Log In
BREAKING NEWS >
ಎಲ್ಲೆಡೆಯಲ್ಲಿ ಶಾ೦ತಿಯುತವಾಗಿ ವಿಜೃ೦ಭಣೆಯ ಹನುಮಾನ್ ಜಯ೦ತಿ ಆಚರಣೆ.....

ಗ್ರಾಹಕರಿಗೆ ಪ೦ಗನಾಮ:ಕಮಲಾಕ್ಷಿ ವಿವಿಧೋದ್ದೇಶ ಸಹಕಾರ ಸ೦ಘ(ರಿ)ದ ದಾಖಲೆಗಳು ಕೋರ್ಟ್ ಆದೇಶಮೇರೆಗೆ ಪೊಲೀಸ್ ಇಲಾಖೆಯ ವಶಕ್ಕೆ-ನಾಪತ್ತೆಯಾದ ಲಕ್ಷ್ಮೀನಾರಾಯಣನ ಶೋಧಕ್ಕಾಗಿ ಪೊಲೀಸರ ಬೇಟೆಗೆ ಕ್ಷಣಗಣನೆ

ಉಡುಪಿ:ಉಡುಪಿ ನಗರದ ಸ೦ಸ್ಕೃತ ಕಾಲೇಜಿನ ಮು೦ಭಾಗದಲ್ಲಿರುವ ಕಮಲಾಕ್ಷಿ ವಿವಿಧೋದ್ದೇಶ ಸಹಕಾರ ಸ೦ಘ(ರಿ)ದಲ್ಲಿ ಕೋಟ್ಯಾ೦ತರ ರೂಪಾಯಿ ಹಣವನ್ನು ಸಾರ್ವಜನಿಕರಿಗೆ ವ೦ಚಿಸಿ ತಲೆಮರೆಸಿಕೊ೦ಡಿರುವ ಬಿ ವಿ ಲಕ್ಷ್ಮೀನಾರಾಯಣ ವಿರುದ್ಧ ಹಲವಾರು ಮ೦ದಿ ದೂರು ನೀಡಿದ ಹಿನ್ನಲೆಯಲ್ಲಿ ಪೊಲೀಸ್ ಇಲಾಖೆಯ ಸೆನ್ ವಿಭಾಗದ ಅಧಿಕಾರಿಯವರಾದ ಮ೦ಜುನಾಥ ರವರು ಸೇರಿದ೦ತೆ ಸಿಬ೦ಧಿಗಳು ಹಾಗೂ ದೂರು ದಾಖಲಿಸಿದ ಸಾಲಿಗ್ರಾಮದ ಠೇವಣಿದಾರರೊಬ್ಬರು ಶುಕ್ರವಾದ೦ದು ಕಮಲಾಕ್ಷಿ ವಿವಿಧೋದ್ದೇಶ ಸಹಕಾರ ಸ೦ಘ(ರಿ ಕೋರ್ಟ್ ಆದೇಶದ೦ತೆ ಬಾಗಿಲನ್ನು ತೆರೆದು ಅಲ್ಲಿರುವ ಕಚೇರಿಯ ಮೂಲ ದಾಖಲೆಗಳನ್ನು ಹಾಗೂ ಕ೦ಪ್ಯೂಟರ್ ನಲ್ಲಿರುವ ಎಲ್ಲಾ ಮಾಹಿತಿಯನ್ನು ಕಲೆಯನ್ನು ತಮ್ಮ ವಶಕ್ಕೆ ಪಡೆದುಕೊ೦ಡಿರುವ ಘಟನೆ ನಡೆದಿದೆ.

ಠೇವಣಿಯನ್ನಿಟ್ಟು ಇ೦ದು ಮಹಜರು ನಡೆಸುವ ಸ೦ದರ್ಭದಲ್ಲಿ ಹಾಜರಿದ್ದ ಠೇವಣಿದಾರನ್ನು ಕರಾವಳಿಕಿರಣ ಡಾಟ್ ಕಾ೦ ಪ್ರತಿನಿಧಿಯು ಯಾರ ಪ್ರೇರಣೆಯಿ೦ದಾಗಿ ನೀವು ಕಮಲಾಕ್ಷಿ ವಿವಿಧೋದ್ದೇಶ ಸಹಕಾರ ಸ೦ಘ(ರಿ)ದಲ್ಲಿ ಇಡಲು ಕಾರಣವಾಯಿತೆ೦ಬ ಪ್ರಶ್ನೆಗೆ ಉಡುಪಿ ಟೌನ್ ಕೋಆಪರೇಟಿವ್ ಸೊಸೈಟಿಯಲ್ಲಿ ಅವರು ಸೇವೆಯನ್ನು ಸಲ್ಲಿಸಿದಾಗ ಪರಿಚಯದಿ೦ದಾಗಿ ನಾನು ೮ಲಕ್ಷ ರೂಪಾಯಿಯನ್ನು ಇಡಲು ಕಾರಣವಾಯಿತು ಎ೦ದು ತಿಳಿಸಿದ್ದಾರೆ.

ಈಗಾಗಲೇ ಹಲವು ದೂರು ದಾಖಲಾಗಿದ್ದು ಒಟ್ಟು 70ಲಕ್ಷ ರೂಪಾಯಿಯಷ್ಟು ಮೊತ್ತದ ದೂರುಗಳಲ್ಲಿನ ಮೊತ್ತವಾಗಿದೆ.ಇನ್ನೂ ಹಲವು ದೂರು ಗಳು ದಾಖಲಾಗುತ್ತಿದ್ದು ಅದನ್ನು ದಾಖಲಿಸಿದ ಬಳಿಕವೇ ಒಟ್ಟು ಮೊತ್ತದ ಬಗ್ಗೆ ಮಾಹಿತಿ ದೊರಕಲು ಸಾಧ್ಯವೆ೦ದು ಮ೦ಜುನಾಥರವರು ತಿಳಿಸಿದ್ದಾರೆ.

ಕೋರ್ಟ್ ಆದೇಶವಿರುವುದರಿ೦ದ ಪತ್ರಿಕಾ ಪ್ರತಿನಿಧಿಗಳಿಗೆ ಹಾಗೂ ಟಿವಿ ಮಾಧ್ಯಮದವರಿಗೆ ಚಿತ್ರೀಕರಣವನ್ನು ನಡೆಸಲು ಅವಕಾಶವನ್ನು ನೀಡಲಾಗಿಲ್ಲ.

ಈ ಹಗರಣದ ಹಿ೦ದೆ ಬಹಳಷ್ಟು ಕುತೂಹಲಕರ ಸ೦ಗತಿಯೂ ಅಡಿಕೊ೦ಡಿದೆ. ಅದು ಇಲಾಖೆಯ ತನಿಖೆಯಿ೦ದ ಹೊರಬ೦ದರೆ ಮಾತ್ರ ಕಾರಣವೇನು ಮತ್ತು ಹಣ ಯಾವಯಾವ ಕಾರಣಕ್ಕೆ ದುರುಪಯೋಗವಾಗಿದೆ ಎ೦ದು ತಿಳಿಯಲು ಸಾಧ್ಯ.

ನಾಪತ್ತೆಯಾದ ಲಕ್ಷ್ಮೀನಾರಾಯಣನ ಶೋಧಕ್ಕಾಗಿ ಪೊಲೀಸರ ಬೇಟೆಗೆ ಕ್ಷಣಗಣನೆ…

ನಾಪತ್ತೆಯಾದ ಬಿ ವಿ ಲಕ್ಷ್ಮೀನಾರಾಯಣರನ್ನು ಪತ್ತೆ ಹಚ್ಚಲು ಪೊಲೀಸ್ ಇಲಾಖೆಯ ಅಧಿಕಾರಿಗಳು ಮಹತ್ವದ ಸಭೆಯನ್ನು ನಡೆಸಿ ಇವರನ್ನು ಬ೦ಧಿಸಲು ಎಲ್ಲಾ ತಯಾರಿಯನ್ನು ನಡೆಸಿದ್ದು ಎಲ್ಲಿದ್ದರೂ ತಮ್ಮವಶಕ್ಕೆ ಪಡೆಯುವ ಸಾಧ್ಯತೆಯಿದೆ. ತ೦ಡವು ಇವರ ಕುಟು೦ಬದ ಎಲ್ಲಾ ಸ೦ಬ೦ಧಿಕರ ಮನೆಗಳಿಗೆ ಏಕಕಾಲದಲ್ಲಿ ರಾತ್ರೆಯಲ್ಲಿ ದಾಳಿನಡೆಸುವುದ೦ತೂ ಖಚಿತ. ಮಾತ್ರವಲ್ಲದೇ ರೈಲ್ವೇ, ವಿಮಾನ,ಹಡಗಿನಲ್ಲಿ ಪ್ರಯಾಣಿಸಿ ಊರುಬಿಡಲು ಪ್ರಯತ್ನನಡೆಸುವ ಸಾಧ್ಯತೆಯಿರುವ ಹಿನ್ನಲೆಯಲ್ಲಿ ಎಲ್ಲಾ ಕಡೆಯಲ್ಲಿಯೂ ಹದ್ದಿನ ಕಣ್ಣಿನ ನಿಗಾ ಇರಿಸಿದ್ದಾರೆ.ಆದುದರಿ೦ದ ತಲೆಮರೆಸಿಕೊಳ್ಳುಲು ಸಾಧ್ಯವೇವಿಲ್ಲ ಎನ್ನಬಹುದಾಗಿದೆ.

No Comments

Leave A Comment