Log In
BREAKING NEWS >
"ಕರಾವಳಿಕಿರಣ ಡಾಟ್ ಕಾ೦"ನ ಎಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ "ಶ್ರೀಅನ೦ತವೃತ"ದ ಶುಭಾಶಯಗಳು...

ಮುಂಬೈ:ಜು 18. ಮಹಾರಾಷ್ಟ್ರ ಶಿವಸೇನೆ ಪಕ್ಷದ ನಾಯಕ ಸ್ಥಾನಕ್ಕೆ ಮಾಜಿ ಸಚಿವ ರಾಮದಾಸ್ ಕದಂ ರಾಜೀನಾಮೆ ನೀಡಿದ್ದು, ಉದ್ಧವ್ ಠಾಕ್ರೆಗೆ ಮತ್ತೊಂದು ಆಘಾತವಾಗಿದೆ. ಉದ್ಧವ್ ಠಾಕ್ರೆ ಬಣದಲ್ಲಿ ಗುರುತಿಸಿಕೊಂಡಿದ್ದ ರಾಮದಾಸ್ ಕದಂ ಅವರು ಪಕ್ಷದಲ್ಲಿ ಪ್ರಮುಖ ನಾಯಕರಾಗಿದ್ದು, ಅವರ ರಾಜೀನಾಮೆಯಿಂದ ಠಾಕ್ರೆಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ ಎನ್ನಲಾಗಿದೆ. ಈ ಕುರಿತು ಮಾಧ್ಯಮಗಳ

ಬೆಳ್ತಂಗಡಿ:ಜು 18. ರಾಷ್ಟ್ರೀಯ ಹೆದ್ದಾರಿ 73ರ ಚಾರ್ಮಾಡಿ ಘಾಟ್ ಎರಡನೇ ತಿರುವಿನ ರಸ್ತೆಯ ಮೋರಿಯೊಂದು ಬಿರುಕು ಬಿಟ್ಟಿರುವ ಘಟನೆ ಸೋಮವಾರ ನಡೆದಿದೆ. ಬಿರುಕು ಬಿಟ್ಟ ಪ್ರದೇಶದಲ್ಲಿ ಬ್ಯಾರಿಕೆಡ್ ಅಳವಡಿಸಲಾಗಿದ್ದು, ಮರಳು ಮಿಶ್ರಿತ ಕಲ್ಲುಗಳನ್ನು ಹಾಕಿ ಹಾಕಿ ಮುಂಜಾಗ್ರತ ಕ್ರಮ ಕೈಗೊಳ್ಳಲಾಗಿದೆ. ಆದರೆ ಸಂಚಾರಕ್ಕೆ ಯಾವುದೇ ಸಮಸ್ಯೆ ಇಲ್ಲ. ಇನ್ನು ಕುಸಿತ ಗೊಂಡಿರುವ

ಉಡುಪಿ: ಯಮಹಾ ದ್ವಿಚಕ್ರ ವಾಹನಗಳ ಅಧಿಕೃತ ಡೀಲರ್ ಗುಂಡಿಬೈಲಿನಲ್ಲಿರುವ ಉಡುಪಿ ಮೋಟರ್ಸ್‌ನಿಂದ ಏಕಕಾಲದಲ್ಲಿ 25 ಯಮಹಾ ಫ್ಯಾಸಿನೊ ಸ್ಕೂಟರ್ ಹಸ್ತಾಂತರ ಕಾರ್ಯಕ್ರಮ ನಡೆಯಿತು. ಯಮಹಾ ಫ್ಯಾಸಿನೋ ಸ್ಕೂಟರ್ ಜಗತ್ತಿನ ಪ್ರಪ್ರಥಮ ಹೈಬ್ರೀಡ್ ಸ್ಕೂಟರ್ ಆಗಿದ್ದು, ಅತ್ಯಧಿಕ ಮೈಲೇಜ್ ನೀಡುತ್ತಿರುವುದರಿಂದ ಗ್ರಾಹಕರಿಂದ ಬೇಡಿಕೆ ಹೊಂದಿದೆ. ಸಾಯಿ ಗಣೇಶ್ ಸೌಹಾರ್ದ ಕ್ರೆಡಿಟ್ ಕೊ-ಆಪರೇಟಿವ್ ಲಿಮಿಟೆಡ್‌ನ

ಬೆಂಗಳೂರು: ಬೆಂಗಳೂರಿನ ಕೆಂಗೇರಿ ಬಳಿಯ ಕೋನಸಂದ್ರದಲ್ಲಿ ಯುವಕನೋರ್ವನ ಬರ್ಬರ ಕೊಲೆಯಾಗಿದೆ. ಮಾರಕಾಸ್ತ್ರಗಳಿಂದ ಹಲ್ಲೆಗೈದು, ಕಲ್ಲು ಎತ್ತಿಹಾಕಿ ಯುವಕನ ಹತ್ಯೆ ಮಾಡಿರುವಂತಹ ಘಟನೆ ನಡೆದಿದೆ. ಹೆ‌ಚ್.ಗೊಲ್ಲಹಳ್ಳಿಯ ನಿವಾಸಿ ಹೇಮಂತ್(27) ಬರ್ಬರ ಕೊಲೆಯಾದ ಯುವಕನಾಗಿದ್ದಾನೆ. ಹುಟ್ಟುಹಬ್ಬದ ದಿನವೇ ಹೇಮಂತ್​​ನನ್ನ ದುರುಳರು ಹತ್ಯೆಗೈದಿದ್ದಾರೆ. ರಾತ್ರಿ ಸ್ನೇಹಿತನೊಂದಿಗೆ ಮನೆಯಿಂದ ಹೊರಹೋಗಿದ್ದ ಹೇಮಂತ್, ಪರಿಚಿತರೇ ಕೊಲೆ ಮಾಡಿರುವ ಶಂಕೆ

ಚೆನ್ನೈ: ವಿದ್ಯಾರ್ಥಿನಿಯೊಬ್ಬಳ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡಿನ ಕಲ್ಲಕುರಿಚಿಯಲ್ಲಿ ಸಂಭವಿಸಿದ್ದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಪೊಲೀಸರು ಮತ್ತಿಬ್ಬರು ಶಿಕ್ಷಕರನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. ಇಲ್ಲಿನ ಶಾಲೆಯೊಂದರ ಇಬ್ಬರು ಶಿಕ್ಷಕರನ್ನು ಸೋಮವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದು, ಅಲ್ಲದೆ, ಹಿಂಸಾತ್ಮಕ ಕೃತ್ಯಗಳಲ್ಲಿ ಭಾಗಿಯಾಗಿದ್ದಕ್ಕಾಗಿ ಮತ್ತು ಜುಲೈ 17 ರಂದು ಶಾಲೆಯನ್ನು ಧ್ವಂಸಗೊಳಿಸಿದ್ದಕ್ಕಾಗಿ

ಧಾರ್:ಜು 18. 100 ಅಡಿ ಎತ್ತರವಿದ್ದ ಸೇತುವೆಯಿಂದ ಇಂಧೋರ್‌ನಿಂದ ಬಸ್ ಮಹಾರಾಷ್ಟ್ರಕ್ಕೆ ತೆರಳುತ್ತಿದ್ದ ಸರ್ಕಾರಿ ಬಸ್ ನರ್ಮದಾ ನದಿಗೆ ಉರುಳಿ ಬಿದ್ದ ಪರಿಣಾಮ 13 ಮಂದಿ ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ ಧಾರ್‌ನಲ್ಲಿ ನಡೆದಿದೆ. ಬಸ್‌ನಲ್ಲಿ ಸುಮಾರು 50 ರಿಂದ 60 ಪ್ರಯಾಣಿಕರಿದ್ದು, ಘಟನಾ ಸ್ಥಳದಿಂದ ಇದುವರೆಗೆ 15 ಪ್ರಯಾಣಿಕರನ್ನು ರಕ್ಷಿಸಲಾಗಿದೆ

ಪುತ್ತೂರು: ಜು 18 . ವಿವಾಹಿತ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋಪದ ಮೇಲೆ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿರುವ ಮಾಜಿ ಸೈನಿಕನನ್ನು ಸಂಪ್ಯ ಪೊಲೀಸರು ಬಂಧಿಸಿದ್ದಾರೆ. ಅದೇ ಕಂಪನಿಯಲ್ಲಿ ಉದ್ಯೋಗಿಯಾಗಿರುವ ತಿಂಗಳಾಡಿ ನಿವಾಸಿಯಾಗಿರುವ ವಿವಾಹಿತ ಮಹಿಳೆ ನೀಡಿದ ದೂರಿನ ಮೇರೆಗೆ ಕುಂಬ್ರ ಕುರಿಕ್ಕಾರ ನಿವಾಸಿ, ಖಾಸಗಿ ಕಂಪನಿಯೊಂದರ ಭದ್ರತಾ ಸಿಬ್ಬಂದಿ ಹಾಗೂ

ಇಂಡಿಯಾನಾ:ಜು 18. ಅಮೇರಿಕಾದ ಇಂಡಿಯಾನಾದಲ್ಲಿರುವ ಮಾಲ್ ವೊಂದರಲ್ಲಿ ಶೂಟೌಟ್ ನಡೆದಿದ್ದು, ಇದರಲ್ಲಿ ಮೂವರು ಸಾವನ್ನಪ್ಪಿರುವ ಘಟನೆ ನಡೆದಿದೆ. ವ್ಯಕ್ತಿಯೊಬ್ಬ ಗ್ರೀನ್ ವುಡ್ ಪಾರ್ಕ್ ಮಾಲ್ ನಲ್ಲಿ ಏಕಾಏಕಿ ಗುಂಡಿನ ದಾಳಿ ನಡೆಸಿದ್ದು, ಮೂವರು ಸಾವನ್ನಪ್ಪಿರುವುದಾಗಿ ಗ್ರೀನ್ ವುಡ್ ಮೇಯರ್ ಮಾರ್ಕ್ ಮೈಯರ್ಸ್ ತಿಳಿಸಿದ್ದಾರೆ. ಇನ್ನು ಈ ಘಟನೆಯಲ್ಲಿ ಮೂವರು ಗಾಯಗೊಂಡಿದ್ದು, ಅವರನ್ನು

ಕಲ್ಲಕುರಿಚಿ(ತಮಿಳು ನಾಡು): ವಿದ್ಯಾರ್ಥಿನಿಯ ಸಾವಿಗೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿ ನಡೆಯುತ್ತಿದ್ದ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿ ಪ್ರತಿಭಟನಾಕಾರರು ಶಾಲಾ ಆವರಣಕ್ಕೆ ನುಗ್ಗಿ ಶಾಲಾ ಬಸ್ಸು ಮತ್ತು ಪೊಲೀಸ್ ವಾಹನಗಳಿಗೆ ಬೆಂಕಿ ಹಚ್ಚಿ ದಾಂಧಲೆ ನಡೆಸಿದ್ದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದ ಘಟನೆ ತಮಿಳು ನಾಡಿನ ಕಲ್ಲಕುರಿಚಿ ಜಿಲ್ಲೆಯ ಕನ್ನಿಯಮೂರಿನಲ್ಲಿ ಭಾನುವಾರ ನಡೆದಿದೆ. ಖಾಸಗಿ

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರೇ ಎಚ್ಚರ! ಸರ್ಕಾರದ ಆದೇಶಗಳು ಅಥವಾ ಸುತ್ತೋಲೆಗಳನ್ನು ಕನ್ನಡದಲ್ಲಿ ರಚಿಸುವಾಗ ತಪ್ಪು ತಪ್ಪಾಗಿ ಟೈಪಿಂಗ್  ಅಥವಾ ವ್ಯಾಕರಣದಲ್ಲಿ ದೋಷವಾದರೆ,  ಸಂಬಳದಲ್ಲಿ ಕಡಿತವಾಗಲಿದೆ, ಮುಂಬಡ್ತಿ ಕೂಡಾ ನಿರಾಕರಿಸಲಾಗುತ್ತದೆ. ಈ ಸಂಬಂಧ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಶುಕ್ರವಾರ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ  ಸರ್ಕಾರಿ ಕಚೇರಿಗಳಲ್ಲಿ