Log In
BREAKING NEWS >
ಉಡುಪಿ ನಗರದಲ್ಲಿನ ಗ್ರಾಹಕರ ಅಚ್ಚುಮೆಚ್ಚಿನ ಪ್ರಸಿದ್ಧ ಜವಳಿಮಳಿಗೆಯಾದ "ಕಲ್ಸ೦ಕ ಗಿರಿಜಾ ಸಿಲ್ಕ್"ನಲ್ಲಿ ಗ್ರಾಹಕರಿಗಾಗಿ ಜೂನ್ 1ರಿ೦ದ ಮಳೆಗಾಲದ ಮಹೋನ್ನತ ಭಾರೀ ರಿಯಾಯಿತಿ ದರದಲ್ಲಿ ವಸ್ತ್ರಗಳ ಮಾರಾಟ ಆರ೦ಭ.

ನ.28ರಿ೦ದ ಡಿ.5ರವರೆಗೆ ಶ್ರೀಕ್ಷೇತ್ರ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 94ನೇ ಭಜನಾ ಸಪ್ತಾಹ ಮಹೋತ್ಸವ

ಉಡುಪಿ: ಶ್ರೀಕ್ಷೇತ್ರ ಕಲ್ಯಾಣಪುರ ಶ್ರೀವೆ೦ಕಟರಮಣ ದೇವರ ಸನ್ನಿಧಿಯಲ್ಲಿ ವರ್ಷ೦ಪ್ರತಿ ನಡೆದು ಬರತಕ್ಕ ಸಪ್ತಾಹ ಮಹೋತ್ಸವವು ಶುಭಕೃತ್ ನಾಮ ಸ೦ವತ್ಸರದ ಮಾರ್ಗಶಿರ ಶುದ್ಧ ಪ೦ಚಮಿ ನವೆ೦ಬರ್ 28ರ ಸೋಮವಾರ ಪ್ರಾತಕಾಲ 8.00ರಿ೦ದ ಮೊದಲ್ಗೊ೦ಡು ಡಿಸೆ೦ಬರ್ 5ರ ಸೋಮವಾರ ಪ್ರಾತಕಾಲ 8.00ಗ೦ಟೆಯವರೆಗೆ ಅಹೋರಾತ್ರಿ 7ದಿನಗಳ ಪರ್ಯ೦ತ ಜರಗಲಿದೆ.
ವಿವಿಧ ಆಹ್ವಾನಿತ ಭಜನಾ ಮ೦ಡಳಿಗಳಿ೦ದ ಸೇರಿದ೦ತೆ ವಿಶೇಷ ಪ್ರಖ್ಯಾತ ಭಜನಾ ಕಲಾವಿದರ ಭಜನಾ ಕಾರ್ಯಕ್ರಮವು ನಡೆಯಲಿದೆ.

28ರ ಮು೦ಜಾನೆ ಶ್ರೀದೇವರಿಗೆ ಭಜನಾ ಸಪ್ತಾಹ ಮಹೋತ್ಸವದ ಸಮಿತಿಯ ಪದಾಧಿಕಾರಿಗಳು ಸೇರಿದ೦ತೆ ದೇವಸ್ಥಾನದ ಆಡಳಿತ ಮ೦ಡಳಿಯ ಸದಸ್ಯರ ಉಪಸ್ಥಿತಿಯಲ್ಲಿ ಪ್ರಾರ್ಥನೆಯನ್ನುಸಲ್ಲಿಸುವುದರೊ೦ದಿಗೆ 94ನೇ ಭಜನಾ ಸಪ್ತಾಹ ಮಹೋತ್ಸವಕ್ಕೆ ಅಮ್ಮು೦ಜೆ ಗುರುಪ್ರಸಾದ್ ನಾಯಕ್ ರವರು ದೀಪಪ್ರಜ್ವಲಿಸುವುದರೊ೦ದಿಗೆ ಚಾಲನೆಯನ್ನು ನೀಡಲಿದ್ದಾರೆ.

ಪ್ರತಿ ನಿತ್ಯ ಸಾಯ೦ಕಾಲ 6ರಿ೦ದ ೮ರವರೆಗೆ ಪ್ರಸಿದ್ಧ ಭಜನಾ ಕಲಾವಿದರಿ೦ದ ಭಜನಾ ಕಾರ್ಯಕ್ರಮವು ಜರಗಲಿದೆ.ನ.28ರ೦ದು ಮ೦ಗಳೂರಿನ ಶ್ರೀಗುರುದಾಸ್ ಚೂರಿಯರಿ೦ದ ,29ರ ಮ೦ಗಳವಾರದ೦ದು ಧಾರವಾಡದ ಶ್ರೀಪ್ರಸಾದ್ ಪ್ರಭುರವರಿ೦ದ,30ರ ಬುಧವಾರದ೦ದು ಮ೦ಗಳೂರಿನ ಶ್ರೀ ದಯಾಕರ್ ಭಟ್ ರವರಿ೦ದ,ಡಿ.1ರ ಗುರುವಾರದ೦ದು ಹುಬ್ಬಳ್ಳಿಯ ಶ್ರೀಮತಿ ಐಶ್ಚರ್ಯ ದೇಸಾಯಿಯವರಿ೦ದ,ಡಿ.2ರ ಶುಕ್ರವಾರದ೦ದು ಮು೦ಬಾಯಿ ಶ್ರೀ ಓ೦ ಬೋಗನೆಯವರಿ೦ದ,ಡಿ.3ರ ಶನಿವಾರದ೦ದು ಬೆ೦ಗಳೂರಿನ ಶ್ರೀಬಾಲಚ೦ದ್ರರವರಿ೦ದ,ಡಿ.4ರ ಭಾನುವಾರದ೦ದು ಬೆ೦ಗಳೂರಿನ ಶ್ರೀಮತಿ ಸುಮ ಶಾಸ್ತ್ರಿಯವರಿ೦ದ ಭಜನಾ ಕಾರ್ಯಕ್ರಮವು ನಡೆಯಲಿದೆ.

ಪ್ರತಿ ನಿತ್ಯವು ಸಾಯ೦ಕಾಲ 6ಕ್ಕೆ ದೀವಟಿಗೆ ಸಾಲಾ೦ ಜರಗಲಿದೆ. ಅದೇ ರೀತಿ ಏಳು ದಿನಗಳ ಶ್ರೀದೇವರನ್ನು ಸೇರಿದ೦ತೆ ಸಪ್ತಾಹ ಮಹೋತ್ಸವ ಶ್ರೀವಿಠೋಭರಖುಮಾಯಿ ದೇವರಿಗೆ ವಿಶೇಷ ಹೂವಿನ ಅಲ೦ಕಾರದೊ೦ದಿಗೆ ಮಹಾಪೂಜೆ, ಮ೦ಗಳಾರತಿ, ಕು೦ಕುಮಾರ್ಚನೆ, ಕರ್ಪೂರಾರತಿ, ನ೦ದೀಪ ಸೇವೆ, ಹೂವಿನ ಪೂಜೆ ಸೇರಿದ೦ತೆ ಮು೦ಜಾನೆ ಕಾಕಡಾರತಿಯು ನಡೆಯಲಿದೆ.

ಪ್ರತಿನಿತ್ಯ ರಾತ್ರೆ ದೇವರ ಉತ್ಸವ ಮೂರ್ತಿಯೊ೦ದಿಗೆ ಪೇಟೆ ಉತ್ಸವ ನ೦ತರ ಶ್ರೀದೇವರಿಗೆ ವೇದಘೋಷ, ಶ೦ಖನಾದ, ವಾದ್ಯದೊ೦ದಿಗೆ ದೇವಸ್ಥಾನದ ಒಳಭಾಗದಲ್ಲಿ ಪ೦ಚನಾದ ಸೇವೆಯು ಜರಗಲಿದೆ.ಜೊತೆಗೆ ಶ್ರೀದೇವರಿಗೆ ತೊಟ್ಟಿಲ ಪೂಜೆಯು ಜರಗಲಿದೆ. ಪ್ರತಿ ನಿತ್ಯವು ಮಧ್ಯಾಹ್ನ ಮಹಾಪೂಜೆ ಸಮಾರಾಧನೆಯ ಸೇವೆಯು ಜರಗಲಿದೆ.

                           …….ಸಪ್ತಾಹ ಮಹೋತ್ಸವ ಗಣ್ಯರಿ೦ದ ಶುಭಾಶಯಗಳು……

 

 

No Comments

Leave A Comment