Log In
BREAKING NEWS >
ಫೆ.14 ಮತ್ತು 15ರ೦ದು ಉಡುಪಿಯ ಪಣಿಯಾಡಿಯ ಶ್ರೀಅನ೦ತಾಸನ ಶ್ರೀಲಕ್ಷ್ಮೀ ಅನ೦ತಪದ್ಮನಾಭ ದೇವಸ್ಥಾನದ ಧ್ವಜಸ್ತ೦ಭದ ಸ್ಥಾಪನಾ ಕಾರ್ಯಕ್ರಮವು ನಡೆಯಲಿದೆ.....

ಬೆಂಗಳೂರು :  ಚಿಟ್‌ ಫಂಡ್‌ ಹೆಸರಿನಲ್ಲಿ ಹೆಚ್ಚಿನ ಲಾಭದ ಆಸೆ ತೋರಿಸಿ ಜನರಿಂದ ಹಣ ಸಂಗ್ರಹಿಸಿ ವಂಚಿಸಿದ್ದ ಮಹಿಳೆಯನ್ನು ರಾಜಾಜಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ. ಬಂಧಿತವಾದ ಮಹಿಳೆ ಕೆಂಗೇರಿ ನಿವಾಸಿ ಲಕ್ಷ್ಮಿ ಅಲಿಯಾಸ್‌ ವಾಣಿ ಎಂದು ತಿಳಿಯಲಾಗಿದೆ. ಚಿಟ್‌ ಫಂಡ್‌ನಲ್ಲಿ ಹಣ ಹೂಡಿದರೆ ಹೆಚ್ಚಿನ ಆದಾಯ ಸಿಗಲಿದೆ

ಕಾರ್ಕಳ, ಜೂ 22.ಕಾರ್ಕಳ ನಗರದ ಹೊರವಲಯದ ಪತ್ತೊಂಜಿಕಟ್ಟೆ ಪೊಲ್ಲಾರು ಎಂಬಲ್ಲಿ ಕಿರುಸೇತುವೆ ಬಳಿ ಜೂ 21 ರಂದು ಸಂಜೆ ನವಜಾತ ಶಿಶುವಿನ ಮೃತದೇಹ ಪತ್ತೆಯಾಗಿದೆ. ಸೇತುವೆ ಪಕ್ಕದಲ್ಲಿರುವ ಮನೆಯವರಿಗೆ ಮಗು ಅಳುವ ಶಬ್ದ ಕೇಳಿ ಬಂದ ಹಿನ್ನಲೆಯಲ್ಲಿ ಶಬ್ದ ಎಲ್ಲಿಂದ ಕೇಳಿ ಬರುತ್ತಿದೆ ಎಂದು ಶೋಧ ನಡೆಸಿದಾಗ ಕಿರು

ಉಡುಪಿ:ಇತರರನ್ನು ಸಂತೋಷದಲ್ಲಿ ಇಡುವುದೇ ಅಂತರಾಷ್ಟ್ರೀಯ ಲಯನ್ಸ್ ಕ್ಲಬ್ಬಿನ ಉದ್ದೇಶವಾಗಿದೆ. ವಿಶ್ವ ಕುಟುಂಬ ಜಾಗತಿಕ ಭ್ರಾತೃತ್ವ ಈ ಸಂಸ್ಥೆಯ ಆದರ್ಶ ಸಂದೇಶವಾಗಿದೆ. ಪರಸ್ಪರ ಪ್ರೀತಿ ಸ್ನೇಹ ವಿಶ್ವಾಸಗಳು ಈ ಸಂಸ್ಥೆಯ ಆಧಾರ ಕಂಬಗಳು. ಲಯನ್ಸ್ ಸಂಸ್ಥೆ ಧರ್ಮಾತೀತವಾಗಿ, ಜಾತ್ಯತೀತವಾಗಿ ,ಪ್ರಾಂತ್ಯಾತೀತವಾಗಿ ವಿಶ್ವವ್ಯಾಪಿಯಾದ ಮಹಾನ ಸೇವಾ ಸಂಸ್ಥೆಯಾಗಿ ರೂಪುಗೊಂಡಿದೆ. ತಾರೀಕು 18ರಂದು

ಉಳ್ಳಾಲ : ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲದ ಉಚ್ಚಿಲ ಸೋಮೇಶ್ವರ ಬಳಿ ಸಮುದ್ರದಲ್ಲಿ ಸಿರಿಯಾ ಮೂಲದ ಹಡಗೊಂದು ತಾಂತ್ರಿಕ ಸಮಸ್ಯೆಯಿಂದಾಗಿ ಅಪಾಯಕ್ಕೆ ಸಿಲುಕಿ ಅದರಲ್ಲಿದ್ದ ಮಂದಿಯನ್ನು ರಕ್ಷಿಸಿದ ಘಟನೆ ಇಂದು ಸಂಭವಿಸಿದೆ. ಈ ಹಡಗಿನಲ್ಲಿ ಸುಮಾರು 15 ಮಂದಿ ನಾವಿಕರಿದ್ದು ಅವರನ್ನು ಕೋಸ್ಟ್ ಗಾರ್ಡ್ ತಂಡ ರಕ್ಷಿಸಿ ದಡಕ್ಕೆ ಕರೆತಂದಿದ್ದಾರೆ

ಕಾಪು : ಉಡುಪಿ ಜಿಲ್ಲೆಯ ಕಾಪು ಸಮೀಪ ಶೇಂದಿ ತೆಗೆಯಲು ಮರ ಹತ್ತಿದ್ದಾಗ ತೆಂಗಿನ ಮರದಿಂದ ಕೆಳಕ್ಕೆ ಬಿದ್ದು ಗಾಯಗೊಂಡಿದ್ದ ವ್ಯಕ್ತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ ಘಟನೆ ಸಂಭವಿಸಿದೆ. ಸಾವನ್ನಪ್ಪಿದ ವ್ಯಕ್ತಿ ಉಳಿಯಾರಗೋಳಿ ಗ್ರಾಮದ ತಾಳಿ ತೊಟ ನಿವಾಸಿ ವಿನೋದರ ಎ. ಸನಿಲ್ (55) ಎಂದು ಗುರುತಿಸಲಾಗಿದೆ. ಸಾಂಪ್ರಧಾಯಿಕ ಶೈಲಿಯ

ಬೆಂಗಳೂರು:ಕನ್ನಡ ಚಿತ್ರರಂಗದ ನಟ ದಿಂಗತ್ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಮ್ಮರ್ ಸಾಲ್ಟ್ ಫ್ಲಿಪ್ ಮಾಡುವ ಯತ್ನದಲ್ಲಿ ಬಿದ್ದು ಕುತ್ತಿಗೆ ಮತ್ತು ಬೆನ್ನಿಗೆ ಗಂಭೀರವಾದ ಗಾಯವಾಗಿರುವುದರಿಂದ ಮಣಿಪಾಲ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ. ವೈದ್ಯರು ದಿಗಂತ್ ಅವರನ್ನು ಪರೀಕ್ಷಿಸಿ ಶಸ್ತ್ರ ಚಿಕಿತ್ಸೆಯನ್ನು ಮಾಡುವ ಅವಶ್ಯಕತೆಯಿದೆ ಎಂದು ಕುಟುಂಬಸ್ಥರಿಗೆ ತಿಳಿಸಿದ್ದಾರೆ

ಮುಂಬೈ: ಏಳು ಮಂದಿ ಸ್ವತಂತ್ರ ಶಾಸಕರು ಹಾಗೂ 33 ಶಿವಸೇನೆ ಶಾಸಕರು ಸೇರಿದಂತೆ ಮಹಾರಾಷ್ಟ್ರದ 40 ಶಾಸಕರು ಶಿವಸೇನೆ ಬಂಡಾಯ ನಾಯಕ ಏಕನಾಥ್ ಶಿಂಧೆಯವರಿಗೆ ಬೆಂಬಲ ವ್ಯಕ್ತಪಡಿಸಿ ಪತ್ರಕ್ಕೆ ಸಹಿ ಹಾಕಿದ್ದು, ರಾಜ್ಯಪಾಲರ ಭೇಟಿಯಾಗಿ ವಿಶ್ವಾಸಮತ ಯಾಚನೆ ಮಾಡಲು ಸಿದ್ಧತೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ. ರಾಜ್ಯ ವಿಧಾನಸಭೆಯಲ್ಲಿ ವಿಶ್ವಾಸ ಮತಯಾಚನೆಗೆ ಅನುಮತಿ

ಕಾಬೂಲ್: ಅಫ್ಘಾನಿಸ್ತಾನದಲ್ಲಿ ಬುಧವಾರ ಸಂಭವಿಸಿದ ಭಯಾನಕ ಭೂಕಂಪನದಲ್ಲಿ ಕನಿಷ್ಠ 250ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ದೇಶದ ಪೂರ್ವ ಭಾಗದಲ್ಲಿ ರಿಕ್ಟರ್ ಮಾಪಕದಲ್ಲಿ 6.1ರ ತೀವ್ರತೆಯಲ್ಲಿ ಭೂಮಿ ಕಂಪಿಸಿದೆ ಎಂದು ವಿಪತ್ತು ನಿರ್ವಹಣಾ ಅಧಿಕಾರಿಗಳು ತಿಳಿಸಿದ್ದಾರೆ. ಪಾಕ್ಟಿಕಾ ಪ್ರಾಂತ್ಯದಲ್ಲಿ ಅತಿ ಹೆಚ್ಚು ಸಾವು-ನೋವುಗಳು ಸಂಭವಿಸಿವೆ. ಈ ಭಾಗದಲ್ಲಿ ಕನಿಷ್ಠ 250 ಮಂದಿ ಮೃತಪಟ್ಟಿದ್ದು,

ಪುತ್ತೂರು, ಜೂ 21.ಕಬಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುರ ಎಂಬಲ್ಲಿ ತೆರೆಯಲಾಗಿರುವ ಹೊಸ ಬಾರ್ ಮತ್ತು ರೆಸ್ಟೋರೆಂಟ್ ಅನ್ನು ಮುಚ್ಚುವಂತೆ ಸ್ಥಳೀಯರು ಒತ್ತಾಯಿಸಿದ್ದು, ಸೋಮವಾರ ಸ್ಥಳಕ್ಕೆ ಸಮಸ್ಯೆಯನ್ನು ಸ್ಪಷ್ಟಪಡಿಸಲು ಆಗಮಿಸಿದ ಅಬಕಾರಿ ಅಧಿಕಾರಿಯ ವಾಹನವನ್ನು ಸ್ಥಳೀಯರು ಘೇರಾವ್ ಮಾಡಿದ್ದಾರೆ. ಸಮಾಜ ಸೇವಕ ಸುದರ್ಶನ್ ಸ್ಥಳೀಯರ ನೇತೃತ್ವ ವಹಿಸಿ ಮಾತನಾಡಿದ್ದು, 'ಮುರಾದ

ಉಡುಪಿ: ಜೂನ್ 21: ಉಡುಪಿಯ ವಿದ್ಯೋದಯ ಟ್ರಸ್ಟ್ (ರಿ.)ನ ಅಧ್ಯಕ್ಷರೂ ಶ್ರೀ ಪೇಜಾವರ ಮಠಾಧೀಶರಾದ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ವಿದ್ಯಾರ್ಥಿಗಳನ್ನು ಉದ್ದೇಶಿಸಿ, ಪದವಿ ಪೂರ್ವ ಶಿಕ್ಷಣವು ವೃತ್ತಿ ಶಿಕ್ಷಣದ ಪ್ರಾಥಮಿಕ ಹಂತವಾಗಿದ್ದು ಇಲ್ಲಿ ಗಳಿಸಿರುವ ಉತ್ತಮ ಫಲಿತಾಂಶ ನಿಮ್ಮ ಯಶಸ್ಸಿನ ಪಯಣದ ಮೊದಲ ಹೆಜ್ಜೆಯಾಗಿದೆ. ಯಶಸ್ಸಿನತ್ತ ಸಾಗಿ