Log In
BREAKING NEWS >
ಉಡುಪಿ ನಗರದಲ್ಲಿನ ಗ್ರಾಹಕರ ಅಚ್ಚುಮೆಚ್ಚಿನ ಪ್ರಸಿದ್ಧ ಜವಳಿಮಳಿಗೆಯಾದ "ಕಲ್ಸ೦ಕ ಗಿರಿಜಾ ಸಿಲ್ಕ್"ನಲ್ಲಿ ಗ್ರಾಹಕರಿಗಾಗಿ ಜೂನ್ 1ರಿ೦ದ ಮಳೆಗಾಲದ ಮಹೋನ್ನತ ಭಾರೀ ರಿಯಾಯಿತಿ ದರದಲ್ಲಿ ವಸ್ತ್ರಗಳ ಮಾರಾಟ ಆರ೦ಭ.

2ನೇ ಟೆಸ್ಟ್: ಪಂತ್, ಅಯ್ಯರ್ ಅರ್ಧಶತಕ; 314 ರನ್ ಗಳಿಗೆ ಭಾರತ ಆಲೌಟ್, 87 ರನ್ ಮುನ್ನಡೆ!

ಮೀರ್ಪುರ್: ಅತಿಥೇಯ ಬಾಂಗ್ಲಾದೇಶ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಟೀಂ ಇಂಡಿಯಾ 314 ರನ್ ಗಳಿಗೆ ಆಲೌಟ್ ಆಗಿದ್ದು 87 ರನ್ ಗಳ ಮುನ್ನಡೆ ಸಾಧಿಸಿದೆ.

ಮೀರ್ಪುರದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನದಂತ್ಯಕ್ಕೆ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್ ನಲ್ಲಿ ಅಜೇಯ 19 ರನ್ ಪೇರಿಸಿತ್ತು. ಎರಡನೇ ದಿನದಾಟವನ್ನು ಆರಂಭಿಸಿದ ಕೆಎಲ್ ರಾಹುಲ್ 10 ರನ್ ಗಳಿಗೆ ಔಟಾದರು. ರಾಹುಲ್ ಬೆನ್ನಲ್ಲೇ 20 ರನ್ ಗಳಿಸಿದ್ದ ಶುಭ್ಮನ್ ಗಿಲ್ ಔಟಾದರು. ನಂತರ ಬಂದ ಚೇತೇಶ್ವರ ಪೂಜಾರ 24 ರನ್ ಗಳಿಸಿ ಔಟಾದರೆ ವಿರಾಟ್ ಕೊಹ್ಲಿ ಸಹ 24 ರನ್ ಗಳಿಗೆ ಔಟಾದರು.

ರಿಷಬ್ ಪಂತ್ 93 ಮತ್ತು ಶ್ರೇಯಸ್ ಅಯ್ಯರ್ 87 ರನ್ ಗಳ ಭಾರತ ಮುನ್ನಡೆ ಸಾಧಿಸಲು ಸಹಕಾರಿಯಾಯಿತು. ನಂತರ ಬಂದ ಬೌಲರ್ ಗಳು ಹೆಚ್ಚು ಸದ್ದು ಮಾಡಿಲ್ಲ. ಅಶ್ವಿನ್ 12, ಉಮೇಶ್ ಯಾದವ್ 14, ಮೊಹಮ್ಮದ್ ಸಿರಾಜ್ 7 ರನ್ ಪೇರಿಸಿದ್ದರೆ ಜಯದೇವ್ ಉನದ್ಕತ್ ಅಜೇಯ 14 ರನ್ ಬಾರಿಸಿದ್ದಾರೆ. ಬಾಂಗ್ಲಾ ಪರ ಶಕೀಬ್ ಅಲ್ ಹಸನ್ ಹಾಗೂ ತೈಜುಲ್ ಇಸ್ಲಾಂ ತಲಾ 4 ವಿಕೆಟ್ ಹಾಗೂ ತಸ್ಕಿನ್ ಅಹ್ಮದ್ ಮತ್ತು ಮೆಹದಿ ತಲಾ 1 ವಿಕೆಟ್ ಪಡೆದಿದ್ದಾರೆ.

ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಬಾಂಗ್ಲಾದೇಶ ಅಜೇಯ 7 ರನ್ ಪೇರಿಸಿದ್ದು ನಾಳೆ ಮೂರನೇ ದಿನದಾಟವನ್ನು ಆರಂಭಿಸಲಿದೆ.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಆರಂಭಿಸಿದ್ದ ಬಾಂಗ್ಲಾದೇಶಕ್ಕೆ ಭಾರತೀಯ ಬೌಲರ್ ಗಳು ಮಾರಕರಾಗಿದ್ದು 227 ರನ್ ಗಳಿಗೆ ಆಲೌಟ್ ಆಯಿತು. ಬಾಂಗ್ಲಾ ಬ್ಯಾಟರ್ ನಜ್ಮುಲ್ ಶಾಂಟೋರನ್ನು ಅಶ್ವಿನ್ 24 ರನ್ ಗಳಿಗೆ ಎಲ್ ಬಿಡಬ್ಲ್ಯೂ ಮಾಡಿದರು. ನಂತರ 15 ರನ್ ಗಳಿಸಿದ್ದ ಝಾಕೀರ್ ಹಸನ್ ರನ್ನು ಉನಾದ್ಕತ್ ಔಟ್ ಮಾಡಿದರು. ಈ ವೇಳೆ ಬಾಂಗ್ಲಾಗೆ ಆಸರೆಯಾಗಿದ್ದು ಮೊಮಿನೂಲ್ ಹಕ್ ಅಜೇಯ 84 ರನ್ ಪೇರಿಸಿದ್ದು ತಂಡ ಅಲ್ಪಮೊತ್ತಕ್ಕೆ ಆಲೌಟ್ ಆಗುವುದರಿಂದ ತಪ್ಪಿಸಿದರು. ಇನ್ನು ನಾಯಕ ಶಕೀಬ್ ಹಲ್ ಹಸನ್ 16, ಮುಷ್ಫಿಕರ್ ರಹೀಮ್ 26, ಲಿಟನ್ ದಾಸ್ 25, ಮೆಹದಿ ಹಸನ್ 15 ಹಾಗೂ ನೂರುಲ್ ಹಸನ್ 6  ರನ್ ಗಳಿಸಿ ಔಟಾಗಿದ್ದಾರೆ.

ಇನ್ನು ಭಾರತದ ಪರ ಬೌಲಿಂಗ್ ನಲ್ಲಿ ಉಮೇಶ್ ಯಾದವ್ ಹಾಗೂ ರವಿಚಂದ್ರನ್ ಅಶ್ವಿನ್ ತಲಾ 4 ವಿಕೆಟ್ ಪಡೆದಿದ್ದರೆ ಜಯದೇವ್ ಉನಾದ್ಕತ್ 2 ವಿಕೆಟ್ ಪಡೆದಿದ್ದಾರೆ.

ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ ಮೊದಲ ಟೆಸ್ಟ್ ಪಂದ್ಯದಲ್ಲಿ ಗೆಲುವು ಸಾಧಿಸಿದೆ. ಇನ್ನು ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಅಂಕಪಟ್ಟಿಯಲ್ಲಿ ಭಾರತ ಎರಡನೇ ಸ್ಥಾನದಲ್ಲಿ ಮುಂದುವರೆಯಬೇಕಾದರೆ ಈ ಪಂದ್ಯವನ್ನು ಗೆಲ್ಲಲೆಬೇಕಿದೆ.

No Comments

Leave A Comment