Log In
BREAKING NEWS >
...........ನಾಡಿನ ಸಮಸ್ತ ಜನತೆಗೆ,ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಓದುಗರಿಗೆ,ಅಭಿಮಾನಿಗಳಿಗೆ "ಶ್ರೀರಾಮನವಮಿ"ಯ ಶುಭಾಶಯಗಳು.......

ಕಳಸ ಪದವಿಪೂರ್ವ ಕಾಲೇಜಿನ ಅಪ್ರಾಪ್ತ ವಯಸ್ಸಿನ ಬಾಲಕಿ ಆತ್ಮಹತ್ಯೆಗೆ ಶರಣಾಗಿದ್ದು, ಪ್ರೇಮಿಸಿದ ಯುವಕ ವಂಚಿಸಿದ ಹಿನ್ನೆಲೆಯಲ್ಲಿ ಮುಗ್ಧ ಬಾಲಕಿ ಸಾವಿಗೆ ಶರಣಾಗಿದ್ದಾಳೆ ಎಂದು ತಿಳಿದು ಬಂದಿದೆ. ಸಾವನ್ನಪ್ಪಿದ ತರುಣಿಯನ್ನು ದೀಪ್ತಿ(17) ಎಂದು ಗುರುತಿಸಲಾಗಿದೆ. ಹಿತೇಶ್ (25) ಎಂಬ ತರುಣ ಈಕೆಯನ್ನು ಪ್ರೀತಿಸುತ್ತಿದ್ದ. ನಂತರ ಆತನ ಕಿರುಕುಳ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಹೈದರಬಾದ್:ಜ 15 : ತೆಲಂಗಾಣದ ಸಿಕಂದರಾಬಾದ್ ಮತ್ತು ಆಂಧ್ರಪ್ರದೇಶದ ವಿಶಾಖಪಟ್ಟಣ ನಡುವೆ ಸಂಪರ್ಕಿಸುವ ವಂದೇ ಭಾರತ್ ರೈಲು ಸೇವೆಗೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಚಾಲನೆ ನೀಡಿದರು. ‘ವಂದೇ ಭಾರತ್‌, ದೇಶದ ನಿಜವಾದ ಪ್ರತಿರೂಪವಾಗಿದೆ. ಅವಲಂಬನೆಯ ಮನಸ್ಥಿತಿಯಿಂದ ಹೊರಬಂದು ಸ್ವಾವಲಂಬನೆ ಕಡೆಗೆ ಚಲಿಸುತ್ತಿರುವುದರ ಸಂಕೇತವಾಗಿದೆಇದು ತೆಲಂಗಾಣ

ಬ್ರೆಸಿಲಿಯಾ: ಸರ್ಕಾರಿ ಕಟ್ಟಡಗಳ ಮೇಲಿನ ದಾಳಿ, ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಭ್ರಜಿಲ್ ನ ಮಾಜಿ ಅಧ್ಯಕ್ಷ ಜೈರ್ ಬೋಲ್ಸನಾರೊ ಅವರನ್ನು ಬಂಧಿಸಲಾಗಿದೆ. ಬೋಲ್ಸನಾರೊ ಅಮೆರಿಕಾದಿಂದ ಭ್ರಸಿಲಿಯಾಕ್ಕೆ ಬರುತ್ತಿದ್ದಂತೆಯೇ ಅವರನ್ನು ಬಂಧಿಸಲಾಗಿದೆ. ಜನವರಿ 8 ರಂದು ಬ್ರೆಸಿಲಿಯಾದಲ್ಲಿ ಸರ್ಕಾರದ ಕಟ್ಟಡಗಳ ಮೇಲೆ ನಡೆದ ದಾಳಿ ವೇಳೆಯಲ್ಲಿ ಕಿಟಕಿ, ಪೀಠೋಪಕರಣಗಳನ್ನು ಒಡೆದು ಹಾಕಿ ಅಮೂಲ್ಯವಾದ ಕಲಾಕೃತಿಗಳನ್ನು

ಉಡುಪಿ ಶ್ರೀಕೃಷ್ಣನ ಸನ್ನಿಧಾನದಲ್ಲಿ "ಮಕರ ಸ೦ಕ್ರಾ೦ತಿ"ಯ ತ್ರಿರಥೋತ್ಸವ ಅದ್ದೂರಿಯಿ೦ದ ಅಷ್ಟಮಠಾಧೀಸರ ಉಪಸ್ಥಿತಿಯಲ್ಲಿ ಸ೦ಪನ್ನ ಗೊ೦ಡಿತು.ಸಾವಿರಾರುಮ೦ದಿ ಭಕ್ತರು ಈ ಉತ್ಸವದಲ್ಲಿ ಭಾಗವಹಿಸಿದರು.    

ಜಮ್ಮು-ಕಾಶ್ಮೀರ: ಕೇಂದ್ರಾಡಳಿತ ಪ್ರದೇಶ ಜಮ್ಮು-ಕಾಶ್ಮೀರದ ಬುದ್ಗಾಂ ಜಿಲ್ಲೆಯಲ್ಲಿ ಭಾನುವಾರ ಉಗ್ರರು ಹಾಗೂ ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಸೆಂಟ್ರಲ್ ಕಾಶ್ಮೀರ ಜಿಲ್ಲೆಯ ಮಾಗಮ್ ನ ರೆಡ್ ಬಾಗ್ ಪ್ರದೇಶದಲ್ಲಿ ಉಗ್ರರು ಇರುವ ಬಗ್ಗೆ ಖಚಿತ ಮಾಹಿತಿ ಆಧರಿಸಿ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ಆರಂಭಿಸಿದಾಗ ಉಗ್ರರು

ಕಾಠ್ಮಂಡು: 72 ಜನರಿದ್ದ ವಿಮಾನ ಭಾನುವಾರ ನೇಪಾಳದ ಪೋಖರಾ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ಪತನಗೊಂಡಿದೆ ಎಂದು ಯೇತಿ ವಿಮಾನಯಾನ ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ. ವಿಮಾನದಲ್ಲಿ 68 ಪ್ರಯಾಣಿಕರು ಮತ್ತು ನಾಲ್ವರು ಸಿಬ್ಬಂದಿ ಇದ್ದರು. ಸದ್ಯ ರಕ್ಷಣಾ ಕಾರ್ಯ ನಡೆಯುತ್ತಿದೆ. 72 ಮಂದಿ ಸಾವಿಗೀಡಾಗಿದ್ದಾರೆ ಅಥವಾ ಬದುಕುಳಿದಿದ್ದಾರೆ ಎಂಬ ಬಗ್ಗೆ ನಮಗೆ ಇನ್ನೂ

ಬಂಟ್ವಾಳ: ಎರಡು ವರ್ಷಗಳಿಂದ ರಿಜಿಸ್ಟ್ರೇಷನ್ ಆಗದೇ, ಇನ್ಸೂರೆನ್ಸ್ ಇಲ್ಲದ ಬಿಳಿ ಬಣ್ಣದ ರೆನಾಲ್ಟ್ ಕ್ವಿಡ್ ಕಾರೊಂದು ಜಿಲ್ಲೆಯಾದ್ಯಂತ ಸುತ್ತಾಡುತ್ತಿದ್ದು, ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ವಿಟ್ಲ ಪಡ್ನೂರು ಗ್ರಾಮದ ಪಡಾರು ಮದಕ ನಿವಾಸಿ ಸತೀಶ್ ಗೌಡ ಎಂಬವರು ಎರಡು ವರ್ಷದ ಹಿಂದೆ ಕ್ವಿಡ್ ಕಾರು ಖರೀದಿಸಿದ್ದರೆನ್ನಲಾಗಿದೆ. ಈವರೆಗೂ ರಿಜಿಸ್ಟ್ರೇಷನ್

ಮಂಗಳೂರು: ನವ ಮಂಗಳೂರು ಬಂದರು ಪ್ರಸಕ್ತ ಋತುವಿನ ನಾಲ್ಕನೇ ಕ್ರೂಸ್ ಹಡಗು ಮತ್ತು ಹೊಸ ವರ್ಷದ ಮೊದಲ ಕ್ರೂಸ್ ಹಡಗು “ದಿ ವರ್ಲ್ಡ್” ಅನ್ನು ಸ್ವಾಗತಿಸಿತು. 123 ಪ್ರಯಾಣಿಕರು ಮತ್ತು 280 ಸಿಬ್ಬಂದಿಯನ್ನು ಹೊತ್ತ ಹಡಗು ಬರ್ತ್ ನಂ. 4, ಇದು ಮೂರು ದಿನಗಳ ಕಾಲ ಬಂದರಿನಲ್ಲಿ ಉಳಿಯುತ್ತದೆ ಮತ್ತು

ಉಡುಪಿ:ಜ 13.ಡ್ರಗ್ಸ್ ದಂಧೆಯಲ್ಲಿ ಯಾರೇ ಸಿಕ್ಕರೂ ಬಿಡಲ್ಲ" ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. ಮಂಗಳೂರು ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಯಲ್ಲಿ ಡ್ರಗ್ಸ್ ದಂಧೆ ಬಯಲು ವಿಚಾರ ಕುರಿತು, ಉಡುಪಿಯಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ವೈದ್ಯ ವಿದ್ಯಾರ್ಥಿಗಳು, ಮೆಡಿಕಲ್ ಪ್ರೊಫೆಸರ್ ಗಳು, ಸುಶಿಕ್ಷಿತ ವರ್ಗವೇ ಈ ರೀತಿ