Log In
BREAKING NEWS >
ಉಡುಪಿ ಜಿಲ್ಲೆಯ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಪರಮೇಶ್ವರ್ ಅನಂತ್ ಹೆಗ್ಡೆ ನೇಮಕ...

ಮಂಗಳೂರು: ಕೆಎಸ್‌ಆರ್‌‌ಟಿಸಿ ಬಸ್ ನಿಲ್ದಾಣದಲ್ಲಿ ಆತಂಕಕ್ಕೆ ಕಾರಣವಾದ ಬ್ಯಾಗ್

ಮಂಗಳೂರು, ನ 21 : ರಿಕ್ಷಾದಲ್ಲಿ ಕುಕ್ಕರ್ ಸ್ಟೋಟಕ್ಕೆ ಭಯೋತ್ಪಾದಕರು ನಂಟಿನ ಆತಂಕದ ಬೆನ್ನಲ್ಲೇ ನಗರದ ಬಿಜೈನಲ್ಲಿರುವ ಕೆಎಸ್‌ಆರ್‌‌ಟಿಸಿ ಬಸ್ ನಿಲ್ದಾಣದಲ್ಲಿ ಸೋಮವಾರ ಅನುಮಾನಾಸ್ಪದ ಬ್ಯಾಗ್‌ವೊಂದು ಪತ್ತೆಯಾಗಿ ಆತಂಕಕ್ಕೆ ಕಾರಣವಾದ ಘಟನೆ ನಡೆದಿದೆ.

ಬ್ಯಾಗ್ ವಿಚಾರ ತಿಳಿದ ತಕ್ಷಣ ಬಾಂಬ್ ನಿಷ್ಕ್ರಿಯ ದಳ ,ಶ್ವಾನದಳ ದೌಡಾಯಿಸಿ ಪರಿಶೀಲನೆ ನಡೆಸಿದ್ದು, ಪರಿಶೀಲನೆ ಬಳಿಕ ಬ್ಯಾಗ್ ವಾರಿಸುದಾರ ಪತ್ತೆಯಾಗಿದ್ದು, ಪ್ರಯಾಣಿಕನ ಬ್ಯಾಗ್ ಎಂದು ತಿಳಿದು ನಿರಾಳವಾಯಿತು.

ಇನ್ನು ನಾಗುರಿಯಲ್ಲಿ ನಡೆದ ಆಟೋ ಕುಕ್ಕರ್ ಸ್ಟೋಟ ಘಟನೆಯ ಬಳಿಕ ಉನ್ನತ ಮಟ್ಟದ ತನಿಖೆ ನಡೆಸಲಾಗುತ್ತಿದ್ದು, ನಗರದಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ.

No Comments

Leave A Comment