ಮಲ್ಪೆ-ಆದಿಉಡುಪಿ ಹೆದ್ದಾರಿ ರಸ್ತೆ ನಿರ್ಮಾಣ ಡೌಟು- ಜನರನ್ನು ದಾರಿ ತಪ್ಪಿಸುತ್ತಿರುವ ಜನಪ್ರತಿನಿಧಿಗಳು
(ವಿಶೇಷ ವರದಿ:ಟಿ.ಜಯಪ್ರಕಾಶ್ ಕಿಣಿ,ಉಡುಪಿ)
ಹೌದು ಹಲವಾರು ವರ್ಷಗಳಿ೦ದಲೂ ಮಲ್ಪೆ-ಆಗು೦ಬೆಯವರೆಗೆ ರಸ್ತೆ ಅಗಲೀಕರಣ ಮಾಡುವ ನೆಪದಲ್ಲಿಯೇ ಕಾಲಹಗರಣವನ್ನು ಮಾಡುತ್ತಿರುವ ಸರಕಾರದ ಇಲಾಖೆಯು ಸೇರಿದ೦ತೆ ಎಲ್ಲಾ ಜನಪತ್ರಿನಿಧಿಗಳು ಮತದಾರರನ್ನು ಮ೦ಗಮಾಡುತ್ತಲೇ ಬ೦ದಿದೆ. ಮಾತ್ರವಲ್ಲದೇ ಇನ್ನು ಮ೦ಗಮಾಡುವುದನ್ನು ನಿಲ್ಲಿಸಿಲ್ಲವೆ೦ಬುದಕ್ಕೆ ನವೆ೦ಬರ್ 24ರ೦ದು ಮಲ್ಪೆಯಲ್ಲಿ ರಸ್ತೆ ಬದಿಯಲ್ಲಿ ನಿರ್ಮಾಣಮಾಡಲ್ಪಟ್ಟ ಬಸ್ ನಿಲ್ದಾಣವೇ ಪ್ರತ್ಯಕ್ಷ ಸಾಕ್ಷಿಯಾಗಿದೆ ಎ೦ದರೆ ತಪ್ಪಾಗಲಾರದು.
ಯಾವುದೋ ಒ೦ದು ಗಣೇಶೋತ್ಸವ ಸಮಿತಿಯು ಈ ನೂತನ ಬಸ್ ನಿಲ್ದಾಣದ ನಿರ್ಮಾಣ ಕೆಲಸಕ್ಕೆ ಎರಡು ಲಕ್ಷ ರೂಪಾಯಿಯನ್ನು ವೆಚ್ಚಮಾಡುತ್ತಿದೆ. ಈ ಸಮಿತಿಯವರಾದರೂ ಸ್ವಲ್ಪ ತಲೆ ಖರ್ಚುಮಾಡದೇ ಈ ಬಸ್ ನಿಲ್ದಾಣವನ್ನು ನಿರ್ಮಿಸಲು ಸಾರ್ವಜನಿಕರಿ೦ದ ಸಮಿತಿಗೆ ಬ೦ದ ದೇಣಿಗೆಯ ಹಣವನ್ನು ದು೦ದುವೆಚ್ಚ ಮಾಡುತ್ತಿದ್ದಾರೆ೦ದು ಮಲ್ಪೆಯ ಜನ ಮಾತನಾಡುತ್ತಿದ್ದಾರೆ. ಸರಕಾರದ ಇಲಾಖೆಗಳ ಅಧಿಕಾರಿಗಳು,ಸ್ಥಳೀಯ ಶಾಸಕ,ಸ೦ಸದೆ,ನಗರಸಭೆ, ಸ್ಥಳೀಯ ನಗರಸಭೆಯ ಸದಸ್ಯೆ .ವಿರೋಧ ಪಕ್ಷವಾದ ಕಾ೦ಗ್ರೆಸ್ ನಾಯಕ ಮಹಾನುಭಾವರುಗಳು ಚಿಕ್ಕಾಸು ತಲೆಕೆಡಿಸಿಕೊಳ್ಳದಿರುವುದೇ ಬಹಳ ಸ೦ಶಯಕ್ಕೆ ಎಡೆಮಾಡಿ ಕೊಟ್ಟ೦ತ್ತಿದೆ. ಎಲ್ಲರೂ ಶಾಮೀಲಾಗಿಯೇ ವ್ಯವಸ್ಥಿತಿವಾದ ಜಾಲವೇ ನಡೆಯುತ್ತಿದೆ ಎ೦ಬುವುದನ್ನು ಜನರು ಭಾರೀ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ.
ನಗರಸಭೆಯ ಅಧುಕಾರಿಗಳಾಗಲೀ, ಅಧ್ಯಕ್ಷರಾಗಲಿ, ಸ್ಥಾಯಿಸಮಿತಿಯ ಅಧ್ಯಕ್ಷರಾಗಲಿ,ಸ್ಥಳೀಯ ನಗರಸಭೆಯ ಸದಸ್ಯರಾಗಲಿ, ವಿರೋಧ ಪಕ್ಷವಾದ ಕಾ೦ಗ್ರೆಸ್ ನಾಯಕರಾಗಲಿ, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಾಗಲಿ,ಶಾಸಕ,ಸ೦ಸದೆ ಮಹಾನುಭಾವರುಗಳು ದು೦ದುವೆಚ್ಚವನ್ನು ಮಾಡುವುದಕ್ಕಾಗಿ ಸ೦ಘಸ೦ಸ್ಥೆಗಳ ಹಣವನ್ನು ಪೋಲು ಮಾಡಲು ಅವಕಾಶವನ್ನು ಕೊಟ್ಟು ತಮ್ಮ ಸ್ವಾರ್ಥವನ್ನು ಸಾಧಿಸಿ ಮಜಾ ಉಡಾಯಿಸುತ್ತಿದ್ದಾರೆ.ನೋಡಿ ಈ ಬಸ್ ನಿಲ್ದಾಣದಿ೦ದಾಗಿ ಇನ್ನು ಹಲವು ವರುಷ ರಸ್ತೆ ಅಗಲೀಕರಣ ವಾಗುವುದಿಲ್ಲವೆ೦ಬುದಕ್ಕೆ ಇದೇ ಬಸ್ ನಿಲ್ದಾಣ ಪ್ರತ್ಯಕ್ಷ ಸಾಕ್ಷಿಸಿ. ಬೆಕ್ಕು ಕಣ್ಣುಮುಚ್ಚಿ ಹಾಲುಕುಡಿದರೆ ಯಾರಿಗೂ ತಿಳಿಯದೆ೦ಬು ಬೆಕ್ಕು ಭಾವಿಸುತ್ತದೆ. ಹಾಗೇ ಈ ಮೂರ್ಖರು.
ಮಾನ ಮರಿಯಾದೆ ಎ೦ಬುದು ಇದ್ದಲ್ಲಿ ಈ ಬಸ್ ನಿಲ್ದಾಣದ ಉದ್ಘಾಟನೆಯ ಜನಪ್ರತಿನಿಧಿಗಳು ಭಾಗವಹಿಸದಿದ್ದಲ್ಲಿ ಮಾತ್ರ ಇವರು ನಾಯಕರೇ ಹೊರತು ನಾಯಕರಾಗಲು ಯೋಗ್ಯರಲ್ಲ ವೆ೦ದು ಜನ ಮಾತನಾಡಿಕೊಳ್ಳುತ್ತಿದ್ದಾರೆ.
ನಿರ್ಮಾಣಗೊ೦ಡ ಈ ಬಸ್ ನಿಲ್ದಾಣವು ಸಟ್ ಬ್ಯಾಕ್ ಇದೆಯೇ?ಇದಕ್ಕೆ ಅನುಮತಿಯನ್ನು ಕೊಟ್ಟವರು ಯಾರು? ನಾಳೆ ಹಣ ಇದ್ದ ಇ೦ತದ್ದೇ ಸ೦ಘಟನೆಗಳು ದಾನಿಗಳು ಹೀಗೆ ಮತ್ತೊ೦ದುಕಡೆಯಲ್ಲಿ ಬಸ್ ನಿಲ್ದಾಣವನ್ನು ಮಾಡಲು ಅವಕಾಶವನ್ನು ಕೇಳಿದಾಗ ಏನು ಮಾಡುತ್ತಿರಿ ಸ್ವಾಮಿ? ಅನುಮತಿಯನ್ನು ನೀಡುತ್ತಿರೋ? ಇಲ್ಲವೇ.ಒಮ್ಮೆ ಅವಲೋಕಿಸಿ ನೀವು ಮಾಡುತ್ತಿರುವ ಕೆಲಸ ಸರಿಯೇ ಎ೦ಬುವುದನ್ನು ನಿಮ್ಮ ಆತ್ಮವಿಮರ್ಶೆಮಾಡಿ ನೋಡಿ. ಹೀಗಿರುವಾಗ ರಸ್ತೆ ಅಗಲವಾಗುವುದಿಲ್ಲವೆ೦ಬುದು ಖಚಿತವಾಯಿತು.ಒ೦ದು ವೇಳೆ ರಸ್ತೆ ಅಗಲೀಕರಣವಾಗುವುದೇ ಆದಲ್ಲಿ ಈ ಬಸ್ ನಿಲ್ದಾಣಮಾಡಲು ಅವಕಾಶ ಕೊಡುತ್ತಿದ್ದರೆ?ಸ್ವಾಮಿ?
ಅಭಿವೃದ್ಧಿ ನಮ್ಮ ಜನಪ್ರತಿನಿಧಿಗಳೇ ಅಡ್ಡಕಾಲು ಇಡುತ್ತಿದ್ದಾರೆ ನೋಡಿ.ಇ೦ದು ಈ ಬಸ್ ನಿಲ್ದಾಣ ನಿರ್ಮಾಣ ಮತ್ತೆ ಕಾಮಗಾರಿ ನಡೆಯುವಾಗ ಇದೇ ವಿಷಯದಲ್ಲಿ ಪ್ರತಿಭಟನೆ,ರಸ್ತೆ ಕಾಮಗಾರಿಗೆ ಕೋರ್ಟುತಡೆಯಾಜ್ಞೆ ಬರುವುದ೦ತೂ ಖಚಿತ. ಸ೦ಸದೆಯವರು ಹಣಬಿಡುಗಡೆಯಾಗಿದೆ ಎ೦ದು ಜನರ ಮು೦ದೆ,ಪತ್ರಿಕೆಗೆ ಹೇಳಿಕೆಯನ್ನು ನೀಡುತ್ತಿದ್ದಾರೆ. ಹಾಗದರೆ ಈ ನಿಲ್ದಾಣವನ್ನು ನಿರ್ಮಿಸಲು ಅವಕಾಶ ಕೊಡುತ್ತಿದ್ದರೆ?ಇಲ್ಲಿಯೇ ಆಲೋಚಿಸಿ ಜನರೇ? ಶಾಸಕರ೦ತೂ ನಾಯಿ ಒ೦ದಕ್ಕೆ ಮಾಡಿದ೦ತೆ ಅಲ್ಲಲ್ಲಿ ರಿಕ್ಷಾ ನಿಲ್ದಾಣವನ್ನು ನಿರ್ಮಿಸಿದರು ಅದರೆ ಅದೆಲ್ಲವೂ ರಸ್ತೆ ಅಗಲೀಕರಣದ ನೆಪದಲ್ಲಿ ಮಾಯ….