Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿನ 94ನೇ ಭಜನಾ ಸಪ್ತಾಹ ಮಹೋತ್ಸವಕ್ಕೆ ದೀಪ ಪ್ರಜ್ವಲನೆಯೊ೦ದಿಗೆ ವಿದ್ಯುಕ್ತ ಚಾಲನೆ.......ಡಿ.2ರ ಶುಕ್ರವಾರದ೦ದು ಪುತ್ತಿಗೆ ಮಠದ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರ ಪರ್ಯಾಯ ಮಹೋತ್ಸವಕ್ಕೆ ಬಾಳೆಮುಹೂರ್ತ ಕಾರ್ಯಕ್ರಮವು 8ಗ೦ಟೆಗೆ ಪುತ್ತಿಗೆ ಮಠದ ಆವರಣದಲ್ಲಿ ಜರಗಲಿದೆ...

ಬಿಎಲ್ ಸಂತೋಷ್‌ಗೆ ಹೊಸ ನೋಟಿಸ್ ಜಾರಿ ಮಾಡಿ: ಎಸ್‌ಐಟಿಗೆ ತೆಲಂಗಾಣ ಹೈಕೋರ್ಟ್ ಆದೇಶ

ಹೈದರಾಬಾದ್: ಭಾರತೀಯ ಜನತಾ ಪಕ್ಷದ(ಬಿಜೆಪಿ) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಅವರಿಗೆ ಅಪರಾಧ ಪ್ರಕ್ರಿಯೆಗಳ ಸಂಹಿತೆ(ಸಿಆರ್‌ಪಿಸಿ) ಸೆಕ್ಷನ್ 41ಎ ಅಡಿಯಲ್ಲಿ ಹೊಸ ನೋಟಿಸ್ ನೀಡುವಂತೆ ಟಿಆರ್ ಎಸ್ ಶಾಸಕರ ಖರೀದಿ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ(ಎಸ್‌ಐಟಿ)ಕ್ಕೆ ತೆಲಂಗಾಣ ಹೈಕೋರ್ಟ್ ಗುರುವಾರ ಆದೇಶಿಸಿದೆ.

ರಿಟ್ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ ವಿಜಯಸೇನ್ ರೆಡ್ಡಿ ನೇತೃತ್ವದ ಏಕಸದಸ್ಯ ಪೀಠ, ಅಡ್ವೊಕೇಟ್ ಜನರಲ್(ಎಜಿ) ಬಿಎಸ್ ಪ್ರಸಾದ್ ಅವರಿಗೆ ಪ್ರತಿ-ಅಫಿಡವಿಟ್‌ ಸಲ್ಲಿಸುವಂತೆ ಸೂಚಿಸಿದೆ.

ಪ್ರಸಾದ್ ಮತ್ತು ಹೆಚ್ಚುವರಿ ಅಡ್ವೊಕೇಟ್ ಜನರಲ್(ಎಎಜಿ) ಜೆ ರಾಮಚಂದರ್ ರಾವ್ ಅವರು ಬೆಳಗ್ಗೆ ನ್ಯಾಯಾಲಯಕ್ಕೆ ಹಾಜರಾಗಿದ್ದರು ಮತ್ತು ಎಸ್‌ಐಟಿ ಮತ್ತು ದೆಹಲಿ ಪೊಲೀಸರ ಪ್ರಯತ್ನಗಳ ಹೊರತಾಗಿಯೂ ಸಂತೋಷ್ ವಿಚಾರಣೆಗೆ ಹಾಜರಾಗಲಿಲ್ಲ ಎಂದು ತಿಳಿಸಿದರು.

ನವೆಂಬರ್ 20 ರಂದು ನವದೆಹಲಿಯ ಬಿಜೆಪಿ ಕಚೇರಿಗೆ ಸಮನ್ಸ್ ತಲುಪಿಸಲಾಗಿದೆ. ಆದರೂ ಆರೋಪಿ ಸಂತೋಷ್ ವಿಚಾರಣೆಗೆ ಹಾಜರಾಗಿಲ್ಲ. ವಿಚಾರಣೆಯಲ್ಲಿ ಪ್ರಮುಖ ಅಂಶವಾಗಿರುವ ಎಲೆಕ್ಟ್ರಾನಿಕ್ ಸಾಕ್ಷ್ಯಗಳನ್ನು ಅಳಿಸಿಹಾಕಲು ಸಂತೋಷ್ ಉದ್ದೇಶಪೂರ್ವಕವಾಗಿ ಎಸ್‌ಐಟಿ ಮುಂದೆ ವಿಚಾರಣೆ ಹಾಜರಾಗಲು ವಿಳಂಬ ಮಾಡುತ್ತಿದ್ದಾರೆ ಎಂದು ಎಎಜಿ ರಾವ್ ವಾದಿಸಿದರು.

“ಸಂತೋಷ್ ಅವರು ತಮ್ಮ ಮೊಬೈಲ್ ಸಾಧನದಿಂದ ಡೇಟಾವನ್ನು ಅಳಿಸಿದರೆ ಮತ್ತು ಮಹತ್ವದ ಸಾಕ್ಷ್ಯಾಧಾರಗಳನ್ನು ನಾಶಪಡಿಸಿದ ನಂತರ ಎಸ್‌ಐಟಿ ಮುಂದೆ ಹಾಜರಾಗುವುದು ನಿಷ್ಪ್ರಯೋಜಕವಾಗಲಿದೆ ಎಂದು ಎಎಜಿ ರಾವ್ ಕೋರ್ಟ್ ಗಮನಕ್ಕೆ ತಂದರು.

No Comments

Leave A Comment