Log In
BREAKING NEWS >
ಉಡುಪಿಯ ಶ್ರೀಪುತ್ತಿಗೆ ಮಠಾಧೀಶರಾದ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರ 4ನೇ ಪರ್ಯಾಯಕ್ಕೆ ಗುರುವಾರದ೦ದು ಅದ್ದೂರಿಯ ಅಕ್ಕಿಮುಹೂರ್ತ ಕಾರ್ಯಕ್ರಮ ಸ೦ಪನ್ನ.....

ಇರಾನಿನ ಕಿರ್ಕುಕ್ ಬಳಿ ಬಾಂಬ್ ಸ್ಫೋಟ- 8 ಮಂದಿ ಪೊಲೀಸರ ಸಾವು

ಇರಾಕ್:ಡಿ 18: ತೈಲ ಸಮೃದ್ಧ ನಗರವಾದ ಕಿರ್ಕುಕ್‌ನ ನೈಋತ್ಯ ಭಾಗದಲ್ಲಿ ಬೆಂಗಾವಲು ಪಡೆಯ ವಾಹನದ ಮೇಲೆ ಬಾಂಬ್ ದಾಳಿ ನಡೆದಿದ್ದು, ಕನಿಷ್ಠ ಎಂಟು ಇರಾಕಿ ಫೆಡರಲ್ ಪೊಲೀಸರು ಸಾವನ್ನಪ್ಪಿದ್ದಾರೆ ಎಂದು ಭದ್ರತಾ ಮೂಲಗಳು ತಿಳಿಸಿವೆ.

ಕಿರ್ಕುಕ್‌ನ ನೈಋತ್ಯಕ್ಕೆ 30 ಕಿ.ಮೀ ದೂರದಲ್ಲಿರುವ ಸಫ್ರಾ ಗ್ರಾಮದ ಬಳಿ ಸ್ಫೋಟ ಸಂಭವಿಸಿದೆ ಎಂದು ಮೂಲಗಳು ತಿಳಿಸಿದ್ದು, ಘಟನೆಯಲ್ಲಿ ಇಬ್ಬರು ಪೊಲೀಸರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಘಟನೆ ಬಗ್ಗೆ ಯಾವುದೇ ಸಂಘಟನೆ ಹೊಣೆಗಾರಿಕೆಯ ಬಗ್ಗೆ ತಕ್ಷಣ ಹೇಳದಿದ್ದರೂ, ಇಸ್ಲಾಮಿಕ್ ಉಗ್ರಗಾಮಿ ಸಂಘಟನೆ ’ಡಾಯಿಸ್ ’ (Daesh) ಈ ಭಾಗದಲ್ಲಿ ಸಕ್ರಿಯವಾಗಿದೆ. ಡಿಸೆಂಬರ್ 2017 ರಲ್ಲಿ ಇರಾಕ್ ದೇಶದ ದೊಡ್ಡ ಭಾಗವನ್ನು ವಶಪಡಿಸಿಕೊಂಡಿದ್ದ ಸಂಘಟನೆಯ ವಿರುದ್ದ ವಿಜಯವನ್ನು ಘೋಷಿಸಿತ್ತು.

No Comments

Leave A Comment