ಮಧ್ಯಪ್ರದೇಶ: ದೀಪಾವಳಿ ಹಬ್ಬಕ್ಕೆ ಊರಿಗೆ ಹೋಗುತ್ತಿದ್ದವರ ಮೇಲೆ ಎರಗಿದ ಜವರಾಯ; ಬಸ್-ಲಾರಿ ಡಿಕ್ಕಿ, 15 ಮಂದಿ ದಾರುಣ ಸಾವು, 35 ಜನರಿಗೆ ಗಾಯ
ರೇವಾ(ಮಧ್ಯಪ್ರದೇಶ): ಬಸ್ ಮತ್ತು ಟ್ರಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ 15 ಮಂದಿ ಸಾವನ್ನಪ್ಪಿ 35 ಪ್ರಯಾಣಿಕರು ಸಾವನ್ನಪ್ಪಿದ್ದಾರೆ.
ಬಸ್ಸಿನಲ್ಲಿ 100 ಪ್ರಯಾಣಿಕರಿದ್ದರು. ರೇವಾದ ಸುಹಾಗಿ ಪಹರಿಯಲ್ಲಿ ನಿಂತಿದ್ದ ಟ್ರಕ್ಗೆ ಹಿಂದಿನಿಂದ ಬಂದು ಬಸ್ ಗುದ್ದಿದೆ. ದುರ್ಘಟನೆಯಲ್ಲಿ ಗಾಯಗೊಂಡವರನ್ನ ಸುಹಾಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗಂಭೀರವಾಗಿ ಗಾಯಗೊಂಡವ್ರನ್ನ ರೇವಾದ ಸಂಜಯ್ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರಾಥಮಿಕ ಮಾಹಿತಿ ಪ್ರಕಾರ ಬಸ್ ಹೈದರಾಬಾದ್‌ನಿಂದ ಗೋರಖ್‌ಪುರಕ್ಕೆ ಹೋಗುತ್ತಿತ್ತು. ಬಸ್ಸಿನಲ್ಲಿದ್ದ ಎಲ್ಲ ಪ್ರಯಾಣಿಕರು ಜನರು ಉತ್ತರ ಪ್ರದೇಶ ನಿವಾಸಿಗಳು ಎಂದು ವರದಿಯಾಗಿದೆ.
ರೇವಾ ಎಸ್ಪಿ ನವ್ನೀತ್ ಭಸಿನ್ ಘಟನೆ ಬಗ್ಗೆ ಮಾಹಿತಿ ನೀಡಿ, ಬಸ್ ಮಧ್ಯಪ್ರದೇಶ ಕಟ್ನಿಯಿಂದ ಹೊರಟಿತ್ತು. ಮೃತರೆಲ್ಲಾ ಕಾರ್ಮಿಕರಾಗಿದ್ದು, ಹೈದರಾಬಾದ್ಗೆ ಪ್ರತ್ಯೇಕ ಬಸ್ನಲ್ಲಿ ತೆರಳುತ್ತಿದ್ದರು. ದೀಪಾವಳಿ ಹಬ್ಬ ಹಿನ್ನೆಯಲ್ಲಿ ಊರಿಗೆ ಹೋಗುತ್ತಿದ್ದರು. ಹೆಚ್ಚಿನ ಮಾಹಿತಿಯನ್ನ ಕಲೆ ಹಾಕಲಾಗುತ್ತಿದೆ ಎಂದು ತಿಳಿಸಿದ್ದಾರೆ. ದುರಂತದ ಬಗ್ಗೆ ಮಧ್ಯ ಪ್ರದೇಶದ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವರು, ದುಃಖ ವ್ಯಕ್ತಪಡಿಸಿದ್ದಾರೆ.