Log In
BREAKING NEWS >
ಉಡುಪಿ ನಗರದಲ್ಲಿ ರಿಕ್ಷಾ ಮೀಟರ್ ಕನಿಷ್ಠದರ ರೂ.40/-ಫಿಕ್ಸ್:ಕಿ.ಮೀಟರ್ ಗೆ ರೂ.20/-ಜಾರಿಗೆ ಕ್ಷಣಗಣನೆ…

ಕೋಟತಟ್ಟು ಗ್ರಾಮ ಪಂಚಾಯಿತಿ ಮತ್ತು ಕೋಟ ಕಾರಂತ ಹುಟ್ಟೂರು ಪ್ರಶಸ್ತಿ ಪ್ರತಿಷ್ಠಾನ ಈ ಪ್ರಶಸ್ತಿಯನ್ನು ಈ ಬಾರಿ ರಮೇಶ್​ ಅರವಿಂದ್​ಗೆ ನೀಡುವ ಬಗ್ಗೆ ಘೋಷಣೆ ಮಾಡಿದೆ. ರಮೇಶ್ ಅರವಿಂದ್ (Ramesh Aravind) ಅವರು ನಟನಾಗಿ, ನಿರ್ದೇಶಕನಾಗಿ, ಬರಹಗಾರನಾಗಿ, ಸಂಪನ್ಮೂಲ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ. ಚಿತ್ರರಂಗದಲ್ಲಿ 35 ವರ್ಷಗಳಿಂದ ಅವರು ಸೇವೆ ಸಲ್ಲಿಸುತ್ತಾ

ನವದೆಹಲಿ, ಸೆ 24: ನ್ಯಾಷನಲ್ ಹೆರಾಲ್ಡ್‌ ಪತ್ರಿಕೆಯ ಅಕ್ರಮ ವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲಂಗಾಣದ ಐವರು ಕಾಂಗ್ರೆಸ್ ನಾಯಕರಿಗೆ ಜಾರಿ ನಿರ್ದೇಶನಾಲಯವು ನೋಟಿಸ್ ಜಾರಿ ಮಾಡಿದೆ. ಕೇಂದ್ರದ ಮಾಜಿ ಸಚಿವೆ ರೇಣುಕಾ ಚೌಧರಿ, ಸಿಕಂದರಾಬಾದ್‌ನ ಮಾಜಿ ಸಂಸದ ಪಿ. ಅಂಜನಕುಮಾರ್ ಯಾದವ್, ರಾಜ್ಯದ ಮಾಜಿ ಸಚಿವರಾದ ಜೆ. ಗೀತಾರೆಡ್ಡಿ, ಎಂ.ಡಿ.

ಬೆಳ್ತಂಗಡಿ: ಬೆಳ್ತಂಗಡಿ ತಾಲ್ಲೂಕಿನ ಬಡಗಕಾರಂದೂರು ಗ್ರಾಮದ ಅಳದಂಗಡಿ ಸುಂಕದಕಟ್ಟೆ ಎಂಬಲ್ಲಿ ಕಳ್ಳರು‌ ಬೀಗ ಮುರಿದು ಮನೆಯೊಳಗೆ ಪ್ರವೇಶಿಸಿ ಕಪಾಟಿನಲ್ಲಿದ್ದ ಚಿನ್ನಾಭರಣ ಹಾಗೂ ನಗದನ್ನು ಎಗರಿಸಿದ ಘಟನೆಯೊಂದು ರಾತ್ರಿ ವೇಳೆ ನಡೆದಿದೆ. ವ್ಯಕ್ತಿಯೋರ್ವರು ವಾಸವಿರುವ ಮನೆಯ ಬಾಗಿಲಿನ ಬೀಗವನ್ನು ದರೋಡೆಕೋರರು ಮುರಿದು ಒಳ ಪ್ರವೇಶಿಸಿ ಮನೆಯ ಬೆಡ್‌ ರೂಂನಲ್ಲಿ ಇದ್ದ ಕಪಾಟನ್ನು

ಉತ್ತರಾಖಂಡ್: ರಿಷಿಕೇಶ್ ನಲ್ಲಿ ವನ್ ತಾರಾ ರೆಸಾರ್ಟ್ ನ ಸ್ವಾಗತಗಾರ್ತಿಯ ಹತ್ಯೆ ಪ್ರಕರಣದಲ್ಲಿ ಮೂವರು ಬಂಧನಕ್ಕೊಳಗಾಗಿದ್ದು, ಈ ಪೈಕಿ ಓರ್ವ ಬಿಜೆಪಿಯ ನಾಯಕರ ಮಗನೂ ಇದ್ದಾರೆ ಎಂದು ತಿಳಿದು ಬಂದಿದೆ. ರೆಸಾರ್ಟ್ ನ ಸ್ವಾಗತಗಾರ್ತಿ ಅಂಕಿತಾ ಕಳೆದ 5 ದಿನಗಳಿಂದ ನಾಪತ್ತೆಯಾಗಿದ್ದರು, ಆಕೆಯನ್ನು ರೆಸಾರ್ಟ್ ನ ಮಾಲಿಕ ಹಾಗೂ ಕಾರ್ಯನಿರ್ವಾಹಕರು ಹತ್ಯೆ

ಉಡುಪಿ:ಸೆ 24. ಪಿಎಫ್ಐ ಕಾರ್ಯಕರ್ತರನ್ನು ಕಾಂಗ್ರೆಸ್ ಸರಕಾರದ ಕಾಲದಲ್ಲಿ ಪೋಷಿಸಿದ್ದರು. ಆವತ್ತು ಪೋಷಿಸಿದ್ದರ ಪರಿಣಾಮವಾಗಿ ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಸುಮಾರು 18 ಜನ ಕಾರ್ಯಕರ್ತರನ್ನು ನಾವು ಕಳೆದುಕೊಂಡಿದ್ದೇವೆ ಎಂದು ಸಚಿವ ಸುನಿಲ್ ಕುಮಾರ್ ಹೇಳಿದರು. ಪಿಎಫ್ಐ, ಎಸ್‌ಡಿಪಿಐ ನಾಯಕರ ಮೇಲೆ ಎನ್‌ಐಎ ದಾಳಿ ಕುರಿತು ಪ್ರತಿಕ್ರಿಯಿಸಿದ ಸಚಿವರು "ಪ್ರವೀಣ್ ನೆಟ್ಟಾರ್

ಶಿವಮೊಗ್ಗ: ಸೆ 24. ನಿಷೇಧಿತ ಐಎಸ್‌ ಸಂಘಟನೆಯೊಂದಿಗೆ ನಂಟು ಹೊಂದಿರುವ ಆರೋಪದಲ್ಲಿ ಬಂಧಿತರಾಗಿರುವ ಆರೋಪಿಗಳು ಬಾಂಬ್ ಸಿದ್ದಪಡಿಸಿ ನದಿದಂಡೆಯೊಂದರ ಪ್ರದೇಶದಲ್ಲಿ ಪ್ರಾಯೋಗಿಕ ಸ್ಪೋಟ ನಡೆಸಿದ್ದರು ಎಂಬ ಆಘಾತಕಾರಿ ಮಾಹಿತಿ ತನಿಖೆಯಲ್ಲಿ ಬಯಲಾಗಿದೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಂ. ಲಕ್ಷ್ಮೀಪ್ರಸಾದ್, ಶಿವಮೊಗ್ಗದ ಗುರುಪುರ ಬಳಿಯ

ಮುಂಬೈ: ಮಹಾರಾಷ್ಟ್ರದಲ್ಲಿ ಸೇನೆ ವರ್ಸಸ್ ಸೇನೆ ನಡುವಿನ ಆಂತರಿಕ ಯುದ್ಧದಲ್ಲಿ ಮೊದಲ ಬಾರಿ ಶಿಂಧೆ ಬಣಕ್ಕೆ ಹಿನ್ನೆಡೆಯಾಗಿದೆ. ಮುಂಬೈನ ಐಕಾನಿಕ್ ಶಿವಾಜಿ ಪಾರ್ಕ್‌ನಲ್ಲಿ ದಸರಾ ರ್ಯಾಲಿ ಆಯೋಜಿಸಲು ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆಗೆ ಬಾಂಬೆ ಹೈಕೋರ್ಟ್ ಅನುಮತಿ ನೀಡುವುದರೊಂದಿಗೆ ಶಿವಸೇನೆಯ ಏಕನಾಥ್ ಶಿಂಧೆ ಬಣಕ್ಕೆ ಇಂದು ದೊಡ್ಡ ಹೊಡೆತ ಬಿದ್ದಿದೆ.

ಡೆಹ್ರಾಡೂನ್: ಹದಿಹರೆಯದ ಮಹಿಳಾ ರಿಸೆಪ್ಷನಿಸ್ಟ್ ಮೃತದೇಹವನ್ನು ಪೊಲೀಸರು ಇಂದು ಬೆಳಗ್ಗೆ ಚೀಲಾ ಕಾಲುವೆಯಿಂದ ವಶಕ್ಕೆ ಪಡೆದಿದ್ದಾರೆ. ಬಿಜೆಪಿ ಮುಖಂಡರೊಬ್ಬರ ಪುತ್ರ ಅಕ್ರಮವಾಗಿ ನಡೆಸುತ್ತಿದ್ದ ರೆಸಾರ್ಟ್ ನಲ್ಲಿ ಈ ಹತ್ಯೆ ನಡೆದಿದ್ದು, ಆರೋಪಿಗಳು ಆಕೆಯ ಮೃತದೇಹವನ್ನು ಕಾಲುವೆಯಲ್ಲಿ ಹೂತ್ತಿದ್ದರು. ಈ ಪ್ರಕರಣದ ಬೆಳವಣಿಗೆಯನ್ನು ಉತ್ತರ ಖಂಡ್ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ತಮ್ಮ ಟ್ವೀಟರ್ ಖಾತೆಯಲ್ಲಿ

ತೆಹ್ರಾನ್: ಪೊಲೀಸರ ವಶದಲ್ಲಿದ್ದ ಮಹ್ಸಾ ಅಮಿನಿಯ ಸಾವಿನ ನಂತರ ಪ್ರತಿಭಟನೆಗಳು ಭುಗಿಲೆದ್ದಿದ್ದು, ಇರಾನ್ ಭದ್ರತಾ ಪಡೆಗಳು ನಡೆಸಿದ ದಾಳಿಯಲ್ಲಿ ಕನಿಷ್ಠ 50 ಜನರು ಸಾವನ್ನಪ್ಪಿದ್ದಾರೆ ಎಂದು ಎನ್‌ಜಿಒ ಶುಕ್ರವಾರ ತಿಳಿಸಿದೆ. ಉತ್ತರ ಗಿಲಾನ್ ಪ್ರಾಂತ್ಯದ ರೆಜ್ವಾನ್ ಶಹರ್ ಪಟ್ಟಣದಲ್ಲಿ ಗುರುವಾರ ರಾತ್ರಿ ಭದ್ರತಾ ಪಡೆಗಳು ನಡೆಸಿದ ಗುಂಡಿನ ದಾಳಿಯಲ್ಲಿ ಆರು ಜನರು

ಮಂಗಳೂರು/ ಬೆಂಗಳೂರು: ದೇಶಾದ್ಯಂತ ಮತ್ತೊಮ್ಮೆ ರಾಷ್ಟ್ರೀಯ ತನಿಖಾ ದಳ (National Investigation Agency – NIA) ಮತ್ತು ಜಾರಿ ನಿರ್ದೇಶನಾಲಯಗಳು(ED) ತನ್ನ ದಾಳಿ, ಶೋಧ ಕಾರ್ಯವನ್ನು ಮುಂದುವರಿಸಿವೆ. ದೇಶಾದ್ಯಂತ ಇಂದು ಗುರುವಾರ ಬೆಳ್ಳಂಬೆಳಗ್ಗೆ 10ಕ್ಕೂ ಹೆಚ್ಚು ರಾಜ್ಯಗಳಲ್ಲಿ ಎನ್ಐಎ, ಇಡಿ ದಾಳಿ ಮುಂದುವರಿಸಿದ್ದು ರಾಜ್ಯದ ಪೊಲೀಸರ ನೆರವಿನೊಂದಿಗೆ ಪಿಫ್ಐ ಸಂಘಟನೆಯ 100ಕ್ಕೂ