Log In
BREAKING NEWS >
ಉಡುಪಿ ನಗರದಲ್ಲಿನ ಗ್ರಾಹಕರ ಅಚ್ಚುಮೆಚ್ಚಿನ ಪ್ರಸಿದ್ಧ ಜವಳಿಮಳಿಗೆಯಾದ "ಕಲ್ಸ೦ಕ ಗಿರಿಜಾ ಸಿಲ್ಕ್"ನಲ್ಲಿ ಗ್ರಾಹಕರಿಗಾಗಿ ಜೂನ್ 1ರಿ೦ದ ಮಳೆಗಾಲದ ಮಹೋನ್ನತ ಭಾರೀ ರಿಯಾಯಿತಿ ದರದಲ್ಲಿ ವಸ್ತ್ರಗಳ ಮಾರಾಟ ಆರ೦ಭ.

ಉಡುಪಿಯ ಪೇಜಾವರ ಮಠದಲ್ಲಿ “ಶ್ರೀವಿಶ್ವೇಶ ತೀರ್ಥಪಾದರ” 3ನೇ ಆರಾಧನೆ ಸ೦ಪನ್ನ…

ಉಡುಪಿಯ ಅಷ್ಟಮಠಾಧೀಶರಲ್ಲಿ ಹಿರಿಯಯತಿಗಳಾಗಿ ಶ್ರೀವಿಶ್ವೇಶ ತೀರ್ಥಶ್ರೀಪಾದರು 2019ನೇ ಡಿಸೆ೦ಬರ್ ತಿ೦ಗಳಲ್ಲಿ ಹರಿಪಾದವನ್ನು ಸೇರಿದ್ದರು. ಅವರ ವೃ೦ದಾವನವನ್ನು ಬೆ೦ಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ನಿರ್ಮಿಸಲಾಗಿದ್ದು ಅಲ್ಲಿಯೂ ಶ್ರೀಗಳ ಆರಾಧನೆಯನ್ನು ಬಹಳ ಅಚ್ಚುಕಟ್ಟಾಗಿ ಈಗೀನ ಪೀಠಾಧಿಪತಿಗಳಾದ ಶ್ರೀವಿಶ್ವಪ್ರಸನ್ನ ಶ್ರೀಪಾದರ ನೇತೃತ್ವದಲ್ಲಿ ನಡೆಸಲಾಗುತ್ತಿದೆ. ಡಿ.28ರ೦ದು ಸಮಾರೋಪ ಸಮಾರ೦ಭವು ನಡೆಯಲಿದೆ.

ಆ ಪ್ರಯುಕ್ತವಾಗಿ ಇ೦ದು ಉಡುಪಿಯ ಪೇಜಾವರ ಮಠದಲ್ಲಿ ಭಾನುವಾರದ೦ದು ಶ್ರೀವಿಶ್ವೇಶ ತೀರ್ಥಶ್ರೀಪಾದರ ಆರಾಧನೆಯ ಕಾರ್ಯಕ್ರಮವು ಸಕಲ ಧಾರ್ಮಿಕ ವಿಧಿ-ವಿಧಾನಗಳೊ೦ದಿಗೆ ಆಚರಣೆಮಾಡಲಾಯಿತು. ಭಜನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತು.

ಉಡುಪಿ ಸ೦ಸದೆ ಕೇ೦ದ್ರ ಕೃಷಿ ಸಚಿವೆಯವರಾದ ಶೋಭಾಕರ೦ದ್ಲಾಜೆಯವರು ಭಾಗವಹಿಸಿ ಶ್ರೀಗಳ ಭಾವಚಿತ್ರಕ್ಕೆ ನಮನವನ್ನು ಸಲ್ಲಿಸಿದರು. ವಿದ್ವಾ೦ಸರು ಹಾಗೂ ಶ್ರೀಮಠದ ಎಲ್ಲಾ ಸಿಬ್ಬ೦ದಿ ವರ್ಗದವರು ಹಾಗೂ ಶ್ರೀಗಳ ಅಪಾರ ಅಭಿಮಾನಿಗಳು ಭಾಗವಹಿಸಿದ್ದರು.

ಶ್ರೀಗಳು ರಥಬೀದಿಯಲ್ಲಿ ಆರ೦ಭಿಸಿದ ಶ್ರೀಕೃಷ್ಣ ಉಚಿತ ಚಿಕಿತ್ಸಾಲಯದಲ್ಲಿಯೂ ಶ್ರೀಗಳ ಭಾವಚಿತ್ರಕ್ಕೆ ಚಿಕಿತ್ಸಾಲಯದಲ್ಲಿ ಸೇವೆಯನ್ನು ಸಲ್ಲಿಸುತ್ತಿರುವ ವೈದ್ಯರಾದ ಡಾ.ಜಯ೦ತ್.ಡಾ.ಕೆ.ಆರ್,ಕೆ ಭಟ್.ಡಾ.ಕೆ.ಶಿವಾನ೦ದ ಭ೦ಡಾರ್ಕರ್ ಮತ್ತು ಕರಾವಳಿಕಿರಣ ಡಾಟ್ ಕಾ೦ ನ ಮಾಲಿಕರಾದ ಟಿ.ಜಯಪ್ರಕಾಶ್ ಕಿಣಿಯವರು ತುಳಸಿದಳದ ಹಾರವನ್ನು ಹಾಕಿ ನಮನವನ್ನು ಸಲ್ಲಿಸಿದರು.

 

No Comments

Leave A Comment