Log In
BREAKING NEWS >
"ಕರಾವಳಿಕಿರಣ ಡಾಟ್ ಕಾ೦"ನ ಎಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ "ಶ್ರೀಅನ೦ತವೃತ"ದ ಶುಭಾಶಯಗಳು...

ವಿದ್ಯಾರ್ಥಿನಿಯನ್ನು ವರಿಸಲು ಲಿಂಗ ಬದಲಾಯಿಸಿಕೊಂಡ ಶಿಕ್ಷಕಿ!

ಭರತ್ ಪುರ್(ರಾಜಸ್ಥಾನ), ನ 08 : ಪ್ರೀತಿ ಕುರುಡು ಅಂತಾರೆ. ಅದಕ್ಕೆ ಪೂರಕವಾಗುವ ನೈಜ ಕತೆಯೊಂದು ಇಲ್ಲಿದೆ. ತಾನೇ ಕಲಿಸಿದ ವಿದ್ಯಾರ್ಥಿನಿಯನ್ನು ಮದುವೆಯಾಗಲು ಶಿಕ್ಷಕಿಯೊಬ್ಬಳು ಲಿಂಗಪರಿವರ್ತನೆ ಮಾಡಿಸಿಕೊಂಡು ಹುಡುಗನಾಗಿ ಬದಲಾಗಿದ್ದಾಳೆ!

ರಾಜಸ್ಥಾನದ ಭರತ್ ಪುರ್ ಶಾಲೆಯ ದೈಹಿಕ ಶಿಕ್ಷಕಿ ಮೀರಾ ಎಂಬಾಕೆಯೇ ಲಿಂಗಪರಿವರ್ತನೆ ಮಾಡಿಕೊಂಡಾಕೆ. ಈಕೆ ತನ್ನ ವಿದ್ಯಾರ್ಥಿನಿ, ರಾಜ್ಯ ಮಟ್ಟದ ಕಬಡ್ಡಿ ಆಟಗಾರ್ತಿ ಕಲ್ಪನಾ ಪೌಜ್‌ದಾರ್‌ ಎಂಬಾಕೆಯನ್ನು ಪ್ರೀತಿಸುತ್ತಿದ್ದಳು. ಈಕೆಯ ಪ್ರೀತಿಯನ್ನು ಕಲ್ಪನಾಳೂ ಒಪ್ಪಿಕೊಂಡಿದ್ದಳು. ಬಳಿಕ ಆಕೆಯನ್ನು ವಿವಾಹವಾಗುವ ಸಲುವಾಗಿ ಮೀರಾ ಲಿಂಗಪರಿವರ್ತನೆ ಮಾಡಿಸಿಕೊಂಡು ಆರವ್ ಕುಂತಲ್ ಎಂದು ಹೆಸರು ಬದಲಾಯಿಸಿಕೊಂಡಿದ್ದಾರೆ.

ಕಲ್ಪನಾಳಾ ದೈಹಿಕ ಶಿಕ್ಷಣ ಶಿಕ್ಷಕಿಯಾಗಿರುವ ಮೀರಾ ತರಬೇತಿ ವೇಳೆ ಆಕೆಯೊಂದಿಗೆ ಮಾತನಾಡುತ್ತಾ, ನಿಧಾನಕ್ಕೆ ಪ್ರೀತಿಯಲ್ಲಿ ಬಿದ್ದಿದ್ದಾಳೆ. ಆಕೆಯ ಪ್ರೀತಿಗೆ ಒಪ್ಪಿದ್ದ ಕಲ್ಪನಾ ಆಕೆ ಹುಡುಗನಾಗಬೇಕೆಂದು ಬಯಸುತ್ತಿದ್ದಳಂತೆ. ಇತ್ತ ಹೆಣ್ಣಾಗಿದ್ದ ಮೀರಾಳಿಗೆ ತಾನೂ ಹುಡುಗ ಎಂಬ ಕಲ್ಪನೆಯಿತ್ತಂತೆ. ಕೊನೆಗೆ ಶಸ್ತ್ರಚಿಕಿತ್ಸೆಗೊಳಪಟ್ಟು ಲಿಂಗ ಪರಿವರ್ತನೆ ಮಾಡಿಕೊಂಡಿದ್ದಾಳೆ. 2019ರ ಡಿಸೆಂಬರ್ ನಲ್ಲಿ ಆಕೆಗೆ ಮೊದಲ ಸರ್ಜರಿ ಆಗಿತ್ತು.

ಇನ್ನು ಆರವ್ (ಮೀರಾ) ಅವರನ್ನು ನಾನು ಹಲವು ಸಮಯಗಳಿಂದ ಪ್ರೀತಿಸುತ್ತಿದ್ದು, ಒಂದು ವೇಳೆ ಅವರು ಲಿಂಗ ಪರಿವರ್ತನೆ ಮಾಡಿಸಿಕೊಳ್ಳದಿದ್ದರೂ ನಾನವರನ್ನು ಮದುವೆಯಾಗುತ್ತಿದ್ದೆ ಎಂದು ಕಲ್ಪನಾ ಹೇಳಿದ್ದಾಳೆ.

No Comments

Leave A Comment