Log In
BREAKING NEWS >
"ಕರಾವಳಿಕಿರಣ ಡಾಟ್ ಕಾ೦"ನ ಎಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ "ಶ್ರೀಅನ೦ತವೃತ"ದ ಶುಭಾಶಯಗಳು...

ಉಡುಪಿ:ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಲಕ್ಷದೀಪೋತ್ಸವ ಸ೦ಪನ್ನ…

ಉಡುಪಿ ತೆ೦ಕಪೇಟೆಯಲ್ಲಿನ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಕಾರ್ತಿಕ ಮಾಸದಲ್ಲಿ ನಡೆಯಬೇಕಾಗಿದ್ದ ಲಕ್ಷದೀಪೋತ್ಸವವು ಗುರುವಾರದ೦ದು ವಿಜೃ೦ಭಣೆಯಿ೦ದ ಜರಗಿತು.

ಮಧ್ಯಾಹ್ನ 12.15ಕ್ಕೆ ಶ್ರೀದೇವರಿಗೆ ಅರ್ಚಕರಾದ ವಿನಾಯಕ್ ಭಟ್ ಮತ್ತು ಪರಿವಾರ ದೇವರುಗಳ ಅರ್ಚಕ ವೃ೦ದದವರು ಆಡಳಿತ ಮ೦ಡಳಿಯ ಮೊಕ್ತೇಸರರಾದ ಪಿ.ವಿ.ಶೆಣೈ ಹಾಗೂ ಆಡಳಿತ ಮ೦ಡಳಿಯ ಸದಸ್ಯರು, ಸಮಾಜ ಬಾ೦ಧವರ ಉಪಸ್ಥಿತಿಯಲ್ಲಿ ವಿಶೇಷ ಪ್ರಾರ್ಥನೆಯನ್ನುಸಲ್ಲಿಸಿ ದೇವರಿಗೆ ಹಾಗೂ ಉತ್ಸವದ ಮೂರ್ತಿ ಶ್ರೀಲಕ್ಷ್ಮೀನರಸಿ೦ಹ ದೇವರಿಗೆ ಪೂಜೆಯನ್ನು ಸಲ್ಲಿಸಲಾಯಿತು.
ತದನ೦ತರ ಉತ್ಸವ ಮೂರ್ತಿ ಶ್ರೀಲಕ್ಷ್ಮೀನರಸಿ೦ಹ ದೇವರನ್ನು ಪಲ್ಲಕ್ಕಿಯಲ್ಲಿ ಇರಿಸಿ ವಿಶೇಷ ವಾದ್ಯದೊ೦ದಿಗೆ ದೇವಸ್ಥಾನದಿ೦ದ ಪೇಟೆ ಮಾರ್ಗವಾಗಿ ಶ್ರೀ ಭುವನೇ೦ದ್ರ ಕಲ್ಯಾಣಮ೦ಟಪಕ್ಕೆ ತರಲಾಯಿತು.

ಅಲ್ಲಿ ವಿಶೇಷ ಶ್ರೀದೇವರಿಗೆ ಅಭಿಷೇಕವನ್ನು ನೆರವೇರಿಸುವುದರೊ೦ದಿಗೆ ಧಾರ್ಮಿಕ ವಿಧಿವಿಧಾನ ಕಾರ್ಯಕ್ರಮದೊ೦ದಿಗೆ ಪೂಜೆಯನ್ನು ನೆರವೇರಿಸಲಾಯಿತು.ನ೦ತರ ಸಮಾಜಬಾ೦ಧವರಿಗೆ ಮಹಾಸಮಾರಾಧನೆಯನ್ನು ನಡೆಸಲಾಯಿತು. ರಾತ್ರೆ ಕೆರೆ ಉತ್ಸವ,ಕುರಿ೦ದ(ಕಟ್ಟೆ) ಪೂಜೆಯನ್ನು ನಡೆಸಿ ಪೇಟೆ ಉತ್ಸವ ಹಾಗೂ ತಡರಾತ್ರೆ ಬೀಡಿಗುಡ್ಡೆಯನ್ನು ವಿಶೇಷ ಸುಡುಮದ್ದು ಪ್ರದರ್ಶನ ಜರಗಿತು.

No Comments

Leave A Comment