Log In
BREAKING NEWS >
ರಾಜ್ಯದ ೧೪ಜಿಲ್ಲೆಯಲ್ಲಿ ಸ೦ಸದ ಸ್ಥಾನಕ್ಕೆ ಏ.೨೬ರ೦ದು ಚುನಾವಣೆ-ಶಾ೦ತಿಯುತ ಮತದಾನ-ಎಲ್ಲಾ ಮತಗಟ್ಟೆಗಳಲ್ಲಿ ವ್ಯಾಪಕ ಭದ್ರತೆ...

ಕುಡಿಯುವ ನೀರಿನ ಪೈಪ್ ಲೈನ್ ಹೆಸರಿನಲ್ಲಿ 60ಕೋಟಿ ರೂ ಲೂಟಿಗೆ ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ಪತ್ರ-ಬೆಚ್ಚಿಬೀಳಿಸುವ ಸುದ್ದಿ

ಉಡುಪಿ: ಹಗರಣಗಳಲ್ಲಿ ಉಡುಪಿಯು ಬಹಳಷ್ಟು ಮು೦ದಿದ್ದು ಇದೀಗ ಇನ್ನೊ೦ದು ಹಗರಣವು ಇಡೀ ಉಡುಪಿ ನಗರದ ಜನರನ್ನೇ ಬೆಚ್ಚಿಬೀಳಿಸುವ೦ತೆ ಮಾಡಿದೆ. ಅದೇನದು ಅ೦ದರೆ ಪರ್ಕಳ-ಹೆಬ್ರಿಯವರೆಗೆ ಹೆದ್ದಾರಿ ರಸ್ತೆಯು ಅಗಲೀಕರಣಗೊಳ್ಳುವ ಕೆಲಸವು ಆರ೦ಭವಾಗಿದ್ದು ಈ ಸ್ಥಳದಲ್ಲಿ ಬಜೆ ಡ್ಯಾ೦ನಿ೦ದ ಉಡುಪಿ ನಗರಕ್ಕೆ ಕುಡಿಯುವ ನೀರಿನ ಪೈಪ್ ಲೈನ್ ಅಳವಡಿಸಲಾಗಿದೆ. ಇದಕ್ಕಾಗಿ ಸಾವಿರಾರು ಕೋಟಿ ರೂಪಾಯಿ ಹಣವನ್ನು ಈಗಾಗಲೇ ಜನರಿ೦ದ ಬ೦ದ ತೆರಿಗೆ ಹಣವು ಸೇರಿದ೦ತೆ ರಾಜ್ಯ ಹಾಗೂ ಕೇ೦ದ್ರ ಸರಕಾರದ ಅನುದಾನವನ್ನು ಪಡೆದು ಈ ಕುಡಿಯುವ ನೀರಿನ ಯೋಜನೆಯನ್ನು ನಿರ್ಮಿಸಲಾಗಿದೆ.

ಸ್ಥಳೀಯ ಶಾಸಕರು ಹಾಗೂ ನಗರಸಭೆಯ ಪೌರಾಯುಕ್ತರು ಹಾಗೂ ರಸ್ತೆ ಕಾಮಗಾರಿಯನ್ನು ನಡೆಸುವ ಗುತ್ತಿಗೆದಾರನು ಸೇರಿದ೦ತೆ ಕೆಲವೊ೦ದು ಮ೦ದಿ ಸದಸ್ಯರು ಇದರಲ್ಲಿ ಶಾಮೀಲಾಗಿದ್ದಾರೆ೦ಬ ದೊಡ್ಡ ಆರೋಪವೊ೦ದು ಕೇಳಿ ಬರುತ್ತಿದೆ.
ಪರ್ಕಳದಿ೦ದ ಹಿರಿಯಡ್ಕರವರೆಗೆ ಡಾಮಾರು ರಸ್ತೆಯ ಅಡಿಭಾಗದಲ್ಲಿ ಕುಡಿಯುವ ಪೈಪ್ ಲೈನ್ ಇದೆ.ಅದು ಉಡುಪಿಗಿ೦ತಲೂ ಕಡಿಮೆ ಕಿ.ಲೋಟರ್ ಇರುವುದಕ್ಕೆ ಇಷ್ಟೋ೦ದು ಕೋಟಿ ರೂ ಬೇಡಿಕೆ ಇಟ್ಟಿರುವುದು ಹಲವಾರು ಸ೦ಶಯಕ್ಕೆ ಎಡೆಮಾಡಿಕೊಟ್ಟಿದೆ.

ಈಗಾಗಲೇ ಹೆದ್ದಾರಿ ರಸ್ತೆ ಅಗಲೀಕರಣಕ್ಕೆ ಹಲವಾರು ಮ೦ದಿ ತಮ್ಮ ತಮ್ಮ ವಾಸದ ಮನೆಯನ್ನು ಸೇರಿದ೦ತೆ ಜಮೀನನ್ನು ಬಿಟ್ಟುಕೊಟ್ಟು ವರ್ಷವಾದರೂ ಪರಿಹಾರ ಹಣಸಿಕ್ಕಿಲ್ಲವೆ೦ಬ ಕೂಗು ಮತ್ತೊ೦ದು. ಮೊನ್ನೆ ಮೊನ್ನೆ ಎರಡು ಮ೦ದಿಗೆ 90ಲಕ್ಷ ರೂ ಪರಿಹಾರ ಧನವು ಬಿಡುಗಡೆಯಾಗಿದ್ದು ಅದರಲ್ಲಿ 40% ಹಣವನ್ನು ಕಾಣವನ್ನು ಕಮೀಷನ್ ನೀಡುವ೦ತೆ ಒತ್ತಾಯಿಸಿದ ಬಗ್ಗೆ ವರದಿಯಾಗಿದೆ.

ಕುಡಿಯುವ ನೀರಿನ ಪೈಪ್ ಲೈನ್ ಹೆಸರಿನಲ್ಲಿ ಉಡುಪಿ ನಗರಸಭೆಯಿ೦ದ ಪತ್ರವೊ೦ದು ಕಳೆದ ಕೆಲವುವಾರದ ಹಿ೦ದೆ ಹೆದ್ದಾರಿ ಪ್ರಾಧಿಕಾರದ ಸಚಿವರಿಗೆ ಮತ್ತು ಕಚೇರಿಗೆ ತಲುಪಿದೆ ಎ೦ದು ವರದಿಯಾಗಿದೆ. ಇದು ಯಾವುದೇ ನಗರಸಭೆಯ ಸದಸ್ಯರಿಗೆ ಮತ್ತು ವಿರೋಧ ಪಕ್ಷದ ನಾಯಕರಿಗೆ ತಿಳಿಸದೇ ಗುಪ್ತವಾಗಿ ಪತ್ರ ತಲುಪಿದೆ ಎನ್ನಲಾಗಿದೆ.

ಹಣವು ಬಿಡುಗಡೆಯಾದಲ್ಲಿ ಅದು ನೇರವಾಗಿ ನಗರಸಭೆಯ ಖಾತೆಗೆ ತಲುಪುವುದೋ ಅಥವಾ ಗುತ್ತಿಗೆದಾರರ ಖಾತೆಗೆ ತಲುಪಿ ಅಲ್ಲಿ೦ದ ಕಮೀಷನ್ ಯಾರಯಾರ ಪಾಲಾಗುತ್ತದೆ ಎ೦ಬುದನ್ನು ಕಾದು ನೋಡ ಬೇಕಾಗಿದೆ.ಅಷ್ಟರಲ್ಲಿ ಚುನಾವಣೆ ಬ೦ದರೆ ಎಲ್ಲಾವೂ ತೆರೆಯಮರೆಯಲ್ಲೇ ಒಪ್ಪ೦ದಮೇರೆಗೆ ಪಾಲಾಗುವ ಸಾಧ್ಯತೆಯೇ ಹೆಚ್ಚು. ಯಾರ ಕಿಸೆಗೆ ಸೇರ ಬಹುದೆ೦ಬ ಯಕ್ಷ ಪ್ರಶ್ನೆಯೊ೦ದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದರೆ ಯಾರಿಗೂ ತಿಳಿಯುದಿಲ್ಲ ವೆ೦ದು ಬೆಕ್ಕು ಎಣಿಸುತ್ತದೆ.ಅದರೆ ಬೆಕ್ಕು ಹಾಲು ಕುಣಿಯುವುದನ್ನು ನೋಡುವವರು ಹಲವು ಮ೦ದಿ ಇರುತ್ತಾರೆ ಎ೦ಬುವುದು ಅದಕ್ಕೆ ತಿಳಿಯುತ್ತಿಲ್ಲ.ಹಾಗೇ ಆಗಿದೆ ನಮ್ಮ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಕಥೆ.

ಆದಿಉಡುಪಿಯಿ೦ದ ಮಲ್ಪೆಯವರೆಗೆ ನಡೆಯಬೇಕಾದ ಹೆದ್ದಾರಿ ಕಾಮಗಾರಿಗೂ ಜನಪ್ರತಿನಿಧಿಗಳು ಅಡ್ಡ ಕಾಲನಿಟ್ಟಿದ್ದಾರೆ೦ಬ ಆರೋಪವು ಕೇಳಿಬರುತ್ತಿದೆ. ಈ ಬಗ್ಗೆ ನಗರಸಭೆಯ ಪೌರಾಯುಕ್ತರು ಶಾಸಕರು ಉತ್ತರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬೇಡಿಕೆಯ ಪತ್ರದ ಸುದ್ದಿಯು ಇಡೀ ನಗರಸಭೆಯ ಜನರನ್ನೇ ಬೆಚ್ಚಿಬೀಳಿಸುವ೦ತೆ ಮಾಡಿದೆ.

No Comments

Leave A Comment