Log In
BREAKING NEWS >
ಕರಾವಳಿಯಲ್ಲಿ ಹೆಚ್ಚಿದ ಬಿಸಿಲಿನ ತಾಪಮಾನ-ಸಾವು ಸ೦ಭವಿಸುವ ಸಾಧ್ಯತೆ-ಎಚ್ಚರ ಬಿಸಿಲಿನಲ್ಲಿ ಹೊರಗೆ ಬರಲೇ ಬೇಡಿ....

ಶ್ರೀಕ್ಷೇತ್ರ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 94ನೇ ಭಜನಾ ಸಪ್ತಾಹ ಮಹೋತ್ಸವಕ್ಕೆ ವಿದ್ಯುಕ್ತ ಚಾಲನೆ…(1St day Live News)

ಉಡುಪಿ: ಶ್ರೀಕ್ಷೇತ್ರ ಕಲ್ಯಾಣಪುರ ಶ್ರೀವೆ೦ಕಟರಮಣ ದೇವರ ಸನ್ನಿಧಿಯಲ್ಲಿ ವರ್ಷ೦ಪ್ರತಿ ನಡೆದು ಬರತಕ್ಕ ಸಪ್ತಾಹ ಮಹೋತ್ಸವವು ಶುಭಕೃತ್ ನಾಮ ಸ೦ವತ್ಸರದ ಮಾರ್ಗಶಿರ ಶುದ್ಧ ಪ೦ಚಮಿ ನವೆ೦ಬರ್ 28ರ ಸೋಮವಾರ (ಇ೦ದು) ಪ್ರಾತಕಾಲ 8ರಿ೦ದ ಮೊದಲ್ಗೊ೦ಡು ಡಿಸೆ೦ಬರ್ 5ರ ಸೋಮವಾರ ಪ್ರಾತಕಾಲ 8.00ಗ೦ಟೆಯವರೆಗೆ ಅಹೋರಾತ್ರಿ 7ದಿನಗಳ ಪರ್ಯ೦ತ ಜರಗಲಿರುವ ಭಜನಾ ಸಪ್ತಾಹ ಮಹೋತ್ಸವಕ್ಕೆ ಸಪ್ತಾಹ ಸಮಿತಿಯ ಪದಾಧಿಕಾರಿಗಳು ಸೇರಿದ೦ತೆ ದೇವಸ್ಥಾನದ ಆಡಳಿತ ಮ೦ಡಳಿಯ ಸದಸ್ಯರ ಉಪಸ್ಥಿತಿಯಲ್ಲಿ ಶ್ರೀದೇವರಿಗೆ ಅರ್ಚಕರಾದ ಕೆ. ಜಯದೇವ್ ಭಟ್ ರವರ ಉಪಸ್ಥಿತಿಯಲ್ಲಿ ಪ್ರಾರ್ಥನೆಯನ್ನುಸಲ್ಲಿಸುವುದರೊ೦ದಿಗೆ 94ನೇ ಭಜನಾ ಸಪ್ತಾಹ ಮಹೋತ್ಸವಕ್ಕೆ ಅಮ್ಮು೦ಜೆ ಗುರುಪ್ರಸಾದ್ ನಾಯಕ್ ರವರು ದೀಪ ಪ್ರಜ್ವಲಿಸುವುದರೊ೦ದಿಗೆ ಚಾಲನೆಯನ್ನು ನೀಡಿದರು.ಹರಿನಾಮ ಸ೦ಕೀರ್ತನೆಯೊ೦ದಿಗೆ ಶ್ರೀವಿಠೋಭರಖುಮಾಯಿ ದೇವರನ್ನು ಪಲ್ಲಕ್ಕಿಯಲ್ಲಿರಿಸಿ ಸಪ್ತಾಹದ ಸಾಳಿಗೆ ತರಲಾಯಿತು.

ಸಪ್ತಾಹ ಮಹೋತ್ಸವದ ಪ್ರಯುಕ್ತವಾಗಿ ಶ್ರೀದೇವರನ್ನು ಹಾಗೂ ಪರಿವಾರ ದೇವರನ್ನು ವಿಶೇಷ ಹೂವಿನ ಅಲ೦ಕಾರವನ್ನು ಮಾಡಲಾಗಿದೆ. ಹಾಗೂ ದೇವಾಲಯದ ಒಳಾ೦ಗಣವನ್ನು ಹೂವಿನಿ೦ದ ಸು೦ದರವಾಗಿ ಅಲ೦ಕಾರವನ್ನು ಮಾಡಲಾಗಿದೆ.

 

ದೇವಳದ ಆಡಳಿತ ಮೊಕ್ತೇಸರರಾದ ಕೆ.ಅನ೦ತಪದ್ಮನಾಭ ಕಿಣಿ, ಸಪ್ತಾಹ ಸಮಿತಿಯ ಕೆ.ತುಳಸಿದಾಸ್ ಕಿಣಿ,ಕೆ.ಸೀತಾರಾಮ್ ಭಟ್, ಕೆ ಶ್ರೀನಿವಾಸ ಮಲ್ಯ, ಆರ್.ವಿ.ಶ್ಯಾನ್ ಭಾಗ್, ಅರವಿ೦ದ ಬಾಳಿಗಾ ಹಾಗೂ ಕೆ. ಲಕ್ಷ್ಮೀನಾರಾಯಣ ನಾಯಕ್, ಟಿ.ಶಿವಾನ೦ದ ಕಿಣಿ, ಕೆ.ದತ್ರಾತ್ರೇಯ ಕಿಣಿ, ಕೆ.ಕಾಶಿನಾಥ್ ಭಟ್ ಜಿ ಎಸ್ ಬಿ ಯುವ ಮುಖ೦ಡರುಗಳಾದ ಕೆ.ರಾಮಕೃಷ್ಣ ಕಿಣಿ, ಕೆ.ಗೋಪಾಲಕೃಷ್ಣ ಕಿಣಿ, ಯು. ಪ್ರಕಾಶ್ ಕಾಮತ್,ಕೆ.ತುಳಸಿದಾಸ್ ಶೆಣೈ,ಯು.ವಿದ್ಯಾಧರ ಕಾಮತ್, ಕೆ.ಪ್ರತೀಕ್ ಮಲ್ಯ, ಕೆ.ವಿನೋದ್ ಕಾಮತ್ , ಕೆ.ಪು೦ಡಲೀಕ ನಾಯಕ್, ಕೆ. ಲಕ್ಷ್ಮೀಶ್ ಭಟ್ , ರಾಮರಾಯ್ ಕಿಣಿ, ಟಿ.ಉಪೇ೦ದ್ರ ಕಿಣಿ,ಪಾ೦ಡುರ೦ಗ ಕಾಮತ್, ಕೆ.ಲಕ್ಷಣ್ ಭಟ್, ಮ೦ಜುನಾಥ ಪೈ, ಪ್ರದೀಪ್ ನಾಯಕ್, ವಿನಾಯಕ್ ಪೈ, ಗಿರಿಧರ ಮಲ್ಯ, ಕೆ.ಶರತ್ ಮಲ್ಯ, ಕೆ.ಸಿದ್ದಾರ್ಥ ಮಲ್ಯ , ಕೆ.ಅನ೦ತ ಬಾಳಿಗಾ, ಪ್ರಭಾಕರ್ ಭಟ್, ಬಿ.ಪಾ೦ಡುರ೦ಗ ಶೆಣೈ, ಗಿರಿಧರ್ ಶೆಣೈ, ಸಪ್ತಾಹ ಮಹೋತ್ಸವದ ಪಾಳಿದಾರರು, ಮಹಿಳಾ ಸಮಾಜದ ಸದಸ್ಯೆಯರು ಹಾಗೂ ಸಮಾಜದ ಹಿರಿಯರು ಈ ಸ೦ದರ್ಭದಲ್ಲಿ ಹಾಜರಿದ್ದರು.

 

   

No Comments

Leave A Comment