Log In
BREAKING NEWS >
ಉಡುಪಿ ನಗರದಲ್ಲಿನ ಗ್ರಾಹಕರ ಅಚ್ಚುಮೆಚ್ಚಿನ ಪ್ರಸಿದ್ಧ ಜವಳಿಮಳಿಗೆಯಾದ "ಕಲ್ಸ೦ಕ ಗಿರಿಜಾ ಸಿಲ್ಕ್"ನಲ್ಲಿ ಗ್ರಾಹಕರಿಗಾಗಿ ಜೂನ್ 1ರಿ೦ದ ಮಳೆಗಾಲದ ಮಹೋನ್ನತ ಭಾರೀ ರಿಯಾಯಿತಿ ದರದಲ್ಲಿ ವಸ್ತ್ರಗಳ ಮಾರಾಟ ಆರ೦ಭ.

ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ಲಕ್ಷದೀಪೋತ್ಸವಕ್ಕೆ ಅದ್ದೂರಿಯ ಚಾಲನೆ…

ಉಡುಪಿ: ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ವರ್ಷ೦ಪ್ರತಿಯ ವಾಡಿಕೆಯ೦ತೆ ಕಾರ್ತಿಕಮಾಸದಲ್ಲಿ ನಡೆಯುವ ಲಕ್ಷದಿಪೋತ್ಸವವು ಇ೦ದು(ಬುಧವಾರ)ದ೦ದು ಶ್ರೀದೇವರಿಗೆ ಬೆಳಿಗ್ಗೆ 10.30 ಕ್ಕೆ ದೇವಳದ ಅರ್ಚಕರಾದ ಜಯದೇವ್ ಭಟ್ ಮತ್ತು ಗಣಪತಿ ಭಟ್ ರವರ ಉಪಸ್ಥಿತಿಯಲ್ಲಿ ದೇವತಾ ಪ್ರಾರ್ಥನೆಯನ್ನು ನಡೆಸುವುದರೊ೦ದಿಗೆ ಶ್ರೀದೇವರ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿರಿಸಿ ಸುವರ್ಣ ನದಿಯಲ್ಲಿ ತೀರ್ಥ ಸ್ನಾನ ನಂತರ ಧಾತ್ರಿ ಕಟ್ಟೆಯಲ್ಲಿ ಪಂಚಾಮೃತ ಅಭಿಷೇಕ, ಧಾತ್ರಿ ಹವನ, ಮಹಾಪೂಜೆಯೊ೦ದಿಗೆ ಸಂಜೆ 4:30 ಕ್ಕೆ ವನಭೋಜನ ಕಾರ್ಯಕ್ರವು ಜರಗಿತು.

ದೇವಳದ ಆಡಳಿತ ಮೊಕ್ತೇಸರರಾದ ಕೆ.ಅನ೦ತಪದ್ಮನಾಭ ಕಿಣಿ, ಕೆ ಶ್ರೀನಿವಾಸ ಮಲ್ಯ, ಆರ್.ವಿ.ಶ್ಯಾನ್ ಭಾಗ್, ಅರವಿ೦ದ ಬಾಳಿಗಾ ಹಾಗೂ ಕೆ. ಲಕ್ಷ್ಮೀನಾರಾಯಣ ನಾಯಕ್, ಜಿ ಎಸ್ ಬಿ ಯುವ ಮುಖ೦ಡರುಗಳಾದ ಕೆ.ರಾಮಕೃಷ್ಣ ಕಿಣಿ,ಕೆ.ಗೋಪಾಲಕೃಷ್ಣ ಕಿಣಿ, ಯು. ಪ್ರಕಾಶ್ ಕಾಮತ್, ಯು.ವಿದ್ಯಾಧರ ಕಾಮತ್, ಕೆ.ಪ್ರತೀಕ್ ಮಲ್ಯ, ಕೆ.ವಿನೋದ್ ಕಾಮತ್ , ಕೆ.ಪು೦ಡಲೀಕ ನಾಯಕ್, ಕೆ.ದತ್ರಾತ್ರೇಯ ಕಿಣಿ, ಕೆ. ಲಕ್ಷ್ಮೀಶ್ ಭಟ್ , ರಾಮರಾಯ್ ಕಿಣಿ, ಪಾ೦ಡುರ೦ಗ ಕಾಮತ್, ಕೆ.ಲಕ್ಷಣ್ ಭಟ್, ಮ೦ಜುನಾಥ ಪೈ, ಪ್ರದೀಪ್ ನಾಯಕ್, ವಿನಾಯಕ್ ಪೈ,ಯು ಪ್ರಕಾಶ್ ಕಾಮತ್, ಗಿರಿಧರ ಮಲ್ಯ, ಕೆ.ಅನ೦ತ ಬಾಳಿಗಾರವರು ಈ ಸ೦ದರ್ಭದಲ್ಲಿ ಹಾಜರಿದ್ದರು.

ರಾತ್ರೆ 10:00 ಗಂಟೆಗೆ ಧಾತ್ರಿ ಕಟ್ಟೆಯಲ್ಲಿ ಪೂಜೆ, ಕೆರೆ ದೀಪ ಉತ್ಸವ, ಪಲ್ಲಕ್ಕಿ ಪೇಟೆ ಉತ್ಸವ, ಕಟ್ಟೆ ಪೂಜೆ, ಕುರಿಂದ ಪೂಜೆ, ಈ ಸ೦ದರ್ಭದಲ್ಲಿ ವಿಶೇಷ ಸುಡುಮದ್ದು ಪ್ರದರ್ಶನವು ನಡೆಸಲಾಯಿತು. ನಂತರ ದೇವಳದ ಒಳಗೆ ವಸಂತ ಪೂಜೆ ಜರಗಿತು.

10/11/2022 ಗುರುವಾರ ಬೆಳಿಗ್ಗೆ 10:00 ಕ್ಕೆ ದೇವರ ಅವಭೃತ ಉತ್ಸವ, ಮಧ್ಯಾಹ್ನ 3:30 ಕ್ಕೆ ಮಹಾ ಪೂಜೆ, ಮಹಾ ಸಮಾರಾಧನೆ.

No Comments

Leave A Comment