Log In
BREAKING NEWS >
ಜೂನ್ 1 ರಿಂದ 9ರವರೆಗೆ ಉಡುಪಿಯ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವ…

ಉಡುಪಿ: ಟಾಟಾ ಗ್ರೂಪ್‍ನ ಭಾರತದ ಮೊಟ್ಟಮೊದಲ ಓಮ್ನಿ- ಚಾನೆಲ್ ಎಲೆಕ್ಟ್ರಾನಿಕ್ಸ್ ಚಿಲ್ಲರೆ ವ್ಯಾಪಾರಿ ಸಂಸ್ಥೆಯಾದ ಕ್ರೋಮಾ, ಉಡುಪಿ- ಮಣಿಪಾಲ ಹೆದ್ದಾರಿಯ ಕಾವೇರಿ ಕಾಂಪ್ಲೆಕ್ಸ್‍ನಲ್ಲಿ ತನ್ನ ಹೊಸ ಮಳಿಗೆ ಆರಂಭಿಸುವ ಮೂಲಕ ಕರ್ನಾಟಕದಲ್ಲಿ ತನ್ನ ವಿಸ್ತರಣೆಯನ್ನು ಘೋಷಿಸಿದೆ. ರಾಜ್ಯದ ಒಂಬತ್ತನೇ ಮಳಿಗೆಯಾಗಿರುವ ಉಡುಪಿ ಮಳಿಗೆ 550 ಕ್ಕೂ ಬ್ರ್ಯಾಂಡ್‍ಗಳಾದ್ಯಂತ 16000 ಕ್ಕೂ

ಕುಂಬಳೆ: ನಗರದ ಸಮೀಪ ಉಪ್ಪಳದ ಶಾಲಾ ಬಳಿಯಲ್ಲಿ ಹಾಡಹಗಲೇ ಯುವಕ ಹಾಗೂ ಯುವತಿ ಮನೆಗೆ ನುಗ್ಗಿ ಮಹಿಳೆಗೆ ಚೂರಿ ತೋರಿಸಿ ಚಿನ್ನಾಭರಣ ಅಪಹರಿಸಿದ ಘಟನೆ ಉಪ್ಪಳದಲ್ಲಿ ಸಂಭವಿಸಿದೆ. ಯುವಕ ಹಾಗೂ ಯುವತಿ ಉಪ್ಪಳದ ಬಶೀರ್‌ ಅವರ ಮನೆಗೆ ಸ್ಕೂಟರಿನಲ್ಲಿ ಆಗಮಿಸಿ ಮನೆಯ ಮಹಿಳೆಯಲ್ಲಿ ಅತ್ತೆ ಮನೆಯಲ್ಲಿ ಇದ್ದರಾ ಎಂಬುದಾಗಿ ಪ್ರಶ್ನಿಸಿದ್ದರು.

ಬಂಟ್ವಾಳ: ಅಂತರಾಷ್ಟ್ರೀಯ ಮಟ್ಟದ ಕಬ್ಬಡ್ಡಿ ಆಟಗಾರ, ಏಕಲವ್ಯ ಪ್ರಶಸ್ತಿ ವಿಜೇತ, ಬ್ಯಾಂಕ್ ಉದ್ಯೋಗಿಯಾಗಿದ್ದ ಉದಯ ಚೌಟ ಮೇ.21ರಂದು ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ. ಮೃತರು ಬಂಟ್ವಾಳ ತಾಲೂಕಿನ ಮಾಣಿಯ ಬದಿಗುಡ್ಡೆಯಲ್ಲಿ ವಾಸವಿದ್ದರು.  ಪ್ರಸ್ತುತ ಬ್ಯಾಂಕ್ ಆಫ್ ಬರೋಡಾದ ಸುರತ್ಕಲ್ ಶಾಖೆಯಲ್ಲಿ ಉಪ ಪ್ರಬಂಧಕರಾಗಿದ್ದರು. ಅಲ್ಲದೆ ಅವರು ದ.ಕ ಜಿಲ್ಲಾ ಅಮೆಚೂರ್ ಕಬಡ್ಡಿ

ಧಾರವಾಡ: ಮರಕ್ಕೆ ಕ್ರೂಸರ್ ವಾಹನ ಢಿಕ್ಕಿ ಹೊಡೆದು ಸ್ಥಳದಲ್ಲೇ 7 ಮಂದಿ ದಾರುಣ ಸಾವಿಗೀಡಾಗಿರುವ ಘಟನೆ ಧಾರವಾಡ ತಾಲೂಕಿನ ಬಾಡ್ ಗ್ರಾಮದ ಬಳಿ ಇಂದು ಬೆಳಗ್ಗಿನ ನಸುಕಿನ ಜಾವ ನಡೆದಿದೆ. ಮೃತ ಪಟ್ಟವರನ್ನು ಅನನ್ಯ, ಹರೀಶ, ಶಿಲ್ಪಾ, ನೀಲವ್ವ, ಮಧುಶ್ರೀ, ಮಹೇಶ್ವರಯ್ಯ ಹಾಗೂ ಶಂಭುಲಿಂಗಯ್ಯ ಎಂದು ಗುರುತಿಸಲಾಗಿದೆ.  ಘಟನೆ ಸಂದರ್ಭ

ಬೆಂಗಳೂರು:ಮೇ 20. ಪ್ರಸಿದ್ಧ ಸಿನಿಮೋತ್ಸವ ಕಾನ್ ಫೆಸ್ಟಿವಲ್ ಪ್ರಾರಂಭವಾಗಿದ್ದು, ಈ ಕಾನ್ ಫೆಸ್ಟಿವಲ್‌ನಲ್ಲಿ ಭಾರತೀಯ ಸಿನಿಮಾ ರಂಗದ ಖ್ಯಾತ ತಾರೆಯರು ಭಾಗಿಯಾಗಿದ್ದು ಅದರಲ್ಲಿಯೂ ನಟಿಯರಾದ ಪೂಜಾ ಹೆಗ್ಡೆ, ದೀಪಿಕಾ ಪಡುಕೋಣೆ ಸಖತ್ ಮಿಂಚಿದ್ದು, ಅವರ ಪೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ದಕ್ಷಿಣ ಭಾರತದ ನಟಿ ಪೂಜಾ ಹೆಗ್ಡೆ ಫೋಟೋಗಳು

ಕುಂದಾಪುರ:ಮೇ 20. ಆಯುಷ್ ವೈದ್ಯರ ಬಗ್ಗೆ ಸುಳ್ಳು ವದಂತಿ ಹಬ್ಬಿರುವ ತನ್ನದೇ ಆದ ಹೊಸ ವೆಬ್‌ಸೈಟ್ ನಡೆಸುತ್ತಿರುವ ಪತ್ರಕರ್ತ ಕಿರಣ್ ಪೂಜಾರಿಯನ್ನು ಪೊಲೀಸರು ಬಂಧಿಸಿದ್ದಾರೆ. ಬೈಂದೂರು ಮತ್ತು ಕುಂದಾಪುರ ತಾಲೂಕಿನಲ್ಲಿರುವ ಆಯುಷ್ ಕ್ಲಿನಿಕ್‌ಗಳಿಗೆ ಭೇಟಿ ನೀಡಿ, ವಿಡಿಯೋ ಚಿತ್ರೀಕರಿಸಿ, ಅಲ್ಲಿರುವ ಕೆಲ ವೈದ್ಯರು ಕುತಂತ್ರಿಗಳು ಎಂದು ರೋಗಿಗಳೊಂದಿಗೆ ಹೇಳಿಕೊಂಡಿದ್ದ ಕಿರಣ್

ಉಡುಪಿ: ಮೇ 20. ಸಮಗ್ರ ಜೀರ್ಣೋದ್ಧಾರ ಗೊಳ್ಳುತ್ತಿರುವ ಕಡಿಯಾಳಿ ಶ್ರೀಮಹಿಷಮರ್ದಿನಿ ದೇಗುಲದ ಬ್ರಹ್ಮಕಲಶೋತ್ಸವ ಜೂನ್ 1 ರಿಂದ 10ರ ತನಕ ನಡೆಯಲಿದ್ದು ಇದರ ಪೂರ್ವಭಾವಿಯಾಗಿ ದೇಗುಲದ ಆವರಣದಲ್ಲಿ ದೇವಸ್ಥಾನದ ಪ್ರಧಾನ ತಂತ್ರಿಗಳಾದ ಪಾಡಿಗಾರು ಶ್ರೀನಿವಾಸ ತಂತ್ರಿಗಳ ನೇತೃತ್ವದಲ್ಲಿ ಅರ್ಚಕರಾದ ರಾಧಾಕೃಷ್ಣ ಉಪಾಧ್ಯಾಯ, ಶ್ರೀನಿಧಿ ಉಪಾಧ್ಯಾಯ ಅವರ ಪೌರೋಹಿತ್ಯದಲ್ಲಿ ಗುರುವಾರ

ಶ್ರೀನಗರ: ಕಾಶ್ಮೀರದ ರಾಂಬನ್ ಜಿಲ್ಲೆಯ ಮೇಕರ್‌ಕೋಟೆ ಪ್ರದೇಶದ ಖೂನಿ ನಾಲಾದಲ್ಲಿ ನಿರ್ಮಾಣ ಹಂತದಲ್ಲಿರುವ ಸುರಂಗದ ಒಂದು ಕುಸಿದುಬಿದ್ದಿದ್ದು, ಪರಿಣಾಮ ಹಲವರು ಸಿಲುಕಿರುವ ಶಂಕೆಗಳು ವ್ಯಕ್ತವಾಗಿದೆ. ಸುರಂಗದಲ್ಲಿ 10 ಮಂದಿ ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ಪ್ರಸ್ತುಕ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಆರಂಭಗೊಂಡಿದೆ. ‘ರಾಂಬನ್‌ನ ಮೇಕರ್‌ಕೋಟೆ ಪ್ರದೇಶದಲ್ಲಿ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯ ಖೂನಿ ನಾಲಾದಲ್ಲಿ

ಮಂಗಳೂರು:ಮೇ 20. ನಗರದ ಅಪಾರ್ಟ್‌ಮೆಂಟ್‌ವೊಂದರಲ್ಲಿ ವಾಸವಾಗಿದ್ದ ಮಹಿಳೆಯೊಬ್ಬರ ವಿಶ್ವಾಸಗಳಿಸಿ, ನಂತರ ಮದುವೆಯಾಗುವುದಾಗಿ ನಂಬಿಸಿ ನಿರಂತರ ಅತ್ಯಾಚಾರಗೈದು 1.5ಕೋಟಿ ರೂ. ವಂಚನೆಗೈದಿರುವ ಬಗ್ಗೆ ನಗರದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಯನ್ನು ಬಂಧಿಸಲಾಗಿದೆ. ಮೂಲತಃ ವಿಟ್ಲ ಬೈರಿಕಟ್ಟೆಯ ನಿವಾಸಿ ಫಯಾಝ್ (30) ಬಂಧಿತ ಆರೋಪಿಯಾಗಿದ್ದು, ಸಂತ್ರಸ್ತ ಮಹಿಳೆಯ ಕುಟುಂಬ 2012ರಲ್ಲಿ ಸುರತ್ಕಲ್‌ನಲ್ಲಿದ್ದ

ಹೆಬ್ರಿ:ಮೇ, 20. ಎರಡೂವರೆ ವರ್ಷದ ಮಗುವನ್ನು ಎತ್ತಿ ಆಡಿಸುವ ವೇಳೆ ಮಗು ಕೈ ಜಾರಿ ಕೆಳಗೆ ಬಿದ್ದ ಪರಿಣಾಮ ಗಂಭೀರವಾಗಿ ಗಾಯಗೊಂಡ ಘಟನೆ ಹೆಬ್ರಿಯ ಶಿವಪುರ ಗ್ರಾಮದ ಮುಳ್ಳುಗುಡ್ಡೆಯಲ್ಲಿ ನಡೆದಿದೆ. ಜನತಾ ಕಾಲನಿಯ ಕೃಷ್ಣ -ಶಕುಂತಳಾ ದಂಪತಿಯ ಪುತ್ರಿ ಸಾಕ್ಷಿ (2.6 ವ) ಗಂಭೀರ ಗಾಯಗೊಂಡ ಮಗು. ಮಂಗಳವಾರ ರಾತ್ರಿ ಮನೆಯ