Log In
BREAKING NEWS >
ಅಪಾರ ಭಕ್ತಜನಸ್ತೋಮದ ನಡುವೆ ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ 122ನೇ ಭಜನಾ ಸಪ್ತಾಹ ಮಹೋತ್ಸವದ "ರ೦ಗಪೂಜೆ" ಸ೦ಪನ್ನ...ಏಕಾದಶಿಯ ಪ್ರಯುಕ್ತ ಸೋಮವಾರದ೦ದು ಸ೦ಜೆ 5ಗ೦ಟೆಗೆ ನಗರಭಜನೆ ಆರ೦ಭ...

ವಾರ್ಧಾ: ಮಹಾರಾಷ್ಟ್ರದ ವಾರ್ಧಾ-ಯವತ್ಮಾಲ್​ ಹೆದ್ದಾರಿಯಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಕಾರೊಂದು ಸೇತುವೆ ಮೇಲಿಂದ ಸುಮಾರು 50 ಅಡಿ ಕೆಳಗೆ ಬಿದ್ದ ಪರಿಣಾಮ ಶಾಸಕನ ಪುತ್ರ ಸೇರಿ 7 ಮಂದಿ ವೈದ್ಯಕೀಯ ವಿದ್ಯಾರ್ಥಿಗಳು ಸಾವನ್ನಪ್ಪಿರುವ ಘಟನೆ ಸೋಮವಾರ ತಡರಾತ್ರಿ ನಡೆದಿದೆ. ಮೃತಪಟ್ಟಿರುವ 7 ಮಂದಿ ಸಾವಂಗಿಯ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಎಂದು

ಗಣರಾಜ್ಯೋತ್ಸವದ ಅಂಗವಾಗಿ ಶೌರ್ಯ ಪದಕ, ಸೇವಾ ಪದಕಗಳನ್ನು ಘೋಷಣೆ ಮಾಡಲಾಗಿದ್ದು, ಒಟ್ಟು 939 ಸಿಬ್ಬಂದಿಗಳಿಗೆ ಪದಕಗಳನ್ನು ನೀಡಲಾಗುತ್ತಿದೆ. ಕೇಂದ್ರ ಹಾಗೂ ರಾಜ್ಯಗಳ ವಿವಿಧ ಪೊಲೀಸ್ ಪಡೆಗಳ ಸಿಬ್ಬಂದಿಗಳಿಗೆ ಪದಕಗಳನ್ನು ಪ್ರದಾನ ಮಾಡಲಾಗುತ್ತಿದ್ದು ಅತಿ ಹೆಚ್ಚಿನ ಪದಕಗಳನ್ನು (115) ಜಮ್ಮು-ಕಾಶ್ಮೀರ ಪಡೆದಿದೆ. ಪದಕಗಳನ್ನು ಪಡೆದ ಸಿಬ್ಬಂದಿಗಳ ಹೆಸರುಗಳನ್ನು ಕೇಂದ್ರ ಗೃಹ ಸಚಿವಾಲಯ ಪ್ರಕಟಿಸಿದ್ದು,

ಉಡುಪಿ : ಉಡುಪಿ ಕ್ರಿಶ್ಚಿಯನ್ ಹೈಸ್ಕೂಲ್‍ನ ಹಳೆವಿದ್ಯಾರ್ಥಿ ಎಂ. ಗಂಗಾಧರ ರಾವ್ (ನಂದಕುಮಾರ್) ಕಳೆದ 12 ವರ್ಷಗಳಿಂದ ತಾನು ಕಲಿತ ಶಾಲೆಯಲ್ಲಿ ಎಸ್.ಎಸ್.ಎಲ್.ಸಿ ಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಗೊಂಡ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡುತ್ತಾ ಬಂದಿದ್ದು ಈ ವರ್ಷದ ಈ ಕಾರ್ಯಕ್ರಮ 24-01-2022 ರಂದು ಯಕ್ಷಗಾನ ಕಲಾರಂಗದ ಕಛೇರಿಯಲ್ಲಿ

ಉಡುಪಿ:ಶ್ರೀಕೃಷ್ಣಮಠದ ರಾಜಾಂಗಣದ ಜನಾರ್ದನತೀರ್ಥ ವೇದಿಕೆಯಲ್ಲಿ ಪರ್ಯಾಯ ಶ್ರೀಕೃಷ್ಣಾಪುರ ಮಠದ ಆಶ್ರಯದಲ್ಲಿ ಪರ್ಯಾಯೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳ ಸಮಾರೋಪ ಸಮಾರಂಭದಲ್ಲಿ ಪರ್ಯಾಯ ಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರು ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಮೋಹನ ಆಳ್ವ ಇವರನ್ನು ಸನ್ಮಾನಿಸಿ, ಧಾರ್ಮಿಕ ಪ್ರಜ್ಞೆಯನ್ನು ಬೆಳೆಸಲು ಸಾಂಸ್ಕೃತಿಕ ಕಲಾಪ್ರಕಾರಗಳು ಬಹಳ ಸಹಕಾರವಾಗುತ್ತವೆ.ಪುರಾಣದಲ್ಲಿ ಬರುವ ಕಥೆಗಳನ್ನು

ಉಡುಪಿ:ಶ್ರೀಕೃಷ್ಣಮಠದ ರಾಜಾಂಗಣದ ಜನಾರ್ದನತೀರ್ಥ ವೇದಿಕೆಯಲ್ಲಿ ಪರ್ಯಾಯ ಶ್ರೀಕೃಷ್ಣಾಪುರ ಮಠದ ಆಶ್ರಯದಲ್ಲಿ ಪರ್ಯಾಯೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಮೂಡಬಿದರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಂದ ಸೋಮವಾರದ೦ದು "ಸಾಂಸ್ಕೃತಿಕ ವೈಭವ" ನಡೆಯಿತು.

ಉಡುಪಿ:ಶ್ರೀಕೃಷ್ಣ ಮಠಕ್ಕೆ ಕೋಲಾರದ ಸಂಸದರಾದ ಮುನಿಸ್ವಾಮಿಯವರು ಕುಟುಂಬ ಸಮೇತ ಆಗಮಿಸಿ ದೇವರ ದರ್ಶನ ಪಡೆದು ಪರ್ಯಾಯ ಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರಿಂದ ಸರ್ವಜ್ಞ ಪೀಠದಲ್ಲಿ ಅನುಗ್ರಹ ಮಂತ್ರಾಕ್ಷತೆ ಪಡೆದರು.

ಬೆಂಗಳೂರು: ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಜನರಿಗೆ ಕುಡಿಯುವ ನೀರು ಒದಗಿಸುವ ಎತ್ತಿನಹೊಳೆ ಯೋಜನೆಯನ್ನು ಈ ವರ್ಷದ ಸೆಪ್ಟೆಂಬರ್ ಒಳಗೆ ಪೂರ್ಣಗೊಳಿಸುವಂತೆ ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೋಮವಾರ ಸೂಚನೆ ನೀಡಿದರು. ನೀರಾವರಿ ಯೋಜನೆಗಳ ಕುರಿತು ಚರ್ಚಿಸಲು ಕಾವೇರಿ ನೀರಾವರಿ ನಿಗಮ ಮತ್ತು ವಿಶ್ವೇಶ್ವರಯ್ಯ ಜಲ ನಿಗಮದ

ನವದೆಹಲಿ: ಭಾರತದಲ್ಲಿ ಓಮಿಕ್ರಾನ್ ರೂಪಾಂತರಿ ಸಮುದಾಯಕ್ಕೆ ಹರಡುವ ಹಂತದಲ್ಲಿದೆ ಹಲವು ನಗರಗಳಲ್ಲಿ ಈ ರೂಪಾಂತರಿ ಪ್ರಬಲವಾಗಿದ್ದು ಘಾತೀಯವಾಗಿ ಏರುತ್ತಿದೆ ಎಂದು ಐಎನ್ಎಸ್ಎಸಿಒಜಿ (ಇನ್‌ಸಾಕೋಗ್‌) ಅದರ ಇತ್ತೀಚಿನ ಬುಲೆಟಿನ್ ನಲ್ಲಿ ಹೇಳಿದೆ. ಓಮಿಕ್ರಾನ್ ನ ಉಪರೂಪಾಂತರಿ, ಬಿಎ.2 ವಂಶಾವಳಿ ದೇಶದಲ್ಲಿ ಗಣನೀಯ ಪ್ರಮಾಣದಲ್ಲಿ ಪತ್ತೆಯಾಗಿದೆ. ಭಾನುವಾರ ಬಿಡುಗಡೆಯಾಗಿರುವ ಐಎನ್ಎಸ್ಎ ಸಿಒಜಿ ಬುಲೆಟಿನ್ ನಲ್ಲಿ, ಓಮಿಕ್ರಾನ್

ನವದೆಹಲಿ: ಸ್ವಾತಂತ್ರ್ಯ ಹೋರಾಟಗಾರ ಸುಭಾಸ್ ಚಂದ್ರ ಬೋಸ್ ಅವರ 125ನೇ ಜನ್ಮದಿನಾಚರಣೆ ಹಿನ್ನೆಲೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು, ಸ್ಮಾರಕದ ಮೂಲಕ ಪ್ರತೀಯೊಬ್ಬ ಭಾರತೀಯನೂ ದೇಶಕ್ಕೆ ನೇತಾಜಿಯವರು ನೀಡಿರುವ ಕೊಡುಗೆ ಬಗ್ಗೆ ಹೆಮ್ಮೆ ಪಡುತ್ತಾನೆಂದು ಭಾನುವಾರ ಹೇಳಿದ್ದಾರೆ. ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ದೇಶದ

ಬೆಂಗಳೂರು: ಪ್ರತಿ ಗ್ರಾಮ, ಪಟ್ಟಣದಲ್ಲಿ ಪೀಠ ಕಟ್ಟುವುದು ತಪ್ಪಲ್ಲ. ಸಮುದಾಯದ ಐಕ್ಯತೆಯನ್ನು ಹಾಳುಮಾಡುವ ನಿಟ್ಟಿನಲ್ಲಿ ಕೆಲಸ ಮಾಡಬೇಡಿ ಎಂದು ರಾಜಕೀಯ ನಾಯಕರಿಗೆ ಕೂಡಲ ಸಂಗಮದ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿಗಳು ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮಾಜ ಒಗ್ಗೂಡಿಸಲು ಪೀಠ ಕಟ್ಟಲಾಗಿದೆ. ಪೀಠಗಳು ಸ್ಥಾಪನೆಯಾದ ನಂತರ ವೈಯುಕ್ತಿಕಕ್ಕೆ ಬಳಕೆ. ಸಚಿವರನ್ನು,