Log In
BREAKING NEWS >
ಕರಾವಳಿಯಲ್ಲಿ ಹೆಚ್ಚಿದ ಬಿಸಿಲಿನ ತಾಪಮಾನ-ಸಾವು ಸ೦ಭವಿಸುವ ಸಾಧ್ಯತೆ-ಎಚ್ಚರ ಬಿಸಿಲಿನಲ್ಲಿ ಹೊರಗೆ ಬರಲೇ ಬೇಡಿ....

ಜಾರ್ಖಂಡ್: ಮಾವೋವಾದಿಗಳು ಇಟ್ಟಿದ್ದ 120 ಸುಧಾರಿತ ಸ್ಫೋಟಗಳ ನಿಷ್ರ್ಕಿಯ

ಜಾರ್ಖಂಡ್: ಮಾವೋವಾದಿ ನಿಗ್ರಹ ಕಾರ್ಯಾಚರಣೆಯ ವೇಳೆ ಅವರು ಅಡಗಿಸಿಟ್ಟಿದ್ದ 120 ಸುಧಾರಿತ ಸ್ಫೋಟಕಗಳು ಪತ್ತೆಯಾಗಿದ್ದು, ಅವುಗಳನ್ನು ನಿಷ್ಕ್ರಿಯಗೊಳಿಸಲಾಗಿದೆ.

ಜಾರ್ಖಂಡ್ ನ ಲತೇಹರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಭದ್ರತಾ ಪಡೆಗಳನ್ನು ಟಾರ್ಗೆಟ್ ಮಾಡಿ ಈ ಸುಧಾರಿತ ಸ್ಫೋಟಕಗಳನ್ನು ಇರಿಸಲಾಗಿತ್ತು.

ಬುದಪಾಹದ್ ಎಂಬ ಪ್ರದೇಶದಲ್ಲಿ ಈ ಐಇಡಿಗಳು ಪತ್ತೆಯಾಗಿದ್ದು ಈ ಪ್ರದೇಶ ಈ ಹಿಂದೆ ಮಾವೋವಾದಿಗಳ ಭದ್ರಕೋಟೆಯಾಗಿತ್ತು. ಈಗ ಭದ್ರತಾ ಪಡೆಗಳು ಈ ಭಾಗದಲ್ಲಿ ಕ್ಯಾಂಪ್ ಮಾಡಿರುವುದರಿಂದ ಮಾವೋವಾದಿಗಳ ಉಪಟಳ ಕಡಿಮೆಯಾಗಿದೆ.

ಇದಕ್ಕೂ ಮುನ್ನ ಭದ್ರತಾಪಡೆಗಳು ಗುರುವಾರದಂದು 15 ಕೆ.ಜಿ ಕುಕ್ಕರ್ ಬಾಂಬ್, ಮೂರು ಡಿಟೋನೇಟರ್ ಗಳನ್ನು ಹಾಗೂ ಮೋಟ್ರೋಲಾ ವೈರ್ ಲೆಸ್ ಸೆಟ್ ನ್ನು ವಶಕ್ಕೆ ಪಡೆದಿದ್ದವು.

ಈ ಭಾಗದ ಮಾವೋವಾದಿ ನಾಯಕ ಮಿಸಿರ್ ಬೆಸ್ರಾ ಅಲಿಯಾಸ್ ಸಾಗರ್ ಅವರನ್ನು ಹುಡುಕಿ ಕೊಟ್ಟವರಿಗೆ ಅಥವಾ ಸುಳಿವು ನೀಡಿದವರಿಗೆ 1 ಕೋಟಿ ರೂಪಾಯಿ ಬಹುಮಾನ ಘೋಷಿಸಲಾಗಿದೆ. ಇನ್ನು ಕೊಲ್ಹನ್ ನಲ್ಲಿ ಭದ್ರತಾ ಪಡೆಗಳು 16 ಐಇಡಿ ಹಾಗೂ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಪತ್ತೆ ಮಾಡಿದೆ.

No Comments

Leave A Comment