Log In
BREAKING NEWS >
ಉಡುಪಿಯ ಶ್ರೀಪುತ್ತಿಗೆ ಮಠಾಧೀಶರಾದ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರ 4ನೇ ಪರ್ಯಾಯಕ್ಕೆ ಗುರುವಾರದ೦ದು ಅದ್ದೂರಿಯ ಅಕ್ಕಿಮುಹೂರ್ತ ಕಾರ್ಯಕ್ರಮ ಸ೦ಪನ್ನ.....

ತಮಿಳುನಾಡಿನಲ್ಲಿ ಮಾಂಡೌಸ್’ ಚಂಡಮಾರುತದ ಆರ್ಭಟ, ಭಾರೀ ಮಳೆಗೆ ನಾಲ್ವರ ಬಲಿ- ಸಿಎಂ ಎಂಕೆ ಸ್ಟಾಲಿನ್

ಚೆನ್ನೈ:  ಮಾಂಡೌಸ್ ಚಂಡ ಮಾರುತದ ಹೊಡೆತಕ್ಕೆ ಸಿಲುಕಿರುವ ತಮಿಳುನಾಡಿನಲ್ಲಿ ತೀವ್ರ ರೀತಿಯ ಹಾನಿಯಾಗಿದೆ. ಚೆನ್ನೈ ಮತ್ತು ಚೆಂಗಲಪಟ್ಟು ಜಿಲ್ಲೆಯ ಹಲವೆಡೆ ಜಲಾವೃತವಾಗಿದ್ದು, ಮರಗಳು ಧರೆಗುರುಳಿ ಬಿದ್ದಿವೆ.  ಮಾಂಡೌಸ್ ಚಂಡ ಮಾರುತದಿಂದ ಭಾರೀ ಮಳೆಯಾಗುತ್ತಿದ್ದು,ಅನೇಕ ತಗ್ಗು ಪ್ರದೇಶಗಳು ಜಲಾವೃತವಾಗಿವೆ. ರಸ್ತೆಗಳು ನೀರಿನಿಂದ ತುಂಬಿ ವಾಹನ ಸವಾರರು ಪರದಾಡುವಂತಾಗಿದೆ.

ಎಗ್ಮೋರ್ ನಲ್ಲಿ ಬೃಹತ್ ಗಾತ್ರದ ಮರವೊಂದು ಉರುಳಿ ಬಿದ್ದ ಪರಿಣಾಮ ಸಮೀಪದಲ್ಲಿದ್ದ ಪೆಟ್ರೋಲ್ ಬಂಕ್ ವೊಂದು ಹಾನಿಯಾಗಿರುವ ವಿಡಿಯೋ ವೊಂದು ವೈರಲ್ ಆಗಿದೆ. ಚೆನ್ನೈ ಟಿ ನಗರದಲ್ಲಿ ಗೋಡೆಯೊಂದು ಕುಸಿದು ಬಿದ್ದ ಪರಿಣಾಮ ಅಲ್ಲೇ ಪಾರ್ಕಿಂಗ್ ಮಾಡಲಾಗಿದ್ದ ಮೂರು ಕಾರುಗಳಿಗೆ ತೀವ್ರ ರೀತಿಯ ಹಾನಿಯಾಗಿದೆ.

ಮಾಂಡೌಸ್’ ಚಂಡಮಾರುತ ಪೀಡಿತ ಕಾಸಿಮೆಡು ಪ್ರದೇಶಕ್ಕೆ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಇಂದು ಭೇಟಿ ನೀಡಿ, ಸಂತ್ರಸ್ತರಿಗೆ ಆಹಾರ ಸಾಮಾಗ್ರಿಗಳನ್ನು ವಿತರಿಸಿದರು.

ನಂತರ ಮಾತನಾಡಿದ ಸಿಎಂ, ಚಂಡಮಾರುತ ಬಾಧಿತ ಪ್ರದೇಶಗಳಲ್ಲಿ ಪರಿಶೀಲನೆ ನಡೆಸಿದ್ದು, ಪಾಲಿಕೆ ಕೆಲಸಗಾರರು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಧಾರಾಕಾರ ಮಳೆಯಿಂದಾಗಿ ನಾಲ್ವರು ಜನರು ಮೃತಪಟ್ಟಿದ್ದರೆ 98 ಜಾನುವಾರುಗಳು ಸಾವನ್ನಪ್ಪಿವೆ. 151 ಮನೆಗಳು, ಗುಡಿಸಲು ಹಾನಿಯಗೊಂಡಿವೆ. ಚೆನ್ನೈ ನಗರದಲ್ಲಿ 400 ಮರಗಳು ಧರೆಗುರುಳಿ ಬಿದ್ದಿವೆ ಎಂದು ತಿಳಿಸಿದರು.

No Comments

Leave A Comment