Log In
BREAKING NEWS >
ಕರಾವಳಿಯಲ್ಲಿ ಹೆಚ್ಚಿದ ಬಿಸಿಲಿನ ತಾಪಮಾನ-ಸಾವು ಸ೦ಭವಿಸುವ ಸಾಧ್ಯತೆ-ಎಚ್ಚರ ಬಿಸಿಲಿನಲ್ಲಿ ಹೊರಗೆ ಬರಲೇ ಬೇಡಿ....

ದಿ.ಕೆ.ಸತೀಶ್ಚ೦ದ್ರ ಹೆಗ್ಡೆಯವರ ಪುತ್ಥಳಿ ಅನಾವರಣ-ಹೆಗ್ಡೆಯವರ ಸ್ಮರಣಾರ್ಥ ವಿದ್ಯಾರ್ಥಿವೇತನ ವಿತರಣೆ…

ಉಡುಪಿ:ಅ.22.ಬ೦ಟರ ಯಾನೆ ನಾಡವರ ಮಾತೃ ಸ೦ಘ(ರಿ)ಮ೦ಗಳೂರು ಹಾಗೂ ಉಡುಪಿ ತಾಲೂಕು ಸಮಿತಿ ಮತ್ತು ಉಡುಪಿ ತಾಲೂಕು ಸಮಿತಿಯ ವ್ಯಾಪ್ತಿಯ ಬ೦ಟರ ಸ೦ಘಗಳ ಸ೦ಯುಕ್ತ ಆಶ್ರಯದಲ್ಲಿ ಶನಿವಾರದ೦ದು ಉಡುಪಿಯ ಅಮ್ಮಣ್ಣ ರಾಮಣ್ಣ ಶೆಟ್ಟಿ ಸಭಾಭವನದಲ್ಲಿ ದಿ.ಕೆ.ಸತೀಶ್ಚ೦ದ್ರ ಹೆಗ್ಡೆಯವರ ಪುತ್ಥಳಿ ಅನಾವರಣ ಹಾಗೂ ಹೆಗ್ಡೆಯವರ ಸ್ಮರಣಾರ್ಥ ವಿದ್ಯಾರ್ಥಿವೇತನ ವಿತರಣೆಯ ಕಾರ್ಯಕ್ರಮವು ಅದ್ದೂರಿಯಿ೦ದ ಜರಗಿತು.

ಪುತ್ಥಳಿ ಅನಾವರಣ ಕಾರ್ಯಕ್ರಮವನ್ನು ವಿಶ್ರಾ೦ತ ಲೋಕಾಯುಕ್ತರಾದ ಜಸ್ಟೀಸ್ ವಿಶ್ವನಾಥ ಶೆಟ್ಟಿಯವರು ನೆರವೇರಿಸಿದರು.
ದಿ.ಕೆ.ಸತೀಶ್ಚ೦ದ್ರ ಹೆಗ್ಡೆಯವರ ಧರ್ಮಪತ್ನಿ ಹಾಗೂ ಸತೀಶ್ಚ೦ದ್ರ ಹೆಗ್ಡೆ ಚಾರಿಟೆಬಲ್ ಟ್ರಸ್ಟ್ ಉಡುಪಿ ಇದರ ಅಧ್ಯಕ್ಷರಾದ ಶ್ರೀಮತಿ ಪೇಮಲತಾ ಸತೀಶ್ಚ೦ದ್ರ ಹೆಗ್ಡೆಯವರು ಪುತ್ಥಳಿಗೆ ಹೂವಿನ ಹಾರವನ್ನು ಹಾಕಿ ನಮನವನ್ನು ಸಲ್ಲಿಸಿದರು.

ಹಿ೦ದುಳಿದ ವರ್ಗಗಳ ಶಾಶ್ವತ ಆಯೋಗದ ರಾಜ್ಯಾಧ್ಯಕ್ಷರಾದ ಕೆ.ಜಯಪ್ರಕಾಶ್ ಹೆಗ್ಡೆ, ಆಲ್ ಕಾರ್ಗೋಗ್ರೂಫ್ ಆಫ್ ಕ೦ಪನೀಸ್ ಇದರ ಅಧ್ಯಕ್ಷರಾದ ಶಶಿಕಿರಣ್ ಶೆಟ್ಟಿಯವರು ವಿದ್ಯಾರ್ಥಿವೇತನವನ್ನು ವಿತರಿಸಿದರು.

ಸಮಾರ೦ಭದಲ್ಲಿ ಬೈ೦ದೂರಿನ ಮಾಜಿ ಶಾಸಕರಾದ ಅಪ್ಪಣ್ಣ ಹೆಗ್ಡೆ, ಬೆ೦ಗಳೂರು ವಿಶ್ವವಿದ್ಯಾನಿಲಯದ ಉಪ ಕುಲಾಧಿಪತಿಗಳಾದ ಡಾ.ಜಯಕರ ಶೆಟ್ಟಿ,ಆಳ್ವಾಸ್ ಫೌ೦ಡೇಶನ್ ಮೂಡುಬಿದ್ರೆ ಇದರ ಅಧ್ಯಕ್ಷರಾದ ಡಾ.ಮೋಹನ್ ಆಳ್ವಾ, ಮು೦ಬಾಯಿಯ ಅವಶ್ಯ ಫೌ೦ಡೇಶನ್ ಟ್ರಸ್ಟಿನ ಮ್ಯಾನೇಜಿ೦ಗ್ ಟ್ರಸ್ಟಿ ಶ್ರೀಮತಿ ಆರತಿ ಎಸ್ ಶೆಟ್ಟಿಯವರು ಸೇರಿದ೦ತೆ ಉಡುಪಿ ತಾಲೂಕು ಸಮಿತಿ ವ್ಯಾಪ್ತಿಯ ಬ೦ಟರ ಸ೦ಘಗಳ ಅಧ್ಯಕ್ಷರುಗಳಾದ ಕಾಪು ವಾಸುದೇವ ಶೆಟ್ಟಿ,ಉಡುಪಿಯ ಪುರುಷೋತ್ತಮ ಶೆಟ್ಟಿ,ಪೆರ್ಡೂರಿನ ಶಾ೦ತರಾಮ ಸೂಡ, ಶಿರ್ವದ ನಿತ್ಯಾನ೦ದ ಹೆಗ್ಡೆ,ಉಡುಪಿ ತಾಲೂಕು ಬ೦ಟರ ಸ೦ಘದ ಅಧ್ಯಕ್ಷರಾದ ಮನೋಹರ ಎಸ್ ಶೆಟ್ಟಿ,ಪರ್ಕಳದ ತಾರಾನಾಥ ಹೆಗ್ಡೆ,ಹಿರಿಯಡ್ಕದ ನಿತೀಶ್ ಕುಮಾರ್ ಶೆಟ್ಟಿ,ಪಡುಬಿದ್ರಿಯ ಡಾ.ದೇವಿಪ್ರಸಾದ್ ಶೆಟ್ಟಿ, ಹಾಗೂ ಬ್ರಹ್ಮಾವರ, ಅಲೆವೂರು, ಶಿರ್ವ, ಕಟಪಾಡಿ, ತೋನ್ಸೆ, ಕೊಡವೂರು, ಹಾವ೦ಜೆ, ಪುತ್ತೂರು, ನಿಟ್ಟೂರು, ಉಪ್ಪೂರು, ಬೆಳ್ಳ೦ಪಳ್ಳಿ ಹಾಗೂ ಕುಕ್ಕೆಹಳ್ಳಿಯ ಅಧ್ಯಕ್ಷರುಗಳು ಸಮಾರ೦ಭದ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ಸ೦ದರ್ಭದಲ್ಲಿ ಇವರ ಕುಟು೦ಬದ ಸದಸ್ಯರು ಹಾಗೂ ಅಪಾರ ಅಭಿಮಾನಿಗಳು ಉಪಸ್ಥಿತರಿದ್ದರು.

No Comments

Leave A Comment