Log In
BREAKING NEWS >
```````ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಓದುಗರಿಗೆಮತ್ತು ಅಭಿಮಾನಿಗಳಿಗೆ ಶ್ರೀಗೌರಿ-ಗಣೇಶ ಹಬ್ಬದ ಶುಭಾಶಯಗಳು````````

ಧೀಡಿರ್ ಮಳೆಯಿಂದ ಇಂದ್ರಾಳಿ ರೈಲ್ವೆ ಮೇಲ್ಸೇತುವೆ ರಸ್ತೆಯಲ್ಲಿ ಟ್ರಾಫಿಕ್ ಜಾಮ್ : ಕೆಲವು ನಿಮಿಷಗಳ ಕಾಲ ಬ್ಲಾಕ್ ನಲ್ಲಿ ಸಿಲುಕಿದ ಆಂಬುಲೆನ್ಸ್

ಮಣಿಪಾಲ : ಉಡುಪಿ ನಗರದ ಮಣಿಪಾಲಕ್ಕೆ ಹೋಗುವ ರಸ್ತೆಯಲ್ಲಿ ಇಂದ್ರಾಳಿ ರೈಲ್ವೆ ಬ್ರಿಡ್ಜ್ ಸಮೀಪ ರಸ್ತೆ ದುರಸ್ತಿಯ ಕಾರಣ ಅಲ್ಲಿ ದಿನಾಲೂ ಟ್ರಾಫಿಕ್ ಜಾಮ್. ಪ್ರಯಾಣಿಕರು ದಿನಾ ಪರದಾಡುವ ಪರಿಸ್ಥಿತಿ ಉಂಟಾಗಿದೆ.

ನಿನ್ನೆ ಮಣಿಪಾಲ ಕಡೆಯಿಂದ ಉಡುಪಿಗೆ ಹೊರ ಜಿಲ್ಲೆಗಳ ಆಂಬುಲೆನ್ಸ್ ಬರುವಾಗ, ದಯವಿಟ್ಟು ಮಣಿಪಾಲದಲ್ಲೇ ಆಂಬುಲೆನ್ಸ್ ಗಳ ಮಾರ್ಗ ಡೈವರ್ಟ್ ಮಾಡಿ, ಇಂದು ಎರಡು ಆಂಬುಲೆನ್ಸ್ ಗಳು 15 ನಿಮಿಷಗಳ ಕಾಲ ಬ್ಲಾಕ್ ನಲ್ಲಿ ಸಿಲುಕಿ ಸಂಕಷ್ಟ ಅನುಭವಿಸಿದ್ದನ್ನು ಕಣ್ಣಾರೆ ಕಂಡಿದ್ದೇವೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜನರು ರೋಡ್ ಬ್ಲಾಕ್ ಸಮಸ್ಯೆಯಿಂದ ರೋಸಿ ಹೋಗಿ ಮಣಿಪಾಲ ಅಥವಾ ಉಡುಪಿ ಕಡೆಯಿಂದ ಇಂದ್ರಾಳಿ ರೈಲ್ವೆ ಬ್ರಿಜ್ ಬಳಿ ಬಂದರೆ, ಅಲ್ಲಿ ಟ್ರಾಫಿಕ್ ಪೊಲೀಸರು ದಂಡ ಹಾಕಲು ಕಾದು ಕುಳಿತಿರುತ್ತಾರೆ.  ರಸ್ತೆ ಅವ್ಯವಸ್ತೆ ಬಗ್ಗೆ ಹಿಡಿಶಾಪ ಹಾಕಿಕೊಂಡು ಬರುವ ಜನರಿಂದ ದಂಡ ವಸೂಲಿ ಮಾಡುವುದು ಸರಿಯೇ? ದಯವಿಟ್ಟು ಸರಿಯಾಗಿರುವ ಯಾವುದಾದರೂ ರಸ್ತೆಯಲ್ಲಿ ನಿಂತು ಬೇಕಿದ್ದರೆ ದಂಡ ಹಾಕಿ, ರೈಲ್ವೆ ಬ್ರಿಜ್ ಬಳಿ ದಂಡ ಹಾಕುವುದನ್ನು ನಿಲ್ಲಿಸಿ…ಇದರಿಂದ ಮತ್ತಷ್ಟು ರೋಡ್ ಬ್ಲಾಕಿಗೆ ಕಾರಣವಾಗುತ್ತಿದೆ.

ಪೊಲೀಸರ ಕಣ್ಣು ತಪ್ಪಿಸಿ ಒಳ ರಸ್ತೆಗಳಲ್ಲಿ ಬಸ್ಸುಗಳು ಬಂದು ಒಳ ರಸ್ತೆಗಳಲ್ಲೂ ಬ್ಲಾಕ್ ಉಂಟಾಗುತ್ತಿದೆ. ಒಳ ರಸ್ತೆಗಳಲ್ಲಿ ಯಾವುದೇ ಪೊಲೀಸ್ ವ್ಯವಸ್ಥೆ ಇರುವುದಿಲ್ಲ.ಕೇವಲ ಒಬ್ಬ ಪೊಲೀಸ್ ಮಾತ್ರ ನಿಂತಿರುತ್ತಾರೆ.

No Comments

Leave A Comment