Log In
BREAKING NEWS >
ಮಾ.28ರ೦ದು ಪಣಿಯಾಡಿ ಶ್ರೀಅನ೦ತಾಸನ ಶ್ರೀಲಕ್ಷ್ಮೀಪದ್ಮನಾಭ ದೇವಸ್ಥಾನದ ವಠಾರದಲ್ಲಿ ಶ್ರೀಏಕದ೦ತ ಸೇವಾ ಸಮಿತಿ ಪಣಿಯಾಡಿ ಉದ್ಘಾಟನಾ ಸಮಾರ೦ಭ ವು ಜರಗಿತು....

ದೇಶದ ಅತ್ಯಂತ ಭಾರದ ಎಲ್ ವಿಎಂ3 ರಾಕೆಟ್ ಎಂಜಿನ್ ಪರೀಕ್ಷೆ ಯಶಸ್ವಿ, ಪೇಲೋಡ್ ಸಾಮರ್ಥ್ಯ ಹೆಚ್ಚಳ

ಬೆಂಗಳೂರು: ಯಶಸ್ವಿ ಎಂಜಿನ್ ಪರೀಕ್ಷೆಯೊಂದಿಗೆ ದೇಶದ ಅತ್ಯಂತ ಭಾರವಾದ ಎಲ್ ವಿಎಂ3  ರಾಕೆಟ್ ನ ಪೇಲೋಡ್ ಸಾಮರ್ಥ್ಯವನ್ನು 450 ಕೆಜಿಯವರೆಗೂ ಹೆಚ್ಚಿಸಲಾಗಿದೆ ಎಂದು ಇಸ್ರೋ ಸಂಸ್ಥೆ ತಿಳಿಸಿದೆ.

ಉಡಾವಣಾ ವಾಹಕ ಎಲ್ ವಿಎಂ 3 ರಾಕೆಟ್ ಗಾಗಿ ಅಭಿವೃದ್ಧಿಪಡಿಸಿರುವ ಸ್ವದೇಶಿ ಸಿಇ20 ಕ್ರಯೋಜೆನಿಕ್ ಇಂಜಿನ್ ನ್ನು ನವೆಂಬರ್ 9 ರಂದು ಮೊದಲು 218 ಟನ್‌ಗಳ ಭಾರದೊಂದಿಗೆ ಯಶಸ್ವಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಇದು ಹೆಚ್ಚುವರಿ ಪ್ರೊಪೆಲ್ಹಾಂಟ್ ಲೋಡಿಂಗ್ ನೊಂದಿಗೆ  ಎಲ್ ವಿಎಂ3 ಪೇಲೋಡ್ ಸಾಮರ್ಥ್ಯವನ್ನು 450 ಕೆಜಿಗೆ ಹೆಚ್ಚಿಸಲಿದೆ ಎಂದು ಇಸ್ರೋ ಮಾಹಿತಿ ನೀಡಿದೆ.

ಇದರೊಂದಿಗೆ 3ಡಿ ಮುದ್ರಿತ ಎಲ್ ಒಎಕ್ಸ್ ಮತ್ತು ಎಲ್ ಹೆಚ್ 2 ಟರ್ಬೈನ್ ಎಕ್ಸಾಸ್ಟ್ ಕೇಸಿಂಗ್‌ಗಳನ್ನು ಇದೇ ಮೊದಲ ಬಾರಿಗೆ ಎಂಜಿನ್ ನಲ್ಲಿ ಅಳವಡಿಸಲಾಗಿದೆ. ಪರೀಕ್ಷೆ ವೇಳೆ ಎಂಜಿನ್ ಮತ್ತು ಸೌಲಭ್ಯದ ಕಾರ್ಯಕ್ಷಮತೆ ಸಾಮಾನ್ಯವಾಗಿದೆ ಮತ್ತು ಅಗತ್ಯವಿರುವ ನಿಯತಾಂಕಗಳನ್ನು ಸಾಧಿಸಲಾಗಿದೆ ಎಂದು ಅದು ಹೇಳಿದೆ.

ಮೂರು ಹಂತದ ಎಲ್ ವಿಎಂ 3 ರಾಕೆಟ್ ನಾಲ್ಕು ಟನ್ ಗಳ ಉಪಗ್ರಹಗಳನ್ನು ಬಾಹ್ಯಾಕಾಶ ಕಕ್ಷೆಗೆ ಉಡಾವಣೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ.

No Comments

Leave A Comment