Log In
BREAKING NEWS >
ಕರಾವಳಿಯಲ್ಲಿ ಹೆಚ್ಚಿದ ಬಿಸಿಲಿನ ತಾಪಮಾನ-ಸಾವು ಸ೦ಭವಿಸುವ ಸಾಧ್ಯತೆ-ಎಚ್ಚರ ಬಿಸಿಲಿನಲ್ಲಿ ಹೊರಗೆ ಬರಲೇ ಬೇಡಿ....

ಲಿಜ್‌ಗೆ ಮತ್ತೊಂದು ಸಂಕಟ-ಗೃಹ ಕಾರ್ಯದರ್ಶಿ ಹುದ್ದೆಗೆ ಭಾರತ ಮೂಲದ ಸುಯೆಲ್ಲಾ ರಾಜೀನಾಮೆ

ಇಂಗ್ಲೆಂಡ್: ಅ 20: ಬ್ರಿಟನ್ ಪ್ರಧಾನಿ ಹುದ್ದೆಗೇರಿದ ಕೆಲವೇ ವಾರಗಳಲ್ಲೇ ಲಿಜ್ ಟ್ರಸ್‌ ಅವರಿಗೆ ಬಂಡಾಯದ ಬಿಸಿ ತಟ್ಟುತ್ತಿದ್ದು, ಸ್ವಪಕ್ಷೀಯರೇ ಬಂಡಾಯವೇಳುತ್ತಿದ್ದಾರೆ. ಇದೀಗ ಲಿಜ್ ನೇಮಕ ಮಾಡಿದ್ದ ಭಾರತೀಯ ಮೂಲದ ಬ್ಯಾರಿಸ್ಟರ್​ ಸುಯೆಲ್ಲಾ ಬ್ರಾವರ್​ಮನ್​​ ತಮ್ಮ ಗೃಹ ಇಲಾಖೆ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ.

ಪ್ರಧಾನಿಯಾದ ಬಳಿಕ ಲಿಜ್ ಅವರು ಭಾರತ ಮೂಲದ ಬ್ಯಾರಿಸ್ಟರ್​ ಸುಯೆಲ್ಲಾ ಬ್ರಾವರ್​ಮನ್​​ ಅವರನ್ನು ಗೃಹ ಇಲಾಖೆ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿದ್ದರು. ಆದರೆ ಇದೀಗ ತಮ್ಮ ಖಾಸಗಿ ಇಮೇಲ್‌ನಿಂದ ರಾಜೀನಾಮೆ ಪತ್ರ ಸಲ್ಲಿಸಿರುವ ಸುಯೆಲ್ಲಾ ಗೃಹ ಇಲಾಖೆ ಕಾರ್ಯದರ್ಶಿ ಹುದ್ದೆ ಒಪ್ಪಿಕೊಂಡು ನಾನು ತಪ್ಪು ಮಾಡಿದೆ, ಈಗ ರಾಜೀನಾಮೆ ನೀಡುತ್ತಿದ್ದೇನೆ ಎಂದಿದ್ದಾರೆ. ಈಗಾಗಲೇ ಬಜೆಟ್​ ವಿಚಾರದಲ್ಲಿ ಅಸಮಾಧಾನಗೊಂಡ ಕ್ವಾಸಿ ಕ್ವಾರ್ಟೆಂಗ್ ಹಣಕಾಸು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದೀಗ ಸುಯೆಲ್ಲಾ ರಾಜೀನಾಮೆ ಲಿಜ್ ಭವಿಷ್ಯವನ್ನು ಇನ್ನಷ್ಟು ಸಂಕಟಕ್ಕೆ ದೂಡಿದೆ.

ಪ್ರಧಾನಿಯಾದ ಆರೇಳು ವಾರಗಳಲ್ಲೇ ಲಿಜ್ ಬಂಡಾಯದ ಬಿಸಿ ಅನುಭವಿಸುತ್ತಿದ್ದಾರೆ. ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳಿಗೆ ಸರಿಯಾಗಿ ಲಿಜ್ ನಡೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿ ಸ್ವಪಕ್ಷೀಯರೇ ಲಿಜ್ ವಿರುದ್ದ ನಿಂತಿದ್ದಾರೆ. ಅಲ್ಲದೇ ಒಬ್ಬೊಬ್ಬರೇ ಸಂಪುಟ ತೊರೆಯುತ್ತಿರುವುದಾಗಿಯೂ ವರದಿಯಾಗಿದೆ.

ಕ್ವಾಸಿ ಕ್ವಾರ್ಟೆಂಗ್‌ರಿಂದ ತೆರವಾದ ಸ್ಥಾನಕ್ಕೆ ಜೆರಿಮಿ ಹಂಟ್​ ಹಾಗೂ ಬ್ರಾವರ್​ಮನ್​ರಿಂದ ತೆರವಾದ ಸ್ಥಾನಕ್ಕೆ ಗ್ರಾಂಟ್ಸ್​ ಶಾಪ್ಸ್​​ರನ್ನು ಟ್ರಸ್​​‌ರನ್ನು ನೇಮಕ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಚುನಾವಣೆಗೂ ಪೂರ್ವ ತೆರಿಗೆ ಕಡಿತ ಮಾಡುವುದಾಗಿ ಘೋಷಿಸಿದ್ದ ಲಿಜ್ ಆ ಘೋಷಣೆಯನ್ನು ಕಳೆದ ತಿಂಗಳು ಹಿಂತೆಗೆದುಕೊಂಡಿದ್ದರು. ಅಲ್ಲದೆ ನೀಡಿದ್ದ ಭರವಸೆಗಳ ಬಗ್ಗೆ ಅಸಡ್ಡೆ ತೋರಿದ್ದರು ಎಂಬುದು ಅವರ ಮೇಲಿರುವ ಆರೋಪ.

No Comments

Leave A Comment