Log In
BREAKING NEWS >
"ಕರಾವಳಿಕಿರಣ ಡಾಟ್ ಕಾ೦"ನ ಎಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ "ಶ್ರೀಅನ೦ತವೃತ"ದ ಶುಭಾಶಯಗಳು...

ಉಡುಪಿ; ವಿಜಯದಶಮಿಯ ದಿನವಾದ (ಇ೦ದು) ಶುಕ್ರವಾರದ೦ದು ಶ್ರೀಕೃಷ್ಣ ದೇವರಿಗೆ ಕಾಣಿಯೂರುಮಠಾಧೀಶರಾದ ಶ್ರೀವಿದ್ಯಾವಲ್ಲಭತೀರ್ಥ ಶ್ರೀಪಾದರು "ಅಭಯವರಲಕ್ಷ್ಮೀ" ಅಲಂಕಾರವನ್ನು ಮಾಡಿದರು. ಪರ್ಯಾಯ ಪೀಠಾಧೀಶರಾದ ಶ್ರೀಈಶಪ್ರಿಯತೀರ್ಥ ಶ್ರೀಪಾದರು ಮಹಾಪೂಜೆ ನೆರವೇರಿಸಿದರು.

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ವಿಶ್ವವಿಖ್ಯಾತ ದಸರಾ ಮಹೋತ್ಸವದ ಸಂಭ್ರಮ ಮನೆಮಾಡಿದೆ. ನಾಡಹಬ್ಬದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿಯ ಚಿನ್ನದ ಅಂಬಾರಿಯಲ್ಲಿ ಸಾಗುವ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿ ಅರಮನೆ ತಲುಪಿದೆ. ಇದೇ ಮೊದಲ ಬಾರಿಗೆ ಚಾಮುಂಡಿ ಬೆಟ್ಟದಿಂದ ಅರಮನೆಗೆ ನಾದಸ್ವರ, ಕಲಾತಂಡದೊಂದಿಗೆ ಅಂಬಾರಿ ಉತ್ಸವ ಮೂರ್ತಿಯನ್ನು ತರಲಾಗಿದ್ದು, ಚಾಮುಂಡಿ ಬೆಟ್ಟದಲ್ಲಿ

ಉಡುಪಿ:ಶ್ರೀಕೃಷ್ಣ ಮಠದಲ್ಲಿ ವಿಜಯದಶಮಿಯಂದು ಶ್ರೀಸೋದೆ ಮಠದಲ್ಲಿ ಕದಿರನ್ನು ಪೂಜಿಸಿ ಮೆರವಣಿಗೆಯಲ್ಲಿ ತಂದು ಶ್ರೀಕೃಷ್ಣನ ಗರ್ಭಗುಡಿಯ ಪೂರ್ವದ್ವಾರದಲ್ಲಿ ಒಳಬಂದು ಪರ್ಯಾಯ ಅದಮಾರು ಶ್ರೀಈಶಪ್ರಿಯತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ, ಪರ್ಯಾಯ ಮಠದ ಪಾರುಪತ್ಯಗಾರರಾದ ಲಕ್ಷ್ಮೀಶ ಆಚಾರ್ಯರ ನೇತೃತ್ವದಲ್ಲಿ ಪೂಜೆ ನಡೆಸಿ, ನಂತರ ಬಡಗುಮಾಳಿಗೆಯಲ್ಲಿ ಪೂಜಿಸಿ ಕದಿರು ಕಟ್ಟಲಾಯಿತು.

ನಾಗ್ಪುರ: ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ ಎಸ್ಎಸ್) ಮುಖ್ಯಸ್ಥ ಮೋಹನ್ ಭಾಗ್ವತ್ ವಿಜಯದಶಮಿ ಉತ್ಸವ ಕಾರ್ಯಕ್ರಮದ ತಮ್ಮ ಭಾಷಣದಲ್ಲಿ ಅಫ್ಘಾನಿಸ್ತಾನ, ತಾಲೀಬಾನ್, ಚೀನಾ-ಪಾಕಿಸ್ತಾನದ ಮೈತ್ರಿಯ ಕುರಿತು ಆತಂಕ ವ್ಯಕ್ತಪಡಿಸಿದ್ದಾರೆ. ಗಡಿಯಲ್ಲಿ ನಮ್ಮ ಸೇನಾ ಸನ್ನದ್ಧತೆ ಬಲಿಷ್ಠವಾಗಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸಿರುವ ಮೋಹನ್ ಭಾಗ್ವತ್, " ತಾಲೀಬಾನ್ ಇತಿಹಾಸ ನಮ್ಮೆಲ್ಲರಿಗೂ ತಿಳಿದಿದೆ. ಇಂದಿಗೂ

ಬೆಂಗಳೂರು: ಹಿರಿಯ ರಂಗಕರ್ಮಿ ಜಿ.ಕೆ.ಗೋವಿಂದ ರಾವ್ (86) ಅವರು ಶುಕ್ರವಾರ ವಿಧಿವಶರಾಗಿದ್ದಾರೆಂದು ತಿಳಿದುಬಂದಿದೆ. ಗೋವಿಂದ ರಾವ್ ಅವರು ಇಂದು ಬೆಳಿಗ್ಗೆ ಹುಬ್ಬಳ್ಳಿಯ ತಮ್ಮ ಮಗಳ ಮನೆಯಲ್ಲಿ ನಿಧನರಾಗಿದ್ದಾರೆಂದು ವರದಿಗಳು ತಿಳಿಸಿವೆ. ಜಿ.ಕೆ. ಗೋವಿಂದ ರಾವ್ 1937 ಏಪ್ರಿಲ್ 27ರಂದು ಬೆಂಗಳೂರಿನಲ್ಲಿ ಜನಿಸಿದ್ದರು. ಇಂಗ್ಲಿಷ್ ಸಾಹಿತ್ಯದ ಅಧ್ಯಯನ ನಡೆಸಿದ ಅವರು ಇಂಗ್ಲಿಷ್‌ ಪ್ರಾಧ್ಯಾಪಕರಾಗಿ

ಉಡುಪಿ: ಉಡುಪಿಯ ಪ್ರಖ್ಯಾತ ವಾಣಿಜೋದ್ಯಮ ಸ೦ಸ್ಥೆಗಳಲ್ಲೊ೦ದಾದ "ಹರ್ಷ" ಸಮೂಹ ಸ೦ಸ್ಥೆಯು ಇದೀಗ ಎಲ್ಲಾ ಗ್ರಾಹಕರಿಗನೂಕೂಲವಾಗುವ೦ತೆ ಒ೦ದೇ ಸೂರಿನಡಿಯಲ್ಲಿ ಗೃಹಬಳಕೆಯ,ಇಲೆಕ್ಟ್ರಾನಿಕ್ ವಸ್ತು, ಫರ್ನಿಚರ್ ವಸ್ತುಗಳ ಬೃಹತ್ ಮಾರಾಟ ಮಳಿಗೆಯನ್ನು ಉಡುಪಿ ನಗರದ ಸಿಟಿಬಸ್ ನಿಲ್ದಾಣದ ಬಳಿಯಲ್ಲಿರುವ ನೂತನ "ಶ್ರೀ ದತ್ತಕೃಪಾ" ಬಿಲ್ಡಿ೦ಗ್ ನಲ್ಲಿ ಇದೇ ತಿ೦ಗಳ ಅಕ್ಟೋಬರ್ 18ರ೦ದು ಕಾರ್ಯಾರ೦ಭಗೊಳ್ಳಲಿದೆ

ಶ್ರೀಕೃಷ್ಣ ದೇವರಿಗೆ ನವರಾತ್ರಿಯ ಪ್ರಯುಕ್ತ ಗುರುವಾರ(ಇಂದು) ಕಾಣಿಯೂರುಮಠಾಧೀಶರಾದ ಶ್ರೀವಿದ್ಯಾವಲ್ಲಭತೀರ್ಥ ಶ್ರೀಪಾದರು "ಗಜಲಕ್ಷ್ಮೀ" ಅಲಂಕಾರವನ್ನು ಮಾಡಿದರು. ಪರ್ಯಾಯ ಪೀಠಾಧೀಶರಾದ ಶ್ರೀಈಶಪ್ರಿಯತೀರ್ಥ ಶ್ರೀಪಾದರು ಮಹಾಪೂಜೆ ನೆರವೇರಿಸಿದರು.

ಉಡುಪಿ:ನೂತನ `ರಾಷ್ಟ್ರೀಯ ಶಿಕ್ಷಣ ನೀತಿ (ಎನ್ ಇ ಪಿ)ಯ ಗುರಿ 11ನೇ ಶತಮಾನಕ್ಕೆ ಯುವಕ-ಯುವತಿಯರನ್ನು ತಯಾರುಗೊಳಿಸುವುದಾಗಿದೆ. ಇದುವರೆಗೆ ಮೆಕಾಲೆ ಶಿಕ್ಷಣ ನೀತಿ ಇದ್ದರೆ ಇನ್ನು ಮುಂದೆ ಮಕ್ಕಳ ವಿಕಸನಕ್ಕೆ ಪೂರಕವಾಗುವ ಶಿಕ್ಷಣವನ್ನು ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಬುಧವಾರ 7.44 ಕೋ.ರೂ. ವೆಚ್ಚದ ಉಡುಪಿ ಪೂರ್ಣಪ್ರಜ್ಞ ಕಾಲೇಜಿನ

ಶ್ರೀಕೃಷ್ಣ ದೇವರಿಗೆ ನವರಾತ್ರಿಯ ಪ್ರಯುಕ್ತ ಬುಧವಾರ(ಇಂದು) ಕಾಣಿಯೂರುಮಠಾಧೀಶರಾದ ಶ್ರೀವಿದ್ಯಾವಲ್ಲಭತೀರ್ಥ ಶ್ರೀಪಾದರು "ಮಹಿಷಮರ್ದಿನೀ" ಅಲಂಕಾರವನ್ನು ಮಾಡಿದರು. ಪರ್ಯಾಯ ಪೀಠಾಧೀಶರಾದ ಶ್ರೀಈಶಪ್ರಿಯತೀರ್ಥ ಶ್ರೀಪಾದರು ಮಹಾಪೂಜೆ ನೆರವೇರಿಸಿದರು.