Log In
BREAKING NEWS >
ಜೂ.26ರ೦ದು ಉಡುಪಿ ಶ್ರೀಪುತ್ತಿಗೆ ಮಠದ ೪ನೇ ಪರ್ಯಾಯಕ್ಕೆ ಕಟ್ಟಿಗೆ ಮುಹೂರ್ತ ಕಾರ್ಯಕ್ರಮ ಜರಗಲಿದೆ.....

ಡಿಸೆಂಬರ್ 17 ರಿಂದ ಜನವರಿ 1 ರವರೆಗೆ ಸುಪ್ರೀಂ ಕೋರ್ಟ್ ಗೆ ಚಳಿಗಾಲದ ರಜೆ: ಸಿಜೆಐ ಚಂದ್ರಚೂಡ್

ನವದೆಹಲಿ: ಡಿಸೆಂಬರ್ 17 ರಿಂದ ಜನವರಿ 1 ರವರೆಗೆ ಸುಪ್ರೀಂ ಕೋರ್ಟ್ ಗೆ ಚಳಿಗಾಲದ ರಜೆ ನೀಡಲಾಗಿದ್ದು, ಈ ದಿನಗಳಲ್ಲಿ ಯಾವುದೇ ಪೀಠ ಲಭ್ಯವಿರುವುದಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರು ಶುಕ್ರವಾರ ಹೇಳಿದ್ದಾರೆ.

“ನಾಳೆಯಿಂದ ಜನವರಿ 1 ರವರೆಗೆ ಯಾವುದೇ ಪೀಠಗಳು ಲಭ್ಯವಿರುವುದಿಲ್ಲ” ಎಂದು ನ್ಯಾಯಮೂರ್ತಿ ಚಂದ್ರಚೂಡ್ ನ್ಯಾಯಾಲಯದಲ್ಲಿ ಹಾಜರಿದ್ದ ವಕೀಲರಿಗೆ ತಿಳಿಸಿದರು.

ಎರಡು ವಾರಗಳ ಚಳಿಗಾಲದ ವಿರಾಮಕ್ಕೆ ಹೋಗುವ ಮುನ್ನ ಉನ್ನತ ನ್ಯಾಯಾಲಯದಲ್ಲಿ ಇಂದು ಕೊನೆಯ ಕೆಲಸದ ದಿನವಾಗಿದ್ದು, ಜನವರಿ 2 ರಂದು ಸುಪ್ರೀಂ ಕೋರ್ಟ್ ಪುನರಾರಂಭವಾಗಲಿದೆ.

No Comments

Leave A Comment