Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿನ 94ನೇ ಭಜನಾ ಸಪ್ತಾಹ ಮಹೋತ್ಸವಕ್ಕೆ ದೀಪ ಪ್ರಜ್ವಲನೆಯೊ೦ದಿಗೆ ವಿದ್ಯುಕ್ತ ಚಾಲನೆ.......ಡಿ.2ರ ಶುಕ್ರವಾರದ೦ದು ಪುತ್ತಿಗೆ ಮಠದ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರ ಪರ್ಯಾಯ ಮಹೋತ್ಸವಕ್ಕೆ ಬಾಳೆಮುಹೂರ್ತ ಕಾರ್ಯಕ್ರಮವು 8ಗ೦ಟೆಗೆ ಪುತ್ತಿಗೆ ಮಠದ ಆವರಣದಲ್ಲಿ ಜರಗಲಿದೆ...

ಬೆಂಗಳೂರು:ಜೂ 30: ರಾಜಸ್ಥಾನದ ಉದಯಪುರದಲ್ಲಿ ಜಿಹಾದಿಗಳಿಂದ ಹತ್ಯೆಗೊಳಗಾದ ಟೈಲರ ಕನ್ಹಯ್ಯ ಲಾಲ್‌ ಅವರ ಕುಟುಂಬಕ್ಕೆ ಕಳೆದ 24 ಗಂಟೆಯಲ್ಲಿ 1 ಕೋಟಿ ರೂ. ಹಣ ಸಂಗ್ರಹವಾಗಿದೆ. ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ ನಾಯಕ ಕಪಿಲ್‌ ಮಿಶ್ರಾ, ಕಣ್ಣೀರು ತಡೆಯಲು ಸಾಧ್ಯವಾಗುತ್ತಿಲ್ಲ. ಹಿಂದೂಗಳೆಲ್ಲರೂ ಕನ್ಹಯ್ಯ ಲಾಲ್ ಕುಟುಂಬದ ಜೊತೆ ನಿಂತಿರುವುದಕ್ಕೆ

ಮಂಗಳೂರು: ಜೂ 30. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಳೆಯೂ ಮಳೆ ಮುಂದುವರಿಯುವ ಸಾಧ್ಯತೆ ಇರುವುದರಿಂದ ಜಿಲ್ಲೆಯ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ಜುಲೈ 1ರ ಶುಕ್ರವಾರ ರಜೆ ನೀಡಿ ದ.ಕ. ಜಿಲ್ಲಾಧಿಕಾರಿ ಡಾ. ಕೆ.ವಿ ರಾಜೇಂದ್ರ ಅವರು ಆದೇಶಿಸಿದ್ದಾರೆ. ಭಾರತೀಯ ಹವಾಮಾನ ಇಲಾಖೆಯು ಶುಕ್ರವಾರದ ಬೆಳಗ್ಗೆ 8.30ರವರೆಗೆ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್

ಉಡುಪಿ:ಜೂ 30. ಉಡುಪಿ ನಗರಸಭಾ ಅಧ್ಯಕ್ಷ್ಯರ ವಾರ್ಡಿನಲ್ಲಿಯೇ ಮಳೆಗಾಲದಲ್ಲಿ ಆರಂಭಿಸಿದ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಜನತೆ ಸಂಕಷ್ಟ ಪಡುವಂತಾಗಿದೆ. ಉಡುಪಿ ನಗರಸಭೆಗೆ ಒಳಪಟ್ಟ ಸ್ವತಹ ನಗರಸಭಾ ಅಧ್ಯಕ್ಷರಾಗಿರುವ ಸುಮಿತ್ರಾ ನಾಯಕ್ ಇವರು ಪ್ರತಿನಿಧಿಸುವ ಪರ್ಕಳ ವಾರ್ಡಿನ ಬಿಎಸ್ಎನ್ಎಲ್ ಕಚೇರಿಯ ಟವರ್ ಪಕ್ಕದಿಂದ ಕೋಡಂಗೆ ಶ್ರೀ ರಾಮ ಭಜನಾ ಮಂದಿರದ ತನಕ

ಸುಬ್ರಹ್ಮಣ್ಯ: ಜೂ 30. ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಗುರುವಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿ ಶ್ರೀ ದೇವರ ದರುಶನ ಪಡೆದು ದೇವಲದಲ್ಲಿ ಸರ್ಪಸಂಸ್ಕಾರ ಸೇವೆ ನೆರವೇರಿಸಿದರು. ಮಧ್ಯಾಹ್ನ ವೇಳೆ ಶ್ರೀ ಕ್ಷೇತ್ರಕ್ಕೆ ಆಗಮಿಸಿದ ಅವರನ್ನು ದೇವಸ್ಥಾನದ ಹಾಗೂ ಜಿಲ್ಲಾಡಳಿತ ವತಿಯಿಂದ ಸ್ವಾಗತಿಸಲಾಯಿತು. ಬಳಿಕ ಅವರು

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಇಂದು ಗುರುವಾರ ಧಾರಾಕಾರ ಮಳೆಯಾಗುತ್ತಿದ್ದು, ತಗ್ಗು ಪ್ರದೇಶಗಳು ಜಲಾವೃತವಾಗಿವೆ. ಮಂಗಳೂರು ನಗರದಲ್ಲಿ ಬಹುತೇಕ ಕಡೆ ರಸ್ತೆಗಳಲ್ಲೆಲ್ಲಾ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು ನಗರದಾದ್ಯಂತ ಸಂಚಾರ ದಟ್ಟಣೆ ಉಂಟಾಗಿದೆ. ಮಂಗಳೂರು ನಗರದ ಪಡೀಲು, ಪಂಪ್ ವೆಲ್, ಬೆಜೈ, ಅತ್ತಾವರ, ನೀರುಮಾರ್ಗಗಳಲ್ಲೆಲ್ಲಾ ಸಾಮಾನ್ಯ ಜನಜೀವನ ಅಸ್ತವ್ಯಸ್ತವಾಗಿದೆ. ಹೊರಗೆ ವ್ಯವಹಾರಕ್ಕೆ, ಕಚೇರಿಗೆಂದು

ನವದೆಹಲಿ: ಮಣಿಪುರದ ನೋನಿ ಜಿಲ್ಲೆಯ ತುಪುಲ್ ರೈಲು ನಿಲ್ದಾಣದಲ್ಲಿ ಭಾರಿ ಭೂಕುಸಿತ ಸಂಭವಿಸಿದೆ. ಭೀಕರ ಭೂಕುಸಿತದಲ್ಲಿ 7 ಮಂದಿ ಸಾವನ್ನಪ್ಪಿದ್ದು ನಂತರ ಕನಿಷ್ಠ 45 ಭಾರತೀಯ ಸೇನಾ ಸಿಬ್ಬಂದಿ ಮತ್ತು ಹಲವು ಜನರು ನಾಪತ್ತೆಯಾಗಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಅವಶೇಷಗಳಲ್ಲಿ ಸಿಲುಕಿರುವುದರಿಂದ ಮುಂದೆ ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗಬಹುದು. ಜಿರಿಬಾಮ್‌ನಿಂದ

ಮುಂಬೈ: ಉದ್ಧವ್ ಠಾಕ್ರೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಎಂವಿಎ ಸರ್ಕಾರ ಪತನಗೊಂಡಿದ್ದು ಇದರ ಬೆನ್ನಲ್ಲೇ ಶಿವಸೇನೆ ಬಂಡಾಯ ಶಾಸಕರ ತಂಡದ ನಾಯಕತ್ವ ವಹಿಸಿರುವ ಏಕನಾಥ್ ಶಿಂಧೆ ಅವರು ದೇವೇಂದ್ರ ಫಡ್ನವಿಸ್ ಜೊತೆ ಸೇರಿ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರನ್ನು ಭೇಟಿ ನೂತನ ಸರ್ಕಾರ ರಚನೆಗೆ ಹಕ್ಕು

ಮನ್ನಾರ್​ಕಾಡ್:ಜೂ 29. ಹಲ್ಲುಜ್ಜದೆ ಮಗನಿಗೆ ಮುತ್ತು ಕೊಡುವುದನ್ನು ವಿರೋಧಿಸಿದ ಪತ್ನಿಯನ್ನು ಪತಿ ಕೊಲೆ ಮಾಡಿದ ಆತಂಕಕಾರಿ ಘಟನೆ ಕೇರಳದ ಮನ್ನಾರ್‌ಕಾಡ್‌ನಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ. ದೀಪಿಕಾ (28) ಕೊಲೆಯಾದ ಮಹಿಳೆ. ಕೊಲೆ ಕೃತ್ಯ ಎಸಗಿದ ಆಕೆಯ ಪತಿ ಅವಿನಾಶ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಹಲ್ಲುಜ್ಜದೆ ಮಗ ಐವಿನ್‌ಗೆ ಮುತ್ತು ನೀಡಲು ಬಂದ

ಬೆಂಗಳೂರು: ಜೂ 29. ಠೇವಣಿದಾರರ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ 5.70 ಕೋಟಿ ರೂ.ಗಳನ್ನು ಸಾಲ ಪಡೆದು ಡೇಟಿಂಗ್‌ ಆಪ್‌ನಲ್ಲಿ ಪರಿಚಯವಾದ ಯುವತಿಗೆ ವರ್ಗಾವಣೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ವಶದಲ್ಲಿರುವ ಹನುಮಂತನಗರದ ಇಂಡಿಯನ್​ ಬ್ಯಾಂಕ್​ ವ್ಯವಸ್ಥಾಪಕ, ಕೇರಳ ಮೂಲದ ಎಸ್. ಹರಿಶಂಕರ್​ ವಿಚಾರಣೆ ವೇಳೆ ಸ್ಪೋಟಕ ರಹಸ್ಯವನ್ನು

ನವದೆಹಲಿ: ಪ್ರವಾದಿ ಮೊಹಮ್ಮದರ ಕುರಿತು ಬಿಜೆಪಿ ಮಾಜಿ ವಕ್ತಾರೆ ನೂರುಪ್ ಶರ್ಮಾ ಆಡಿದ್ದ ಮಾತುಗಳನ್ನು ಬೆಂಬಲಿಸಿದ್ದ ವ್ಯಕ್ತಿಯ ಶಿರಚ್ಛೇದ ಮಾಡಿರುವ ಘಟನೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದು, ಘಟನೆ ಬಳಿಕ ಉದಯಪುರದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಈ ಹಿನ್ನೆಲೆಯಲ್ಲಿ ಉದಯುಪರದಲ್ಲಿ ಕರ್ಫ್ಯೂ ಜಾರಿ ಮಾಡಲಾಗಿದ್ದು, ರಾಜಸ್ಥಾನದಾದ್ಯಂತ 1 ತಿಂಗಳ ಕಾಲ ನಿಷೇಧಾಜ್ಞೆ