BREAKING NEWS > |
ಉಡುಪಿ:ಜು 13.ರಾಜ್ಯದಲ್ಲಿ ಸುರಿಯುತ್ತಿರುವ ಮಳೆಯಿಂದ ಹಾನಿಗೊಳಗಾದ ರಸ್ತೆಗಳ ಅಭಿವೃದ್ಧಿ, ವಿದ್ಯುತ್ ಸಂಪರ್ಕ, ಸಣ್ಣ ಸೇತುವೆಗಳು ಪುನಃ ಸ್ಥಾಪನೆ ಸೇರಿದಂತೆ ತುರ್ತು ಕೆಲಸಕ್ಕೆ ಕೂಡಲೇ 500 ಕೋಟಿ ರೂಪಾಯಿ ಬಿಡುಗಡೆ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ್ ಘೋಷಿಸಿದರು. ಉಡುಪಿಯಲ್ಲಿ ಇಂದು ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿನ ಪ್ರವಾಹ ಪರಿಸ್ಥಿತಿ
ಉಡುಪಿ, ಜು 13. ಅತಿವೃಷ್ಠಿಯಿಂದ ಹಾನಿಗೊಳಗಾದ ಕಾರವಾರ, ಉತ್ತರ ಕನ್ನಡ ಮತ್ತು ಬೆಳಗಾವಿ ಜಿಲ್ಲೆಗೆ ಮುಂದಿನ ವಾರ ಪ್ರವಾಸ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು. ಇಂದು ಉಡುಪಿ ನಗರದಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡುತ್ತಿದ್ದರು. ಅತಿವೃಷ್ಠಿಯಿಂದ ಹಾನಿಗೊಳಗಾದ ಪ್ರದೇಶಗಳಲ್ಲಿ ಕಳೆದ ಎರಡು ದಿನಗಳಿಂದ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು
ಉಡುಪಿ: ಶ್ರೀಕೃಷ್ಣಮಠಕ್ಕೆ ಕರ್ನಾಟಕ ರಾಜ್ಯ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿಯವರು ಭೇಟಿ ನೀಡಿದ ಸಂದರ್ಭದಲ್ಲಿ, ಪರ್ಯಾಯ ಮಠದ ದಿವಾನರಾದ ವರದರಾಜ ಭಟ್ ಮಾಲಾರ್ಪಣೆ ಮಾಡಿ ಸ್ವಾಗತಿಸಿದರು. ಮುಖ್ಯಮಂತ್ರಿಗಳು ದೇವರ ದರ್ಶನ ಪಡೆದು, ಗುರುಪೂರ್ಣಿಮೆ ಪ್ರಯುಕ್ತ, ಪರ್ಯಾಯ ಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರಿಗೆ ಕಾಷಾಯ ವಸನವಿತ್ತು ಗುರುವಂದನೆ ಸಲ್ಲಿಸಿದರು. ಪರ್ಯಾಯ ಶ್ರೀಪಾದರು ಅವರನ್ನು ಸ್ಮರಣಿಕೆ
ಉಡುಪಿ: ಕರಾವಳಿ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆಗೆ ಸಿಎಂ ಬಸವರಾಜ ಬೊಮ್ಮಾಯಿ ಇಂದು ಬುಧವಾರ ಉಡುಪಿಯಲ್ಲಿ ಸಭೆ ನಡೆಸಲಿದ್ದಾರೆ. ಸಿಎಂಗೆ ಕಂದಾಯ ಸಚಿವ ಆರ್ ಅಶೋಕ್ ಸಾಥ್ ನೀಡಿದ್ದು, ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಉಡುಪಿಯಲ್ಲಿಂದು ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು, ಇಂದು ಅಧಿಕಾರಿಗಳ ಜೊತೆ
ಉಡುಪಿ:ಜು 13. ಕಾಂಗ್ರೆಸ್ ನಿದ್ದೆ ಮಾಡುವ ಸಿಂಹವನ್ನು ನಂಬಿಕೊಂಡು ಬಂದಿದ್ದು, ಕಾಂಗ್ರೆಸ್ ನ ಸಂಸ್ಕೃತಿ ಹೇಗೋ ಹಾಗೆಯೇ ಸಿಂಹ ಕಾಣುತ್ತದೆ ಎಂದು ಹೊಸ ಸಂಸತ್ ಭವನದ ಮೇಲಿನ ಲಾಂಛನದ ವಿವಾದದ ಕುರಿತು ಸಿಎಂ ಬಸವರಾಜ್ ಬೊಮ್ಮಾಯಿ ಜು.13 ರಂದು ಉಡುಪಿಯಲ್ಲಿ ಟಾಂಗ್ ನೀಡಿದ್ದಾರೆ. ಸಂಸತ್ ಮುಂದಿನ ರಾಷ್ಟ್ರ ಲಾಂಛನದ ಬಗ್ಗೆ
ಕಾಸರಗೋಡು:ಜು 13. ಕಾಸರಗೋಡು ಜಿಲ್ಲೆಯ ಕುಂಬಳೆ ಹೊಸದುರ್ಗ ಎಂಬಲ್ಲಿ ಆಳ ಸಮುದ್ರದಲ್ಲಿ ಕಳೆದ ಎರಡು ದಿನಗಳಿಂದ ರಾತ್ರಿ ವೇಳೆ ಹಡಗೊಂದು ಗೋಚರಿಸಿದೆ. ಹಡಗಿನಲ್ಲಿ ಬಳಸಲಾದ ಬೆಳಕಿನ ಪ್ರಖರತೆ ಸಮುದ್ರ ತೀರದಾದ್ಯಂತ ಕಾಣಿಸಿಕೊಂಡಿದೆ. ನೌಕೆಯನ್ನು ಗಮನಿಸಿದ ಕರಾವಳಿ ಜಾಗೃತ ಸಮಿತಿ ಸದಸ್ಯರು ಕರಾವಳಿ ಪೊಲೀಸರಿಗೆ ದೂರು ನೀಡಿದ್ದಾರೆ. ಕೇಂದ್ರ ಗುಪ್ತಚರ ವಿಭಾಗದ
ಕೋಟ:ಜು.13.ಪರೋಟ ವ್ಯಾಪಾರದಲ್ಲಿ ನಷ್ಟ ಉಂಟಾಗಿ ಸಾಲದ ಸಂಕಷ್ಟಕ್ಕೆ ಸಿಲುಕಿದ ವ್ಯಕ್ತಿಯೊಬ್ಬರು ಜೀವನದಲ್ಲಿ ಮನನೊಂದು ಆತ್ಮಹತ್ಯೆ ಮಾಡಿಕೊಂಡು ಘಟನೆ ಸಾಲಿಗ್ರಾಮದ ಕಾರ್ಕಡ ಸಮೀಪ ಭಟ್ರಕಟ್ಟೆಯಲ್ಲಿ ನಡೆದಿದೆ. ಕಾರ್ಕಡ ಭಟ್ರಕಟ್ಟೆ ನಿವಾಸಿ 43 ವರ್ಷದ ಸುಧಾಕರ ಪೂಜಾರಿ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಇವರು ಪರೋಟ ವ್ಯಾಪಾರ ಮಾಡಿಕೊಂಡಿದ್ದರು. ಪರೋಟ ವ್ಯಾಪಾರಕ್ಕೆ ದೊಡ್ಡ ಪ್ರಮಾಣದ
ಬೈಂದೂರು:ಜು 13. ಅನಾಮದೇಯ ಕಾರಿನ ಜೊತೆಗೆ ವ್ಯಕ್ತಿಯೊಬ್ಬ ಸುಟ್ಟು ಶವವಾಗಿ ಪತ್ತೆಯಾಗಿರುವ ಘಟನೆ ಬೈಂದೂರು ಸಮೀಪದ ಹೇನ್ ಬೇರು ನಿರ್ಜನ ಪ್ರದೇಶದಲ್ಲಿ ಜು.12ರ ತಡರಾತ್ರಿ ವರದಿಯಾಗಿದೆ. ಕಾರಿನಲ್ಲಿದ್ದ ವ್ಯಕ್ತಿ ಸಮೇತ ಕಾರು ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಕಾರಿನ ಹಿಂಬದಿ ಸೀಟ್ ನಲ್ಲಿ ವ್ಯಕ್ತಿ ಇದ್ದು, ವ್ಯಕ್ತಿಯ ಶವ ಪುರುಷನದ್ದೋ ಅಥವಾ
ಗುಂಟೂರು:ಜು 13. ಸಾಲದ ಆ್ಯಪ್ ಆಪರೇಟರ್‌ಗಳ ಕಿರುಕುಳದ ತಾಳಲಾರದೆ ಮಹಿಳೆಯೊಬ್ಬರು ನೇಣಿಗೆ ಶರಣಾದ ಘಟನೆ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ನಡೆದಿದೆ. ಗುಂಟೂರು ಜಿಲ್ಲೆಯ ಮಂಗಳಗಿರಿ ಮಂಡಲದ ಚಿನ್ನಕಾಕನಿ ಗ್ರಾಮದ ನಿವಾಸಿ ಬಂಡಪಲ್ಲಿ ಪ್ರತ್ಯುಷಾ ಆತ್ಮಹತ್ಯೆಗೆ ಶರಣಾದವರು. ಪ್ರತ್ಯೂಷಾ ಇಂಡಿಯನ್ ಬುಲ್ಸ್ ಮತ್ತು ರುಪೆಕ್ಸ್ ಸಾಲದ ಆ್ಯಪ್‌ನಲ್ಲಿ 20 ಸಾವಿರ ರೂ.
ಉಡುಪಿ:ಜು 12 ಹಿಂದುಳಿದ ವರ್ಗಗಳ ಮತ್ತು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಅವರ ಎಸ್ಕಾರ್ಟ್ ವಾಹನ ಅಪಘಾತಕ್ಕೀಡಾಗಿರುವ ಘಟನೆ ಇಲ್ಲಿಗೆ ಉಡುಪಿ ಸಮೀಪದ ಸಂತೆಕಟ್ಟೆ ಕೆಜಿ ರೋಡ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಜು.12ರಂದು ನಡೆದಿದೆ. ಘಟನೆಯಲ್ಲಿ ಎಸ್ಕಾರ್ಟ್ ಸಿಬ್ಬಂದಿ ಗಾಯಗೊಂಡಿದ್ದು, ಆಸ್ಪತ್ರೆಗೆ ಸೇರಿಸಲಾಗಿದೆ. ಸಚಿವ ಕೋಟ ಅವರ ಬೆಂಗಾವಲು ವಾಹನದ