟ್ರಕ್ ಹಿಮದಲ್ಲಿ ಸಿಲುಕಿಕೊಂಡಿವೆ ಎಂದು ತಿಳಿಸಿದರು.

ನಾವು ಎಷ್ಟೇ ತುರ್ತು ವಾಹನಗಳನ್ನು ಹೊಂದಿದ್ದರೂ, ಹೆಚ್ಚಿನ ಹಿಮದಿಂದಾಗಿ ಪರಿಸ್ಥಿತಿಯನ್ನು ದಾಟಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.

ಹಿಮಪಾತ, ಹೆಪ್ಪುಗಟ್ಟುವ ಮಳೆ ಮತ್ತು ತಣ್ಣನೆಯ ಚಳಿಯು ಮೈನೆಯಿಂದ ಸಿಯಾಟಲ್‌ವರೆಗಿನ ಸ್ಥಳಗಳಲ್ಲಿ ವಿದ್ಯುತ್ ಸಂಪರ್ಕವನ್ನು ಹೊಡೆದುರುಳಿಸಿದೆ. ಆದರೆ ಪ್ರಮುಖ ವಿದ್ಯುತ್ ಗ್ರಿಡ್ ಆಪರೇಟರ್ ಪೂರ್ವ ಅಮೆರಿಕದಾದ್ಯಂತ 65 ಮಿಲಿಯನ್ ಜನರಿಗೆ ಅನಿಮಿಯತ ಅವಧಿಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸುವ ಅಗತ್ಯವಿದೆ ಎಂದು ಎಚ್ಚರಿಸಿದ್ದಾರೆ.

ಆರು ನ್ಯೂ ಇಂಗ್ಲೆಂಡ್ ರಾಜ್ಯಗಳಾದ್ಯಂತ, ಶನಿವಾರದಂದು 2,73,000ಕ್ಕೂ ಹೆಚ್ಚು ಗ್ರಾಹಕರು ವಿದ್ಯುತ್ ಇಲ್ಲದೆ ಪರದಾಡಿದ್ದಾರೆ. ಮೈನೆಗೆ ಹೆಚ್ಚು ಹಾನಿಯಾಗಿದೆ. ಉತ್ತರ ಕರೊಲಿನಾದಲ್ಲಿ, ಮಧ್ಯಾಹ್ನದ ವೇಳೆಗೆ 1,69,000 ಗ್ರಾಹಕರು ವಿದ್ಯುತ್ ಇಲ್ಲದೆ ಇದ್ದರು. ಇದು 485,000ಕ್ಕಿಂತ ಹೆಚ್ಚು ಗರಿಷ್ಠವಾಗಿದೆ. ಮುಂದಿನ ಕೆಲವು ದಿನಗಳವರೆಗೆ ಇದೇ ಪರಿಸ್ಥಿತಿ ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

No Comments

Leave A Comment