ಉಡುಪಿ: ಶ್ರೀಕೃಷ್ಣ ಮಠಕ್ಕೆ,ಗುಜರಾತಿನ ಸ್ವಾಮಿನಾರಾಯಣ ಪಂಥದ ಸಾಧು ಶ್ರೀಭದ್ರೇಶದಾಸ ಸ್ವಾಮೀಜಿಯವರು ತಮ್ಮ ಶಿಷ್ಯರೊಂದಿಗೆ ಆಗಮಿಸಿದ ಸಂದರ್ಭದಲ್ಲಿ ಅವರನ್ನು ಪೂರ್ಣಕುಂಭದೊಂದಿಗೆ ಸ್ವಾಗತಿಸಿ, ಪರ್ಯಾಯ ಪೀಠಾಧೀಶರಾದ ಶ್ರೀಈಶಪ್ರಿಯತೀರ್ಥ ಶ್ರೀಪಾದರು ಅವರಿಗೆ ದೇವರ ದರ್ಶನ ಮಾಡಿಸಿದರು.
ಅಕ್ಷರ ಪುರುಷೋತ್ತಮ ಸಿದ್ಧಾಂತದ ಪ್ರಸ್ಥಾನತ್ರಯ ಭಾಷ್ಯವನ್ನು ಶ್ರೀಕೃಷ್ಣನ ಸನ್ನಿಧಿಯಲ್ಲಿ ಸಮರ್ಪಿಸಿದರು.
ನಂತರ ಅವರನ್ನು ರಾಜಾಂಗಣದ ಸಭೆಯಲ್ಲಿ ಗೌರವಿಸಲಾಯಿತು.ವಿದ್ವಾನ್ ಆನಂದತೀರ್ಥ