Log In
BREAKING NEWS >
ದೆಹಲಿ ಮಹಾನಗರ ಪಾಲಿಕೆ ಆಪ್ ತೆಕ್ಕೆಗೆ; 15 ವರ್ಷಗಳ ಬಿಜೆಪಿ ಆಡಳಿತ ಅಂತ್ಯ, 150ಕ್ಕೂ ಹೆಚ್ಚು ವಾರ್ಡ್ ಗಳಲ್ಲಿ ಆಪ್‌ ಕಮಾಲ್‌...

ಮಂಗಳೂರು: ಮೇ 27 ರಂದು ನಡೆದ ಎಸ್ ಡಿಪಿಐ ಸಮಾವೇಶದ ವೇಳೆ ನಗರದ ಕೊಡೆಕ್ಕಲ್ ಚೆಕ್ ಪೋಸ್ಟ್ ಬಳಿ ಪೊಲೀಸ್ ಸಿಬ್ಬಂದಿಗಳಿಗೆ ನಿಂದಿಸಿದ ಆರೋಪದ ಮೇಲೆ 9ಮಂದಿಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಮಂಗಳೂರು ಇನೋಳಿ ನಿವಾಸಿ ನೌಷಾದ್‌ (28), ಹೈದರಾಲಿ (27) ಮತ್ತು ಇವರಿಗೆ ಆಶ್ರಯ ನೀಡಿದ ಪಾಂಡೇಶ್ವರ ನಿವಾಸಿ ಮೊಹಮ್ಮದ

ಉಡುಪಿ:ಕಡಿಯಾಳಿ ದೇವಳದ ಬ್ರಹ್ಮಕಲಶೋತ್ಸವದ ಪರ್ವಕಾಲದಲ್ಲಿ ಸಂಗೀತ ವಿದ್ಯಾನಿಧಿ ಬಿರುದಾಂಕಿತ ಡಾ.ವಿದ್ಯಾಭೂಷಣ ಸಿರಿಕಂಠದಲ್ಲಿ ಜಗನ್ಮಾತೆ ಕಡಿಯಾಳಿ ಶ್ರೀಮಹಿಷಮರ್ದಿನಿ ದೇವರ "ಶರಣು ಶ್ರೀದೇವಿ "ಎಂಬ ಹಾಡಿನ ಗುಚ್ಛಗಳನ್ನು ಕಡಿಯಾಳಿ ಶ್ರೀಮಹಿಷಮರ್ದಿನಿ ದೇವಸ್ಥಾನದ ಯೂಟ್ಯೂಬ್ನಲ್ಲಿ ಶಾಸಕ ಕೆ. ಆರ್. ಭಟ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ವ್ಯವಸ್ಥಾಪನ ಮಂಡಳಿ ಅಧ್ಯಕ್ಷರಾದ ಡಾ. ಕ.ರ ಆಚಾರ್ಯ, ಜೀರ್ಣೋದ್ಧಾರ

ಉಡುಪಿ,ಮೇ 31: ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇಗುಲದಲ್ಲಿ ಜೂ.1ರಿಂದ 10ರ ತನಕ ನಡೆಯ ಲಿರುವ ಬ್ರಹ್ಮಕಲಶೋತ್ಸವ ಪ್ರಯುಕ್ತ ಜೂ.1ರ ಸಂಜೆ 4ಕ್ಕೆ ಹೊರಕಾಣಿಕೆ ಮೆರವಣಿಗೆ ನಡೆಯಲಿದೆ. ಕಾಣಿಯೂರುಮಠದ ಶ್ರೀವಿದ್ಯಾ ವಲ್ಲಭತೀರ್ಥ ಶ್ರೀಪಾದರು ಉದ್ಘಾ ಟಿಸುವರು. ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಡಾ| ಜಿ. ಶಂಕರ್ ಚಾಲನೆ ನೀಡಲಿದ್ದಾರೆ. ವಿಶೇಷ ಆಕರ್ಷಣೆ ಮೆರವಣಿಗೆಯು ಜೋಡುಕಟ್ಟೆಯಿಂದ

ನವದೆಹಲಿ: ಕೇಂದ್ರ ನಾಗರಿಕ ಸೇವಾ ಆಯೋಗ (UPSC) 2021 ರ ನಾಗರಿಕ ಸೇವೆಗಳ ಪರೀಕ್ಷೆಯ ಅಂತಿಮ ಫಲಿತಾಂಶವನ್ನು ಪ್ರಕಟಿಸಿದೆ. ಅಭ್ಯರ್ಥಿಗಳು ತಮ್ಮ ಫಲಿತಾಂಶವನ್ನು UPSCಯ ಅಧಿಕೃತ ವೆಬ್‌ಸೈಟ್‌  http://www.upsc.gov.in ನಲ್ಲಿ ನೋಡಬಹುದು. ಶ್ರುತಿ ಶರ್ಮಾ ದೇಶದಲ್ಲಿ ಮೊದಲ ಸ್ಥಾನದಲ್ಲಿ  ಹೊರಹೊಮ್ಮಿದರೆ, ಅಂಕಿತಾ ಅಗರ್ವಾಲ್ ಎರಡನೇ ಸ್ಥಾನ ಪಡೆದರು. ಗಾಮಿನಿ ಸಿಂಗ್ಲಾ ಮೂರನೇ ಟಾಪರ್ ಆಗಿ

ಉಡುಪಿ : ಯಕ್ಷಗಾನ ಕಲಾರಂಗ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆಸಿದ ಈ ವರ್ಷದ ‘ಉತ್ತರ ರಾಮಾಯಣ’ದ ಶೀರ್ಷಿಕೆಯಲ್ಲಿ ಜರಗಿದ ತಾಳಮದ್ದಲೆ ಸಪ್ತಾಹದ ಸಮಾರೋಪ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವು 29-05-2022 ರಂದು ಸಂಪನ್ನಗೊಂಡಿತು. ಪರ್ಯಾಯ ಮಠಾಧೀಶರಾದ ಶ್ರೀ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು ಶ್ರೀ ಕೆ. ಎಲ್. ಕುಂಡಂತಾಯ ಅವರಿಗೆ

ಮಂಗಳೂರು:ಮೇ 30. ಚಿಲಿಂಬಿ ಅಪಾರ್ಟ್ ಮೆಂಟ್ ನಲ್ಲಿ ವಾಸವಿದ್ದ ಶಬಾಬ್(21) ಎಂಬವರ ಮನೆಗೆ ಅಕ್ರಮವಾಗಿ ನುಗ್ಗಿ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿರುವ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಮೊಹಮ್ಮದ್ ಅಫ್ರೀಶ್ (21), ಸುನೈಫ್ (21), ಶೇಖ್ ಮೊಹಿದ್ದೀನ್ (20), ಇಬ್ರಾಹಿಂ ರಾಜಿ (20), ಮೊಹಮ್ಮದ್ ಸಿನಾನ್

ಹೌದು ಈಗಾಗಲೇ ಹಲವು ಬಾರಿ ಪೆಟ್ರೋಲ್ ಹಾಗೂ ಡಿಸೀಲ್ ದರವು ಹೆಚ್ಚಿದ್ದು ಇದರಿ೦ದ ಗ್ರಾಹಕರಿಗೆ ಮತ್ತು ಮಾರಾಟದಾರರಿಗೆ ತೀವ್ರ ನಷ್ಟವು೦ಟಾಗಿದ್ದು ವಾಹನ ಸವಾರರು ಸೇರಿದ೦ತೆ ಪೆಟ್ರೋಲ್ ಪ೦ಪಿನ ಮಾಲಕರು ಲಕ್ಷಾ೦ತರ ರೂ ನಷ್ಟಕ್ಕೆ ಕಾರಣವಾಗಿದೆ. ಕೇ೦ದ್ರಸರಕಾರವು ಈಗಾಗಲೇ ದರವನ್ನು ಇಳಿಕೆ ಮಾಡಲಾಗಿದೆ ಎ೦ದು ಪತ್ರಿಕಾಹೇಳಿಕೆಯನ್ನು ಬಿಡುಗಡೆಮಾಡಿದೆಯಾದರೂ ರಾಜ್ಯಸರಕಾರವು ಈ

ಮಂಗಳೂರು:ಮೇ 30 . ಅತೀವೇಗದಿಂದ ಚಲಾಯಿಸಿಕೊಂಡು ಬಂದ ಸ್ಕೂಟರ್ ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಸವಾರರಿಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ನಗರದ ಬಿಕರ್ನಕಟ್ಟೆಯಲ್ಲಿ ಸೋಮವಾರ ನಸುಕಿನ ಜಾವ ನಡೆದಿದೆ. ಗಾಯಾಳುಗಳನ್ನು ಬಿದ್ದ ಗಣೇಶ್ ಹಾಗೂ ಧೀರಜ್ ಎಂದು ಗುರುತಿಸಲಾಗಿದೆ. ಮೇ 29 ಭಾನುವಾರ ಮುಂಜಾನೆ ಘಟನೆ ನಡೆದಿದ್ದು, ಗಣೇಶ್ ಎಂಬಾತ ಧೀರಜ್

ಮಂಗಳೂರು:ಮೇ 30. ಈಜಾಡುತ್ತಿದ್ದ ವೇಳೆ ಮೈಸೂರು ಮೂಲದ ಇಬ್ಬರು ಪಣಂಬೂರು ಬೀಚ್‌ನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಸೋಮವಾರ ನಡೆದಿದೆ. ಮೃತರನ್ನು ಮೈಸೂರು ಜಯನಗರ ನಿವಾಸಿಗಳಾದ ದಿವಾಕರ ಆರಾಧ್ಯ (45) ಮತ್ತು ನಿಂಗಪ್ಪ (60) ಎಂದು ಗುರುತಿಸಲಾಗಿದೆ. ಮಂಗಳೂರು ನಗರದಲ್ಲಿ ನಡೆಯುತ್ತಿದ್ದ ಹಲಸಿನ ಮೇಳದಲ್ಲಿ ಭಾಗವಹಿಸಲು ದಿವಾಕರ ಆರಾಧ್ಯ, ನಿಂಗಪ್ಪ, ಅವಿನಾಶ್ ಸೇರಿದಂತೆ

ಪಲ್ನಾಡು(ಆಂಧ್ರ ಪ್ರದೇಶ): ಮಿನಿ ವ್ಯಾನ್ ಮತ್ತು ನಿಂತಿದ್ದ ಲಾರಿ ಮಧ್ಯೆ ಭೀಕರ ಅಪಘಾತ ಸಂಭವಿಸಿ ಏಳು ಮಂದಿ ಮೃತಪಟ್ಟು ಇತರ 11 ಮಂದಿ ಗಾಯಗೊಂಡಿರುವ ಘಟನೆ ನಿನ್ನೆ ಭಾನುವಾರ ತಡರಾತ್ರಿ ಆಂಧ್ರ ಪ್ರದೇಶದ ಪಲ್ನಾಡು ಜಿಲ್ಲೆಯ ರೆಂಟಚಿಂತಲ ಎಂಬಲ್ಲಿ ಸಂಭವಿಸಿದೆ. ಗಾಯಗೊಂಡವರನ್ನು ಉತ್ತಮ ಚಿಕಿತ್ಸೆಗೆ ಗುಂಟೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು