Log In
BREAKING NEWS >
"ಕರಾವಳಿಕಿರಣ ಡಾಟ್ ಕಾ೦"ನ ಎಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ "ಶ್ರೀಅನ೦ತವೃತ"ದ ಶುಭಾಶಯಗಳು...

ಸುಬ್ರಹ್ಮಣ್ಯ : ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆ ಸಮೀಪ ಬಿಜೆಪಿ ಯುವ ನಾಯಕ ಹಾಗೂ ಚಿಕನ್ ಅಂಗಡಿ ಮಾಲೀಕನ ಮೇಲೆ ದುಷ್ಕರ್ಮಿಗಳ ತಂಡವೊಂದು ತಲವಾರಿನಿಂದ ದಾಳಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಹಲ್ಲೆಗೊಳಾಗದವರು ಪ್ರವೀಣ್ ನೆಟ್ಟಾರ್ ಎಂದು ತಿಳಿಯಲಾಗಿದೆ.ಇವರು ರಾಜಕೀಯ ಕ್ಷೇತ್ರದಲ್ಲಿ ಬೆಳೆಯುತ್ತಿದ್ದರು.ಯಾರೋ ವೈಯಕ್ತಿಕ ದ್ವೇಷದಿಂದ ಹಲ್ಲೆ ನಡೆಸಿದ್ದಾರೆ ಎಂದು

ಕುಂದಾಪುರ: ಉಡುಪಿ ಜಿಲ್ಲೆಯ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಕಳವು, ಅಕ್ರಮ ಜಾನುವಾರು ಸಾಗಾಟ ಮತ್ತು ಹಿಂಸೆ ಪ್ರಕರಣಗಳಲ್ಲಿ ಭಾಗಿಯಾದ ಆರೋಪಿಯನ್ನು ಗಡಿಪಾರು ಮಾಡಿ ಕುಂದಾಪುರ ಉಪವಿಭಾಗಾಧಿಕಾರಿ ಆದೇಶ ಹೊರಡಿಸಿದ್ದಾರೆ ಎಂದು ತಿಳಿದು ಬಂದಿದೆ. ಕುಂದಾಪುರ ಗ್ರಾಮಾಂತರ ಠಾಣಾ ಸರಹದ್ದಿನ ಗುಲ್ವಾಡಿ ಗ್ರಾಮದ ಕಾಂಡ್ಲಗದ್ದೆ ನಿವಾಸಿ 43 ವರ್ಷ ಪ್ರಾಯದ ಅಬೂಬಕ್ಕರ್

ನವದೆಹಲಿ:ಜು 26. ಗದ್ದಲ ಸೃಷ್ಟಿಸಿ ರಾಜ್ಯಸಭೆ ಕಲಾಪಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ವಿಪಕ್ಷಗಳ 19 ಮಂದಿ ಸಂಸದರನ್ನು ಒಂದು ವಾರದ ಮಟ್ಟಿಗೆ ಅಮಾನತು ಮಾಡಲಾಗಿದೆ. ತೃಣಮೂಲ ಕಾಂಗ್ರೆಸ್ ಸಂಸದೆ ಸುಶ್ಮಿತಾ ದೇವ್, ಡಾ. ಶಂತನು ಸೇನ್, ಡೊಲಾ ಸೇನ್ ಸೇರಿದಂತೆ 19 ಮಂದಿ ಸಂಸದರು ಅಮಾನತಾಗಿದ್ದಾರೆ. ಅಗತ್ಯ ವಸ್ತುಗಳ ಮೇಲೆ ಜಿಎಸ್‌ಟಿ ವಿಧಿಸಿರುವುದನ್ನು

ಉಡುಪಿ:ಜು 26. ಮೊದಲು ಕಾಂಗ್ರೆಸ್ ಸರಕಾರಕ್ಕೆ 10% ಕಮಿಷನ್ ಸರಕಾರ ಅಂತಿದ್ರು. ಈಗ ಕಂಟ್ರಾಕ್ಟರ್ಸ್‌‌ಗಳೇ 40% ಕಮಿಷನ್ ಸರಕಾರ ಅಂತಿದ್ದಾರೆ. ಈಗ ಈಶ್ವರಪ್ಪನವರಿಗೆ ಸಂತೋಷ್ ಪಾಟೀಲ್ ಆತ್ಮಹತ್ಯೆಯ ಆರೋಪದಿಂದ ಕ್ಲೀನ್ ಚಿಟ್ ಸಿಕ್ಕಿದೆ. ಹಾಗಾದರೆ ಸಾವೇ ಆಗಿಲ್ವ? ಆ ಕಂಟ್ರಾಕ್ಟರ್‌‌ಗೆ ಕಿರುಕುಳನೇ ಕೊಟ್ಟಿಲ್ವಾ? ಐಪಿಸಿ ಸೆಕ್ಷನ್ 306ರಲ್ಲಿ ಈಶ್ವರಪ್ಪನ್ನ

ಬೆಳಗಾವಿ : ತೋಟಗಾರಿಕೆ ಇಲಾಖೆ ಅಧಿಕಾರಿ ರಾಜಕುಮಾರ ಟಾಕಳೆ ಹಾಗೂ ಕಾಂಗ್ರೆಸ್‌ ಯುವ ನಾಯಕಿ ನವ್ಯಶ್ರೀ ನಡುವಿನ ಆರೋಪ ಮತ್ತು ಪ್ರತ್ಯಾರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ನವ್ಯಶ್ರೀ ಪೊಲೀಸ್‌ ಠಾಣೆಗೆ ಆಗಮಿಸಿ ವಿಚಾರಣೆಗೆ ಹಾಜರಾದರು. ಅಲ್ಲದೇ ಪೊಲೀಸರು ನವ್ಯಶ್ರೀಯನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಿದ್ದಾರೆ. ರಾಜಕುಮಾರ ಟಾಕಳೆ ವಿರುದ್ಧ ನವ್ಯಶ್ರೀ ನೀಡಿದ ದೂರಿನ

ಉಡುಪಿ: ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ರವರ ಶಿಫಾರಸು ಮೇರೆಗೆ‌‌ ಬಿಜೆಪಿ ಜಿಲ್ಲಾ ಸಹ ವಕ್ತಾರ ಶಿವಕುಮಾರ್ ಅಂಬಲಪಾಡಿ ಇವರನ್ನು ಕೇಂದ್ರ ಸರಕಾರದ ಸ್ವಾಮ್ಯದ "ಸೆಂಟ್ರಲ್ ಕೋಸ್ಟಲ್ ಅಗ್ರಿಕಲ್ಚರಲ್ ರಿಸರ್ಚ್ ಇನ್ಸ್ಟಿಟ್ಯೂಟ್‌‌" ಗೋವಾ ಇದರ‌ 'ಇನ್ಸ್ಟಿಟ್ಯೂಟ್ ಮೆನೇಜ್ಮೆಂಟ್ ಕಮಿಟಿ' ಸದಸ್ಯರನ್ನಾಗಿ ನಾಮ ನಿರ್ದೇಶನ ಮಾಡಿ 'ಇಂಡಿಯನ್ ಕೌನ್ಸಿಲ್

ಉಡಪಿ : ಉಡುಪಿ ಪೂರ್ಣಪ್ರಜ್ಞಕಾಲೇಜಿನ ನಿವೃತ್ತ ಪ್ರೊ. ಎಮ್. ಸುಧಾಕರರಾವ್(84 ವರ್ಷ)ಅಲ್ಪಕಾಲದ ಅಸೌಖ್ಯದಿಂದ ಮಣಿಪಾಲದ ಕೆ.ಎಂ. ಸಿ. ಆಸ್ಪತ್ರೆಯಲ್ಲಿಇಂದು(25-07-2022) ಪೂರ್ವಾಹ್ನ 8.30ಕ್ಕೆ ನಿಧನರಾದರು. ಬೀಡಿನಗುಡ್ಡೆಯಲ್ಲಿ ಇಂದು ಮಧ್ಯಾಹ್ನಅವರ ಅಂತ್ಯಕ್ರಿಯೆ ನೆರವೇರಿತು. ಉಡುಪಿ ಪೂರ್ಣಪ್ರಜ್ಞಕಾಲೇಜಿನಲ್ಲಿ ಮೂವತ್ತೇಳು ವರ್ಷಗಳ ಕಾಲ ಉಪನ್ಯಾಸಕರಾಗಿ, ಒಂದುವರ್ಷ ಪ್ರಾಂಶುಪಾಲರಾಗಿ ಸೇವೆಸಲ್ಲಿಸಿದ್ದರು. ಜೀವಶಾಸ್ತ್ರದ ಬಗ್ಗೆ ಅಪಾರ ಪಾಂಡಿತ್ಯವನ್ನು ಹೊಂದಿದ

ಉಡುಪಿ :ಜು.25. ಭಗವಂತ ಶ್ರೀಕೃಷ್ಣ ವ್ಯಕ್ತಿಯ ಪರ ಅಲ್ಲ. ತತ್ವದ ಪರ ಮತ್ತು ಸಜ್ಜನರ ಪಕ್ಷಪಾತಿ. ಹೀಗಾಗಿ ಭಗವದ್ಗೀತೆ ಯಾವುದೇ ಮತೀಯ ಗ್ರಂಥವಲ್ಲ. ಸನ್ಮತಿ ನೀಡುವ ಗ್ರಂಥ ಎಂದು ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಹೇಳಿದರು. ಸೋಮವಾರ ಉಡುಪಿಯ ರಥಬೀದಿಯ ಶ್ರೀಪುತ್ತಿಗೆ ಮಠದಲ್ಲಿ “ಕೋಟಿಗೀತಾ ಲೇಖನ ಯಜ್ಞದೀಕ್ಷೆಯ "

ಬೆಂಗಳೂರು: ರಾಜ್ಯದ ಪೊಲೀಸರು ಬೆಂಗಳೂರಿನಲ್ಲಿ ತಡರಾತ್ರಿ ನಡೆಸಿದ ಕಾರ್ಯಾಚರಣೆಯಲ್ಲಿ ಶಂಕಿತ ಲಷ್ಕರ್ ಇ- ತೊಯ್ಬಾ ಸಂಘಟನೆಯ ಓರ್ವ ಉಗ್ರ ಹಾಗೂ ಮತ್ತಿತರ ನಾಲ್ವರನ್ನು ಬಂಧಿಸಲಾಗಿದೆ ಎಂದು ಮೂಲಗಳು ಸೋಮವಾರ ತಿಳಿಸಿವೆ. ಆಂತರಿಕ ಭದ್ರತಾ ವಿಭಾಗ (ಐಎಸ್‌ಡಿ) ಮತ್ತು ಗುಪ್ತಚರ ವಿಭಾಗದ ಸಮನ್ವಯದಲ್ಲಿ ಸಿಸಿಬಿ ವಿಶೇಷ ವಿಭಾಗ ದೊರೆತ ಖಚಿತ ಮಾಹಿತಿ ಆಧಾರದ ಮೇಲೆ

ಕಾರ್ಕಳ: ತಾಲೂಕು ಕಚೇರಿ ಸಿಬ್ಬಂದಿ ಸುಶ್ಮಿತಾ ಎಂಬವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗ್ರಾಮಕರಣಿಕರಾಗಿದ್ದು, ಕಾರ್ಕಳ ತಾಲೂಕು ಕಚೇರಿಯಲ್ಲಿ ಕೇಸ್ ವರ್ಕರ್ ಆಗಿದ್ದ ಸುಶ್ಮಿತಾ (26ವ) ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ 7 ವರ್ಷಗಳಿಂದ ಅವರು ತಾಲೂಕು ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಕಾರ್ಕಳದ ಹುಡ್ಕೋ ಕಾಲನಿಯಲ್ಲಿನ ಮನೆಯಲ್ಲಿ ವಾಸಿಸುತ್ತಿದ್ದರು.  ತಂದೆ, ತಾಯಿ, ಓರ್ವ ಸಹೋದರಿಯನ್ನು