Log In
BREAKING NEWS >
"ಕರಾವಳಿಕಿರಣ ಡಾಟ್ ಕಾ೦"ನ ಎಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ "ಶ್ರೀಅನ೦ತವೃತ"ದ ಶುಭಾಶಯಗಳು...

ಬೆಂಗಳೂರು:ಜೂ 24. ಡೇಟಿಂಗ್ ಆಪ್‌ನಲ್ಲಿ ಪರಿಚಯವಾದ ಯುವತಿಯೊಬ್ಬಳಿಗೆ ಕೇವಲ ಆರೇ ದಿನಗಳಲ್ಲಿ 5.70 ಕೋಟಿ ರೂ. ಹಣ ನೀಡಿ ಬ್ಯಾಂಕ್ ವ್ಯವಸ್ಥಾಪಕನೊಬ್ಬ ಕೈ ಸುಟ್ಟುಕೊಂಡಿದ್ದಾನೆ. ಠೇವಣಿದಾರರ ಹೆಸರಿನಲ್ಲಿ ಸಾಲದ ದಾಖಲೆ ಸೃಷ್ಟಿಸಿ ಕೋಟ್ಯಾಂತರ ರೂಪಾಯಿ ದುರುಪಯೋಗ ಆರೋಪದಲ್ಲಿ ಇದೀಗ ಆತ ಪೊಲೀಸರ ಅತಿಥಿಯಾಗಿದ್ದಾನೆ. ಬೆಂಗಳೂರಿನ ಹನುಮಂತನಗರದ ಇಂಡಿಯನ್ ಬ್ಯಾಂಕ್‌ ವ್ಯವಸ್ಥಾಪಕ

ದಿಸ್ಪುರ್: ಅಸ್ಸಾಂನಲ್ಲಿ ಪ್ರವಾಹ ಪರಿಸ್ಥಿತಿ ಮತ್ತಷ್ಟು ಗಂಭೀರವಾಗುತ್ತಿದ್ದು, ಕಳೆದ 24 ಗಂಟೆಗಳಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಏಳು ಮಂದಿ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಮಹಾಮಳೆಗೆ ಮೃತಪಟ್ಟವರ ಸಂಖ್ಯೆ 108ಕ್ಕೆ ತಲುಪಿದ್ದು, ಭೂಕುಸಿತದಲ್ಲಿ 17 ಮಂದಿ ಸಾವನ್ನಪ್ಪಿದ್ದಾರೆ ಎಂದು ಶನಿವಾರ ಅಧಿಕಾರಿಗಳು ತಿಳಿಸಿದ್ದಾರೆ. 'ಬರಾಕ್ ಕಣಿವೆಗೆ ಗೇಟ್‌ವೇ' ಎಂದು ಪರಿಗಣಿಸಲಾದ ಸಿಲ್ಚಾರ್‌ನಲ್ಲಿನ ಪರಿಸ್ಥಿತಿಯು

ಜೂನ್ 22ರ ಬುಧವಾರದ೦ದು ತಮ್ಮ ತಮ್ಮ ಮನೆಯ ಹಿರಿಯರೆಲ್ಲರ ದಿವ್ಯ ಉಪಸ್ಥಿತಿಯಲ್ಲಿ ನೂತನವಾಗಿ ನಿಶ್ಚಿತಾರ್ಥವನ್ನು ಮಾಡಿಕೊ೦ಡ ಅಭಿಷೇಕ್ ರಾವ್ ಮತ್ತು ಅಕ್ಷತಾರವರಿಗೆ ಅಭಿನ೦ದನೆಗಳನ್ನು ಬಯಸುವ:- ಕರಾವಳಿಕಿರಣ ಡಾಟ್ ಕಾ೦ ಬಳಗ ಉಡುಪಿ-ದುಬೈ , ಎಸ್. ಎನ್. ನ್ಯೂಸ್ ಏಜೆನ್ಸಿ ರಥಬೀದಿ ಉಡುಪಿ, ವಿಜಯ ಮೆಟಲ್ ಸಮೂಹ ಸ೦ಸ್ಥೆಯ ನೌಕರ ವೃ೦ದ

ಉಡುಪಿ ಜೂ.24. ಉಡುಪಿ ಜಿಲ್ಲಾ ಕೆ. ಕೃಷ್ಣಮೂರ್ತಿ ಅಚಾರ್ಯ ಅಭಿಮಾನಿ ಬಳಗದ ವತಿಯಿಂದ ಉಚಿತ ನೇತ್ರ ಹಾಗೂ ಅರೋಗ್ಯ ತಪಾಸಣಾ ಶಿಜರ ಜೂ.25 ರಂದು ಕಡೆಕಾರಿನ ಬಿಲ್ಲವ ಸೇವಾ ಸಂಘದಲ್ಲಿ ಬೆಳಿಗ್ಗೆ 8 ಗಂಟೆಯಿಂದ ನಡೆಯಲಿದೆ. ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ, ಬಿಲ್ಲವ ಸೇವಾ ಸಂಘ ಕಡೆಕಾರು

ಬೈಂದೂರು : ಉಡುಪಿ ಜಿಲ್ಲೆಯ ಬೈಂದೂರು ಸಮೀಪ ಮುಂಬೈನಿಂದ ಮಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಚಿನ್ನದ ವ್ಯಾಪಾರಿಯೋರ್ವರ 18 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವು ಮಾಡಿದ ನಾಲ್ವರು ಆರೋಪಿಗಳನ್ನು ಬೈಂದೂರು ಪೋಲಿಸರ ತಂಡ ಬಂಧಿಸಿದ ಘಟನೆ ನಡೆದಿದೆ. ಪೊಲೀಸರಿಂದ ಬಂಧಿತವಾದ ಆರೋಪಿಗಳು ಮಧ್ಯಪ್ರದೇಶ ಧರ್ಮಪುರಿ ನಿವಾಸಿಗಳಾದ ಆಲಿಖಾನ್

ಮೈಸೂರು: ಹತ್ತು ದಿನಗಳ ಹಿಂದೆ 21 ವರ್ಷದ ಅರ್ಚಕನ ಜೊತೆ ಪರಾರಿಯಾಗಿದ್ದ ವಿವಾಹಿತ ಮಹಿಳೆ ಕಾಡಂಚಿನಲ್ಲಿ ಪತ್ತೆಯಾಗಿದ್ದಾಳೆ ಎಂದು ತಿಳಿದು ಬಂದಿದೆ. ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಕೊಲ್ಲುಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. 21 ವರ್ಷದ ಅರ್ಚಕನ ಜೊತೆ ಪರಾರಿಯಾದ ಎರಡು ಮಕ್ಕಳ ತಾಯಿ ಈಗ ಅತಂತ್ರಕ್ಕೆ ಸಿಲುಕಿದ್ದಾಳೆ.

ಮಂಗಳೂರು:ಜೂ 24. ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಎಲೆಕ್ಟ್ರಿಕ್ ಸ್ಕೂಟರ್ ಶೋರೂಮ್ ಸಂಪೂರ್ಣವಾಗಿ ಸುಟ್ಟುಹೋದ ಘಟನೆ ನಗರ ಹೊರವಲಯದ ಪಡೀಲ್ ಅಳಪೆ ಸಮೀಪದ ನಾಗುರಿ ಬಳಿ ಜೂ.23 ರ ಶುಕ್ರವಾರ ನಡೆದಿದೆ. ಅಗ್ನಿ ಅವಘಡದಿಂದ ಹಲವು ಸ್ಕೂಟರ್‌ಗಳು ಬೆಂಕಿಗೆ ಆಹುತಿಯಾಗಿದ್ದು, ಲಕ್ಷಾಂತರ ರೂಪಾಯಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಇಂದು ಬೆಳಗ್ಗೆ ಸುಮಾರು 8

ಉತ್ತರ ಪ್ರದೇಶ: ಜೂ 24. ಕಂಠಪೂರ್ತಿ ಕುಡಿದು ಮದುವೆ ಮಂಟಪಕ್ಕೆ ಬಂದ ವರನೊಬ್ಬ ವಧುವಿಗೆ ಹೂಹಾರ ಹಾಕುವ ಬದಲು ಆಕೆಯ ಅತ್ತಿಗೆಯ ಕುತ್ತಿಗೆಗೆ ಹಾರ ಹಾಕಿ ಕಪಾಳ ಮೋಕ್ಷ ಮಾಡಿಸಿಕೊಂಡ ಘಟನೆ ಉತ್ತರ ಪ್ರದೇಶದ ಹಮೀರ್‌ಪುರದಲ್ಲಿ ನಡೆದಿದೆ. ವರ ಕಂಠಪೂರ್ತಿ ಕುಡಿದು ಮಂಟಪಕ್ಕೆ ಬಂದಿದ್ದು, ಮಂಟಪದಲ್ಲಿ ತೂರಾಡುತ್ತಿದ್ದ ಆತನನ್ನು ವ್ಯಕ್ತಿಯೊಬ್ಬ

ಕಾಸರಗೋಡು:ಜೂ 24. ಮನೆಯೊಂದಕ್ಕೆ ನುಗ್ಗಿ ಮನೆಯವರ ಪ್ರಜ್ಞೆ ತಪ್ಪಿಸಿ 30 ಪವನ್ ಚಿನ್ನಾಭರಣ ಹಾಗೂ ನಾಲ್ಕು ಲಕ್ಷ ರೂ. ಕಳವು ಗೈದ ಘಟನೆ ಬೇಕಲ ಠಾಣಾ ವ್ಯಾಪ್ತಿಯ ಪೂಚ ಕ್ಕಾಡ್ ನಲ್ಲಿ ನಡೆದಿದೆ. ಪೂಚಕ್ಕಾಡ್ ಮುನೀರ್ ಎಂಬವರ ಮನೆಯ ಮೇಲಂತಸ್ತಿನ ಕಿಟಿಕಿ ಸರಳು ಮುರಿದು ಕಳ್ಳರು ಒಳನುಗ್ಗಿದ್ದು, ಕಪಾಟಿನಲ್ಲಿ ಇರಿಸಲಾಗಿದ್ದ

ಕಾಬೂಲ್: ಅಫ್ಘಾನಿಸ್ತಾನದಲ್ಲಿ ಬುಧವಾರ ಸಂಭವಿಸಿದ ಭಯಾನಕ ಭೂಕಂಪನದಲ್ಲಿ ಕನಿಷ್ಠ 920ಮಂದಿ ಮೃತಪಟ್ಟಿದ್ದಾರೆ ಮತ್ತು 600ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದೇಶದ ಪೂರ್ವ ಭಾಗದಲ್ಲಿ ರಿಕ್ಟರ್ ಮಾಪಕದಲ್ಲಿ 6.1ರ ತೀವ್ರತೆಯಲ್ಲಿ ಭೂಮಿ ಕಂಪಿಸಿದೆ ಎಂದು ವಿಪತ್ತು ನಿರ್ವಹಣಾ ಅಧಿಕಾರಿಗಳು ಹೇಳಿದ್ದಾರೆ. ಪಾಕ್ಟಿಕಾ ಪ್ರಾಂತ್ಯದಲ್ಲಿ ಅತಿ ಹೆಚ್ಚು ಸಾವು-ನೋವುಗಳು ಸಂಭವಿಸಿವೆ.