Log In
BREAKING NEWS >
ಜೂನ್ 1 ರಿಂದ 9ರವರೆಗೆ ಉಡುಪಿಯ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವ…

ಶಿರ್ವ: ಇನ್ನೋವಾ ಕಾರನ್ನು ಮದುವೆ ವಾಹನದದಂತೆ ಅಲಂಕರಿಸಿದ ಖದೀಮರು ಅದರಲ್ಲಿ ಅಕ್ರಮವಾಗಿ ದನಗಳನ್ನು ಸಾಗಿಸುತ್ತಿದ್ದ ಘಟನೆ ಕಾಪು ತಾಲೂಕಿನ ಶಿರ್ವದಲ್ಲಿ ನಡೆದಿದೆ. ಜಿಲ್ಲೆಯಲ್ಲಿ ಗೋ ಕಳ್ಳರ ಅಟ್ಟಹಾಸ ಮಿತಿ ಮೀರುತ್ತಿದ್ದು, ಇದೀಗ ಮದುವೆ ಕಾರಿನಂತೆ ಇನ್ನೋವಾ ಕಾರನ್ನು ಎಸ್ಕಾರ್ಟ್ ಮಾಡಿಕೊಂಡು 16 ದನಗಳನ್ನ ಸಾಗಿಸುತ್ತಿರೋ ಘಟನೆಯೊಂದು ನಡೆದಿದೆ. ಶಿರ್ವ ಮತ್ತು ಕಾಪು ವ್ಯಾಪ್ತಿಯ

ಮಂಗಳೂರು: ಮಂಗಳೂರಿನ ಬೈಕಂಪಾಡಿಯಲ್ಲಿರುವ ಸೀ ಫುಡ್ ಘಟಕದಲ್ಲಿ ರಾಸಾಯನಿಕ ಸೋರಿಕೆಯಾದ ಪರಿಣಾಮ ಕಾರ್ಖಾನೆಯ 26 ಮಂದಿ ಕಾರ್ಮಿಕರು ಅಸ್ವಸ್ಥಗೊಂಡು ಆಸ್ಪತ್ರಗೆ ದಾಖಲಾದ ಘಟನೆ ಮಂಗಳವಾರ ನಡೆದಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಮಾತನಾಡಿ, ಘಟನೆ ವೇಳೆ ಕಾರ್ಖಾನೆಯಲ್ಲಿ 80 ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು

ಬೆಂಗಳೂರು: ಕಾಂಗ್ರೆಸ್​ ಮೇಕೆದಾಟು ಪಾದಯಾತ್ರೆ ಇಂದು ಬುಧವಾರ 4ನೇ ದಿನಕ್ಕೆ ಕಾಲಿಡುತ್ತಿದ್ದಂತೆ ಪಾದಯಾತ್ರೆ ವಿರುದ್ಧ ಕೇಸು ಹೈಕೋರ್ಟ್ ಅಂಗಳಕ್ಕೆ ತಲುಪಿದೆ. ಇಂದು ತುರ್ತು ವಿಚಾರಣೆ ನಡೆಸಿದ ಹೈಕೋರ್ಟ್ ರಾಜ್ಯದಲ್ಲಿ ಕೋವಿಡ್ ಸೋಂಕು ದಿನೇದಿನೇ ಹೆಚ್ಚಾಗುತ್ತಿರುವುದರ ಮಧ್ಯೆ ಪಾದಯಾತ್ರೆ ನಡೆಸುವ ಅಗತ್ಯವೇನಿದೆ ಎಂದು ಛೀಮಾರಿ ಹಾಕಿದೆ. ಇದಕ್ಕೆ ಸಂಬಂಧಿಸಿದಂತೆ ಸರ್ಕಾರಕ್ಕೆ, ರಾಮನಗರ ಜಿಲ್ಲಾಡಳಿತ,

ಉಡುಪಿ: ಸಿಗಂಧೂರಿನಿಂದ ಕೊಲ್ಲೂರಿಗೆ ಯಾತ್ರಾರ್ಥಿಗಳನ್ನು ಹೊತ್ತು ಸಾಗುತ್ತಿದ್ದ ಖಾಸಗಿ ಬಸ್ಸೊಂದು ದಳಿ ತಿರುವಿನ ಬಳಿ ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದ್ದು, ಪರಿಣಾಮ ಇಬ್ಬರು ಮಹಿಳೆಯರ ಕೈ ತುಂಡಾಗಿ, ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಂಗಳವಾರ ಸಂಜೆ ನಡೆದಿದೆ. ಕೈಗಳನ್ನು ಕಳೆದುಕೊಂಡ ಮಹಿಳೆಯರನ್ನು ಶ್ಯಾಮಲಮ್ಮ (48) ಹಾಗೂ ರೂಪಾ (49)

ಲಖನೌ: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಕ್ಷಣಗಣನೆ ಆರಂಭವಾಗಿರುವಂತೆಯೇ ಬಿಜೆಪಿ ಮತ್ತೊಂದು ಆಘಾತ ಎದುರಾಗಿದ್ದು, ಸಚಿವ ದಾರಾ ಸಿಂಗ್ ಚೌಹಾಣ್ ರಾಜೀನಾಮೆ ನೀಡಿ ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯಾನಾಥ್ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಸರಣಿ ಆಘಾತಗಳು ಎದುರಾಗುತ್ತಿದ್ದು, ಒಬ್ಬರ ಹಿಂದೊಬ್ಬರಂತೆ ಸಚಿವರು, ಶಾಸಕರು ರಾಜಿನಾಮೆ ನೀಡುತ್ತಿದ್ದಾರೆ. ಈ

ಉಡುಪಿ: ಶ್ರೀಕೃಷ್ಣಾಪುರ ಮಠದ ಪರ್ಯಾಯೋತ್ಸವಕ್ಕೆ,ಭಕ್ತಾದಿಗಳು ನೀಡುವ ಹೊರೆಕಾಣಿಕೆಗಳನ್ನು ಸಂಗ್ರಹಿಸಲು "ಸುಮೇಧ" ಉಗ್ರಾಣವನ್ನು ಭಾವೀ ಪರ್ಯಾಯ ಕೃಷ್ಣಾಪುರ ಮಠಾಧೀಶರಾದ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ಉದ್ಘಾಟನೆ ಮಾಡಿದರು. ಕುಚೇಲನು ಶ್ರೀಕೃಷ್ಣನಿಗೆ ಮೂರು ಹಿಡಿ ಅವಲಕ್ಕಿಯನ್ನು ಭಕ್ತಿಯಿಂದ ಅರ್ಪಿಸಿದನು.ಇದನ್ನು ದೇವರು ಸಂತೋಷದಿಂದ ಸ್ವೀಕರಿಸಿ ಅವನಿಗೆ ಸಕಲೈಶ್ವರ್ಯಗಳನ್ನು ನೀಡಿ ಅನುಗ್ರಹಿಸಿದನು.ಪರ್ಯಾಯಯೋತ್ಸವಕ್ಕೆ ಭಕ್ತಾದಿಗಳು ಯಥಾನುಶಕ್ತಿ ಭಕ್ತಿಪೂರ್ವಕ ನೀಡುವ

ಉಡುಪಿ: ಪೊಡವಿಗೊಡೆಯ ಶ್ರೀಕೃಷ್ಣಮುಖ್ಯಪ್ರಾಣದೇವರ ಪೂಜಾ ದ್ವೈವಾರ್ಷಿಕ ಪರ್ಯಾಯದ 501 ನೇ ವರ್ಷದ ಶುಭಸಂದರ್ಭದಲ್ಲಿ ಶ್ರೀಕೃಷ್ಣಾಪುರ ಜನಾರ್ದನತೀರ್ಥ ಸಂಸ್ಥಾನದ ಮಠಾಧೀಶರಾದ ಪರಮಪೂಜ್ಯ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರು ಚತುರ್ಥ ಬಾರಿಗೆ ಸರ್ವಜ್ಞ ಪೀಠಾರೋಹಣಕ್ಕಾಗಿ,ದೇಶಾದ್ಯಂತ ತೀರ್ಥಕ್ಷೇತ್ರಗಳನ್ನು ಸಂದರ್ಶಿಸಿ ಇಂದು ಜೋಡುಕಟ್ಟೆಯಿಂದ ಸಾಂಪ್ರದಾಯಿಕ ಮೆರವಣಿಗೆಯೊಂದಿಗೆ ಪುರಪ್ರವೇಶ ಮಾಡಿದರು. ಕನಕನ ಕಿಂಡಿಯಲ್ಲಿ ಶ್ರೀಕೃಷ್ಣನನ್ನು ಕಂಡು ಶ್ರೀಚಂದ್ರೇಶ್ವರ ಮತ್ತು ಶ್ರೀಅನಂತಾಸನ

ನ್ಯೂಯಾರ್ಕ್​: ನ್ಯೂಯಾರ್ಕ್​ ನಗರದಲ್ಲಿ ಅಪಾರ್ಟ್​ಮೆಂಟ್​​ವೊಂದಕ್ಕೆ ಬೆಂಕಿಬಿದ್ದ ಪರಿಣಾಮ 9 ಮಕ್ಕಳು ಸೇರಿ 19 ಜನರು ಮೃತಪಟ್ಟ ದುರ್ಘಟನೆ ನಡೆದಿದೆ. ಬೆಂಕಿ ಅನಾಹುತದಲ್ಲಿ ಮೃತಪಟ್ಟವರ ಸಂಖ್ಯೆಯನ್ನು ನ್ಯೂಯಾರ್ಕ್​​ ಸಿಟಿಯ ಮೇಯರ್​ ಎರಿಕ್​ ಆಡಮ್ಸ್​​ರ ಹಿರಿಯ ಸಲಹೆಗಾರ ಸ್ಟೆಫನ್​ ರಿಂಜೆಲ್​​ ದೃಢಪಡಿಸಿದ್ದಾರೆ. ಬೆಂಕಿ ದುರಂತದಲ್ಲಿ 60ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಅದರಲ್ಲೂ ಸುಮಾರು 13