Log In
BREAKING NEWS >
"ಕರಾವಳಿಕಿರಣ ಡಾಟ್ ಕಾ೦"ನ ಎಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ "ಶ್ರೀಅನ೦ತವೃತ"ದ ಶುಭಾಶಯಗಳು...

ಮಂಗಳೂರು: ಸ್ಕೂಟರ್ ಗೆ ಢಿಕ್ಕಿ – ಬಸ್ ಚಕ್ರ ಹರಿದು ಬಾಲಕ ಸಾವು

ಮಂಗಳೂರು,ಅ 17 : ಬಸ್‌ ಢಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನಕ್ಕೆ ನಲ್ಲಿ ಹಿಂಬದಿ ಸವಾರನಾಗಿ ಹೋಗುತ್ತಿದ್ದ 13 ವರ್ಷದ ಬಾಲಕ ಕೆಳ ಬಿದ್ದು ಆತನ ಮೇಲೆ ಬಸ್‌ ಚಕ್ರ ಹರಿದು ಮೃತಪಟ್ಟ ಘಟನೆ ನಗರದ ಲಾಲ್ ಭಾಗ್ ಸಿಗ್ನಲ್ ಬಳಿ ಅ. 17 ರಂದು ಸೋಮವಾರ ನಡೆದಿದೆ.

ಬಾಲಕನನ್ನು ನೀರುಮಾರ್ಗದ ಧನು(13) ಎಂದು ಗುರುತಿಸಲಾಗಿದೆ.

ಈತ ತನ್ನ ಸಂಬಂಧಿ ಜತೆ ಸ್ಕೂಟರ್ ನಲ್ಲಿ ಸಹ ಸವಾರನಾಗಿ ಹೋಗುತ್ತಿದ್ದಾಗ ಹಿಂಬದಿಯಿಂದ ಖಾಸಗಿ ಸರ್ವಿಸ್ ಬಸ್ ಢಿಕ್ಕಿ ಹೊಡೆದಿದೆ. ಪರಿಣಾಮ ಸವಾರ ಸ್ಕೂಟರ್ ನಲ್ಲಿದ್ದ ಎಡಬದಿಗೆ ಹಾಗೂ ಬಾಲಕ ಧನು ಬಲ ಬದಿಗೆ ಬಿದ್ದಿದ್ದಾನೆ. ಈ ವೇಳೆ ಬಸ್ ನ ಚಕ್ರ ಹಾದು ಹೋಗಿ ಮೃತಪಟ್ಟರು. ಬಸ್ ಚಾಲಕನ ನಿರ್ಲಕ್ಷ್ಯ ಕಾರಣ ಎಂದು ತಿಳಿದು ಬಂದಿದೆ.

No Comments

Leave A Comment