Log In
BREAKING NEWS >
ಉಡುಪಿ ನಗರದಲ್ಲಿನ ಗ್ರಾಹಕರ ಅಚ್ಚುಮೆಚ್ಚಿನ ಪ್ರಸಿದ್ಧ ಜವಳಿಮಳಿಗೆಯಾದ "ಕಲ್ಸ೦ಕ ಗಿರಿಜಾ ಸಿಲ್ಕ್"ನಲ್ಲಿ ಗ್ರಾಹಕರಿಗಾಗಿ ಜೂನ್ 1ರಿ೦ದ ಮಳೆಗಾಲದ ಮಹೋನ್ನತ ಭಾರೀ ರಿಯಾಯಿತಿ ದರದಲ್ಲಿ ವಸ್ತ್ರಗಳ ಮಾರಾಟ ಆರ೦ಭ.

ಹೊಳೆಗೆ ಕಾಲು ಜಾರಿ ಬಿದ್ದ ಬಾಲಕನ ರಕ್ಷಣೆಗೆ ತೆರಳಿದ ಮೂವರು ಸೇರಿ ನಾಲ್ವರು ಮೃತ್ಯು

ಹರಪನಹಳ್ಳಿ, ನ 02 : ಹರಪನಹಳ್ಳಿ ತಾಲೂಕಿನ ಚನ್ನಹಳ್ಳಿ ತಾಂಡದಲ್ಲಿ ಬಟ್ಟೆ ತೊಳೆಯಲು ಗೋಕಟ್ಟೆಗೆ ತೆರಳಿದ್ದ ನಾಲ್ವರು ಕಾಲು ಜಾರಿ ಬಿದ್ದು ಮೃತಪಟ್ಟಿರುವ ಘಟನೆ ನಡೆದಿದೆ.

ಚನ್ನಹಳ್ಳಿ ತಾಂಡದ ಕಾವ್ಯಾಂಜಲಿ (21) ನಂದಿಬೇವೂರು ತಾಂಡದ ಅಭಿಷೇಕ (15), ಹಾಗೂ ಕುಮಾರಿ ಅಶ್ವಿನಿ (18) ಮತ್ತು ತುಂಬಿನಕೇರಿ ದೊಡ್ಡತಾಂಡದ ಕು.ಅಪೂರ್ವ (14) ಮೃತಪಟ್ಟವರು.

ಮೃತರು ಬಟ್ಟೆ ತೊಳೆಯಲು ಬುಧವಾರ ಚನ್ನಹಳ್ಳಿ ತಾಂಡದ ಸಮೀಪದಲ್ಲಿರುವ ಗೋಕಟ್ಟೆಗೆ ತೆರಳಿದ್ದಾರೆ ಆ ಸಂದರ್ಭದಲ್ಲಿ ಮೊದಲಿಗೆ ಅಭಿಷೇಕ್ ಎಂಬುವರು ಕಾಲು ಜಾರಿ ಬಿದ್ದು ನೀರಿನಲ್ಲಿ ಮುಳುಗಿದ್ದು, ಆತನನ್ನು ರಕ್ಷಿಸಲು ಹೋಗಿ ಕಾವ್ಯಾಂಜಲಿ ಸಹ ಆಯಾತಪ್ಪಿ ನೀರಿನಲ್ಲಿ ಬಿದ್ದಿದ್ದಾಳೆ. ಕಾವ್ಯಾಂಜಲಿ ಉಳಿಸಲು ಹೋಗಿ ಕುಮಾರಿ ಅಪೂರ್ವ ಮತ್ತು ಅಶ್ವಿನಿ ಇವರು ಸಹ ನೀರಿನಲ್ಲಿ ಮುಳುಗಿದ್ದಾರೆ ಹೀಗೆ ಮೂವರು ಯುವತಿಯರು ಒಬ್ಬ ಬಾಲಕ ಸೇರಿ ಒಟ್ಟು ನಾಲ್ಕು ಜನ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ಈ ಬಗ್ಗೆ ಹರಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No Comments

Leave A Comment