Log In
BREAKING NEWS >
ಉಡುಪಿ ನಗರದಲ್ಲಿನ ಗ್ರಾಹಕರ ಅಚ್ಚುಮೆಚ್ಚಿನ ಪ್ರಸಿದ್ಧ ಜವಳಿಮಳಿಗೆಯಾದ "ಕಲ್ಸ೦ಕ ಗಿರಿಜಾ ಸಿಲ್ಕ್"ನಲ್ಲಿ ಗ್ರಾಹಕರಿಗಾಗಿ ಜೂನ್ 1ರಿ೦ದ ಮಳೆಗಾಲದ ಮಹೋನ್ನತ ಭಾರೀ ರಿಯಾಯಿತಿ ದರದಲ್ಲಿ ವಸ್ತ್ರಗಳ ಮಾರಾಟ ಆರ೦ಭ.

ಚೀನಾದಲ್ಲಿ ಕೋವಿಡ್-19 ಪ್ರಕರಣ ಹೆಚ್ಚಳ ಕಳವಳಕಾರಿ; ಆದರೆ, ಲಸಿಕೆಯಿಂದಾಗಿ ಭಾರತ ಭಯಪಡುವ ಅಗತ್ಯವಿಲ್ಲ: ಅದಾರ್ ಪೂನಾವಾಲಾ

ಪುಣೆ: ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ಸಿಇಒ ಅದಾರ್ ಪೂನಾವಾಲ ಮಂಗಳವಾರ ಚೀನಾದಲ್ಲಿ ಹೆಚ್ಚುತ್ತಿರುವ ಕೋವಿಡ್-19 ಪ್ರಕರಣಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಆದರೆ, ಭಾರತದಲ್ಲಿ ವ್ಯಾಕ್ಸಿನೇಷನ್ ಕವರೇಜ್ ಅತ್ಯುತ್ತಮವಾಗಿರುವುದರಿಂದ ಭಯಪಡುವ ಅಗತ್ಯವಿಲ್ಲ ಎಂದು ಹೇಳಿದರು.

ಅಮೆರಿಕ ಮತ್ತು ಚೀನಾದಲ್ಲಿ ಕೋವಿಡ್ ಪ್ರಕರಣಗಳ ತೀವ್ರತೆಯ ಮಧ್ಯೆ ಕೊರೊನಾವೈರಸ್ ಹೊಸ ರೂಪಾಂತರಗಳನ್ನು ಟ್ರ್ಯಾಕ್ ಮಾಡಲು  ವೈರಾಣುವಿನ ವಂಶವಾಹಿಗಳ ಸಂರಚನೆಯ ವಿಶ್ಲೇಷಣೆಗಾಗಿ (ಜೀನೋಮ್‌ ಸೀಕ್ವೆ ನ್ಸಿಂಗ್‌ಗೆ) ಕ್ರಮವನ್ನು ಹೆಚ್ಚಿಸುವಂತೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಆರೋಗ್ಯ ಸಚಿವಾಲಯವು ಸೂಚನೆ ನೀಡಿದ ನಂತರ ಅದಾರ್ ಪೂನಾವಾಲಾ ಅವರು ಈ ಟ್ವೀಟ್ ಮಾಡಿದ್ದಾರೆ.

‘ಚೀನಾದಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳ ವರದಿಯು ಕಳವಳಕಾರಿಯಾಗಿದೆ. ಆದರೆ, ನಮ್ಮ ದೇಶದಲ್ಲಿ ಅತ್ಯುತ್ತಮ ವ್ಯಾಕ್ಸಿನೇಷನ್ ಕವರೇಜ್ ಮತ್ತು ಟ್ರ್ಯಾಕ್ ರೆಕಾರ್ಡ್ ಅನ್ನು ಗಮನಿಸಿದರೆ ನಾವು ಭಯಪಡುವ ಅಗತ್ಯವಿಲ್ಲ. ನಾವು ಭಾರತ ಸರ್ಕಾರ ಮತ್ತು ಆರೋಗ್ಯ ಸಚಿವಾಲಯವು ನಿಗದಿಪಡಿಸಿದ ಮಾರ್ಗಸೂಚಿಗಳನ್ನು ನಂಬುವುದನ್ನು ಮತ್ತು ಅನುಸರಿಸುವುದನ್ನು ಮುಂದುವರಿಸಬೇಕು’ ಎಂದು ಪೂನಾವಾಲಾ ಟ್ವೀಟ್ ಮಾಡಿದ್ದಾರೆ.

ಕೋವಿಡ್-19 ಸಾಂಕ್ರಾಮಿಕದ ಸಮಯದಲ್ಲಿ, ಪುಣೆ ಮೂಲದ ಸೀರಮ್ ಇನ್‌ಸ್ಟಿಟ್ಯೂಟ್ ಕೋವಿಶೀಲ್ಡ್ ಲಸಿಕೆಯನ್ನು ತಯಾರಿಸಲು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಮತ್ತು ಔಷಧೀಯ ಕಂಪನಿ ಅಸ್ಟ್ರಾ ಜೆನೆಕಾದೊಂದಿಗೆ ಸಹಕರಿಸಿದೆ.

2021ರ ಡಿಸೆಂಬರ್‌ನಲ್ಲಿ ಸೀರಮ್ ಇನ್‌ಸ್ಟಿಟ್ಯೂಟ್ ಲಸಿಕೆ ಉತ್ಪಾದನೆಯನ್ನು ನಿಲ್ಲಿಸಿದೆ. ಆ ಸಮಯದಲ್ಲಿ ಲಭ್ಯವಿರುವ ಒಟ್ಟು ಸ್ಟಾಕ್‌ನಲ್ಲಿ, ಸುಮಾರು 100 ಮಿಲಿಯನ್ ಡೋಸ್‌ಗಳು ಈಗಾಗಲೇ ಅವಧಿ ಮುಗಿದಿವೆ ಎಂದು ಪೂನಾವಾಲ ಹೇಳಿದ್ದರು.

No Comments

Leave A Comment