Log In
BREAKING NEWS >
ಕರಾವಳಿಯಲ್ಲಿ ಹೆಚ್ಚಿದ ಬಿಸಿಲಿನ ತಾಪಮಾನ-ಸಾವು ಸ೦ಭವಿಸುವ ಸಾಧ್ಯತೆ-ಎಚ್ಚರ ಬಿಸಿಲಿನಲ್ಲಿ ಹೊರಗೆ ಬರಲೇ ಬೇಡಿ....

ಸೆಲ್ಫಿ ತೆಗೆದುಕೊಳ್ಳುವಾಗ ಕಿತವಾಡ ಫಾಲ್ಸ್ ಗೆ ಬಿದ್ದು ಬೆಳಗಾವಿಯ ನಾಲ್ವರು ಯುವತಿಯರ ಸಾವು, ಓರ್ವಳ ಸ್ಥಿತಿ ಗಂಭೀರ!

ಬೆಳಗಾವಿ: ಮಹಾರಾಷ್ಟ್ರ-ಕರ್ನಾಟಕ ಗಡಿಯಲ್ಲಿರುವ ಕಿತವಾಡ ಫಾಲ್ಸ್ ಗೆ ಪ್ರವಾಸಕ್ಕೆ ತೆರಳಿದ್ದ ನಾಲ್ವರು ಯುವತಿಯರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದರೆ ಮತ್ತೋರ್ವಳ ಸ್ಥಿತಿ ಗಂಭೀರವಾಗಿದೆ.

ಬಾಶೆಬನ್ ಹೈ ಸ್ಕೂಲ್ ನ 40 ಯುವತಿಯರ ತಂಡ ಬೆಳಗಾವಿಯಿಂದ ಕಿತವಾಡ ಫಾಲ್ಸ್‌ಗೆ ಪ್ರವಾಸಕ್ಕೆ ಹೋಗಿತ್ತು. ಫಾಲ್ಸ್ ವೀಕ್ಷಣೆ ವೇಳೆ ಸೆಲ್ಫಿ ತೆಗೆದುಕೊಳ್ಳಲು ಯುವತಿಯ ತಂಡ ಮುಂದಾಗಿದ್ದಾರೆ. ಈ ವೇಳೆ ಐವರು ಯುವತಿಯರು ಕಾಲು ಜಾರಿ ಫಾಲ್ಸ್​ಗೆ ಬಿದ್ದಿದ್ದಾರೆ.

ಮೃತ ಯುವತಿಯರನ್ನು ಉಜ್ವಲ್ ನಗರ ನಿವಾಸಿ 17 ವರ್ಷದ ಆಸೀಯಾ ಮುಜಾವರ್, ಅನಗೋಳದ 20 ವರ್ಷದ ಕುದ್‌ಶೀಯಾ ಹಾಸಂ ಪಟೇಲ್, ಝಟ್‌ಪಟ್ ಕಾಲೋನಿಯ 20 ವರ್ಷದ ರುಕ್ಕಶಾರ್ ಭಿಸ್ತಿ ಹಾಗೂ 20 ವರ್ಷದ ತಸ್ಮಿಯಾ ಎಂದು ಗುರುತಿಸಲಾಗಿದೆ.  ಮತ್ತೋರ್ವಳ ಸ್ಥಿತಿ ಗಂಭೀರವಾಗಿದೆ.

ಘಟನಾ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸಿದರು.

No Comments

Leave A Comment