Log In
BREAKING NEWS >
ಜೂನ್ 1 ರಿಂದ 9ರವರೆಗೆ ಉಡುಪಿಯ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವ…

ದಾವಣಗೆರೆ: ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ರಾಷ್ಟ್ರೀಯ ಹೆದ್ದಾರಿ 50ರ ಕಾನನಕಟ್ಟೆ ಗ್ರಾಮದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, 7 ಮಂದಿ ದುರ್ಮರಣವನ್ನಪ್ಪಿರುವ ಘಟನೆ ಶುಕ್ರವಾರ ಬೆಳ್ಳಂಬೆಳಿಗ್ಗೆ ನಡೆದಿದೆ. ಡಿವೈಡರ್'ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಆರು ಮಂದಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಮತ್ತೊಬ್ಬ ವ್ಯಕ್ತಿ ಆಸ್ಪತ್ರೆಗೆ

ಗುವಾಹಟಿ: ಪಶ್ಚಿಮ ಬಂಗಾಳದ ಜಲ್ಪೈಗುರಿ ಜಿಲ್ಲೆಯ ಡೊಮೊಹನಿ ಎಂಬಲ್ಲಿ ಕಳೆದ ರಾತ್ರಿ ಬಿಕಾನೇರ್-ಗುವಾಹಟಿ ಎಕ್ಸ್ ಪ್ರೆಸ್ ರೈಲು ಅಪಘಾತದಲ್ಲಿ (Bikaner-Guwahati Express train accident )ಮೃತಪಟ್ಟ ಪ್ರಯಾಣಿಕರ ಸಂಖ್ಯೆ 9ಕ್ಕೆ ಏರಿಕೆಯಾಗಿದೆ ಎಂದು ಈಶಾನ್ಯ ಫ್ರಾಂಟಿಯರ್ ರೈಲ್ವೆ (NFR) ವಕ್ತಾರ ತಿಳಿಸಿದ್ದಾರೆ. ಮೃತಪಟ್ಟವರಲ್ಲಿ ಮೂವರ ಗುರುತು ಇನ್ನೂ ಪತ್ತೆಯಾಗಿಲ್ಲ.  ಬಿಕಾನೇರ್-ಗುವಾಹಟಿ ಎಕ್ಸ್‌ಪ್ರೆಸ್ ರೈಲಿನ

ಉಡುಪಿ: ಇದೇ ಜನವರಿ 18ರ೦ದು ಚತುರ್ಥ ಬಾರಿ ಪರ್ಯಾಯ ಪೀಠಾವನ್ನೇರಲಿರುವ ಶ್ರೀಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾ ಸಾಗರ ತೀರ್ಥ ಶ್ರೀಪಾದರ ಪರ್ಯಾಯ ಮಹೋತ್ಸವಕ್ಕೆ ವಿವಿಧ ಕಡೆಗಳಿ೦ದ ದಾನಿಗಳು, ಸ೦ಘ-ಸ೦ಸ್ಥೆ, ಊರುಗಳಿ೦ದ ಜ.11ರಿ೦ದ ಹೊರೆಕಾಣಿಕೆಯು ಪ್ರತಿನಿತ್ಯವೂ ಬರುತ್ತಿದೆ. ಹೊರೆಕಾಣಿಕೆಯಲ್ಲಿ ಬ೦ದ ವಸ್ತುಗಳನ್ನು ಸುರಕ್ಷಿತವಾಗಿ ವಿ೦ಗಡಣೆ ಮಾಡಿ ಇಡಲಾಗಿದ್ದು ಯಾವುದೇ ವಸ್ತುಗಳು ಹಾಳಾಗದ೦ತೆ ನೋಡಿಕೊಳ್ಳಲಾಗುತ್ತಿದೆ. ಈ

ಉಡುಪಿ:ಶ್ರೀಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರ ತೀರ್ಥಶ್ರೀಪಾದರ ಪರ್ಯಾಯ ಮಹೋತ್ಸವಕ್ಕೆ ಭರದಿ೦ದ ಸಿದ್ದತೆಯು ನಡೆಯುತ್ತಿದ್ದು ಈ ಕಾರ್ಯಕೆಲಸದಲ್ಲಿ ಸಮಿತಿಯ ಅಧ್ಯಕ್ಷರು ಸೇರಿದ೦ತೆ ಪದಾಧಿಕಾರಿಗಳುಮತ್ತು ಎಲ್ಲಾ೨೯ವಿವಿಧ ಸಮಿತಿಗಳ ಸರ್ವ ಸದಸ್ಯರು ಸಕಲ ವ್ಯವಸ್ಥೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊ೦ಡಿದ್ದಾರೆ. ಸಮಿತಿಯ ಸದಸ್ಯರು ಹಾಗೂ ಕಾಲೇಜು ವಿದ್ಯಾರ್ಥಿಗಳು ಪರ್ಯಾಯ ಮಹೋತ್ಸವಕ್ಕೆ ಸ್ಥಳೀಯ ಹಾಗೂ ನಗರದ ವಿವಿದೆಡೆಯಲ್ಲಿ

ಬೆಂಗಳೂರು: ರಾಜ್ಯದಲ್ಲಿ ದಿನೇ ದಿನೇ ಕೊರೋನಾ ಸೋಂಕು ಹೆಚ್ಚುತ್ತಿದ್ದರೂ ಮೇಕೆದಾಟು ಪಾದಯಾತ್ರೆ ಮುಂದುವರಿಸುವುದರ ಔಚಿತ್ಯ ಪ್ರಶ್ನಿಸಿ ಛೀಮಾರಿ ಹಾಕಿದ ನಂತರ, ಹೈಕಮಾಂಡ್ ಸೂಚನೆಯಂತೆ ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ನಾಯಕರು ಕೈಗೊಂಡಿದ್ದ ಪಾದಯಾತ್ರೆಯನ್ನು ಮೊಟಕುಗೊಳಿಸಿದ್ದಾರೆ. ಇಂದು ರಾಮನಗರದಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಸದ್ಯಕ್ಕೆ ಮೇಕೆದಾಟು ಪಾದಯಾತ್ರೆಯನ್ನು ಮೊಟಕುಗೊಳಿಸಿ

ಕೊಲಂಬೊ: ವೆಲಿಕಡ ಕಾರಾಗೃಹ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀಲಂಕಾದ ಕೊಲಂಬೊ ಉಚ್ಚ ನ್ಯಾಯಾಲಯ ಮಾಜಿ ಜೈಲು ಅಧೀಕ್ಷಕ ಎಮಿಲ್ ರಂಜನ್ ಅವರಿಗೆ ಮರಣದಂಡನೆ ಸಜೆಯನ್ನು ವಿಧಿಸಿದೆ. 2012ರಲ್ಲಿ ವೆಲಿಕಡ ಕಾರಾಗೃಹದಲ್ಲಿ ಕೈದಿಗಳ ನಡುವೆ ಮಾರಾಮಾರಿ ಸಂಭವಿಸಿತ್ತು. ಈ ಗಲಭೆಯಲ್ಲಿ 27 ಮಂದಿ ಕೈದಿಗಳು ಕೊಲೆಗೀಡಾಗಿದ್ದರು. 20ಕ್ಕೂ ಹೆಚ್ಚು ಕೈದಿಗಳು ಗಾಯಗೊಂಡಿದ್ದರು. ವಿಶೇಷ ಪೊಲೀಸ್ ಪಡೆ

ಫಿರೋಜಬಾದ್: ಉತ್ತರಪ್ರದೇಶದಲ್ಲಿ ಬಿಜೆಪಿ ಶಾಸಕರ ರಾಜಿನಾಮೆ ಪರ್ವ ಮುಂದುವರೆದಿದೆ. ಇಂದು ಶಿಕೋರಾಬಾದ್ ಕ್ಷೇತ್ರದ ಬಿಜೆಪಿ ಶಾಸಕ ಮುಕೇಶ್ ವರ್ಮಾ ಮತ್ತು ಸಚಿವ ಧರಂ ಸಿಂಗ್ ಸೈನಿ ಪಕ್ಷಕ್ಕೆ ರಾಜಿನಾಮೆ ನೀಡಿದ್ದಾರೆ. ಹಿಂದುಳಿದ ವರ್ಗಗಳು ಮತ್ತು ದಲಿತರ ಬಗ್ಗೆ ಸರ್ಕಾರದಿಂದ ಗೌರವದ ಕೊರತೆಯಿದೆ ಎಂದು ಆರೋಪಿಸಿ ಮುಕೇಶ್ ವರ್ಮಾ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ

ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವರಿಗೆ ವೈಕು೦ಠ ಏಕಾದಶಿಯ ದಿನವಾದ ಇ೦ದು(ಗುರುವಾರ)ವಿಶೇಷ ಹೂವಿನ(ಪುಲ್ಲ೦ಗಿ)ಅಲ೦ಕಾರವನ್ನು ಮಾಡಲಾಯಿತು. ಮಧ್ಯಾಹ್ನ ಶ್ರೀದೇವರಿಗೆ ವಿಶೇಷ ಮಹಾಪೂಜೆಯು ನೆರವೇರಿತು. ಇದೇ ಸ೦ದರ್ಭದಲ್ಲಿ ಏಕಾದಶಿಯ ಪ್ರಯುಕ್ತ ಶ್ರೀವೆ೦ಕಟೇಶ ದೇವರಭಾವಚಿತ್ರಕ್ಕೆ ಹೂವಿನ ಅಲ೦ಕಾರವನ್ನು ಮಾಡುವುದರೊ೦ದಿಗೆ ಭಕ್ತರಿ೦ದ ಮು೦ಜಾನೆ ೮ರಿ೦ದ ರಾತ್ರೆ ಎ೦ಟರವರೆಗೆ ಭಜನಾ ಕಾರ್ಯಕ್ರಮವು ಜರಗಿತು.