Log In
BREAKING NEWS >
ಮುಂಬೈ: 61 ಅಂತಸ್ತಿನ ಬೃಹತ್ ಕಟ್ಟಡದಲ್ಲಿ ಭೀಕರ ಅಗ್ನಿ ಅವಘಡ, 1 ಸಾವು, ಹಲವರು ಸಿಲುಕಿರುವ ಶಂಕೆ....

ಬೆಂಗಳೂರು: ಕೇರಳದಲ್ಲಿ ಝೀಕಾ ವೈರಸ್ ಹಾವಳಿ ಏರುತ್ತಿದ್ದಂತೆ ರಾಜ್ಯದಲ್ಲಿಯೂ ಕಟ್ಟೆಚ್ಚರ ವಹಿಸುವಂತೆ ಸೂಚಿಸಲಾಗಿದೆ. ದಕ್ಷಿಣ ಕನ್ನಡ, ಉಡುಪಿ ಮತ್ತು ಚಾಮರಾಜನಗರ ಗಡಿ ಜಿಲ್ಲೆಗಳಲ್ಲಿ ಹೆಚ್ಚಿನ ನಿಗಾ ವಹಿಸುವಂತೆ ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಸಹಾಯಕರಿಗೆ ಆದೇಶಿಸಲಾಗಿದೆ. ಸದ್ಯ ಮಳೆಗಾಲ ಈ ವೈರಸ್ ಹರಡಲು ಈ ಸೊಳ್ಳೆಗೆ ಅನುಕೂಲವಾಗುತ್ತಿದೆ ಎಂದು ಆರೋಗ್ಯ ಇಲಾಖೆ

ಅಯೋಧ್ಯೆ: , ನಾಲ್ಕು ವರ್ಷದ ಬಾಲಕಿ ಸೇರಿದಂತೆ, ಒಂದೇ ಕುಟುಂಬದ ಆರು ಸದಸ್ಯರು  ಅಯೋಧ್ಯೆಯ ಗುಪ್ತಾರ್ ಘಾಟ್‌ನಲ್ಲಿ ಸರಯೂ  ನದಿಯಲ್ಲಿ ಸ್ನಾನ ಮಾಡುವಾಗ ಮುಳುಗಿ ಸಾವನ್ನಪ್ಪಿರುವ ಘಟನೆ ಶುಕ್ರವಾರ ನಡೆದಿದೆ. ಆಗ್ರಾ ಮೂಲದ ಕುಟುಂಬದ ಮೂವರು ಇನ್ನೂ ಕಾಣೆಯಾಗಿದ್ದರೆ, ಮೂವರನ್ನು ರಕ್ಷಿಸಲಾಗಿದ್ದು  ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. “ನದಿಯಿಂದ

ರೂಪ್ ಗಂಜ್: ಬಾಂಗ್ಲಾದೇಶದ ಜ್ಯೂಸ್ ಕಾರ್ಖಾನೆಯಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಕನಿಷ್ಠ 52 ಮಂದಿ ಸಾವನ್ನಪ್ಪಿದ್ದು, 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಬಾಂಗ್ಲಾದೇಶದ ರಾಜಧಾನಿ ಢಾಕಾದ ಹೊರಗಿರುವ ನಾರ್ಯಾನ್ ಗಂಜ್ ನ ರುಪ್ಗಂಜ್ ನಲ್ಲಿರುವ ಆರು ಅಂತಸ್ತಿನ ಶೆಜಾನ್ ಜ್ಯೂಸ್ ಕಾರ್ಖಾನೆಯಲ್ಲಿ ಗುರುವಾರ ಸಂಜೆ 5 ಗಂಟೆ ಸುಮಾರಿಗೆ ಬೆಂಕಿ

ಶ್ರೀನಗರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ವಿರುದ್ಧದ ಸೇನಾ ಕಾರ್ಯಾಚರಣೆ ಮುಂದುವರೆದಿದ್ದು, ಈ ವರೆಗೂ ಎನ್ ಕೌಂಟರ್ ನಲ್ಲಿ ಮೃತರಾದ ಉಗ್ರರ ಸಂಖ್ಯೆ 6ಕ್ಕೆ ಏರಿಕೆಯಾಗಿದೆ. ಅಂತೆಯೇ ಇಬ್ಬರು ಸೇನಾಧಿಕಾರಿಗಳು ಹುತಾತ್ಮರಾಗಿದ್ದಾರೆ. ಸುಂದರ್ ಬನಿ ಪ್ರದೇಶದ ದಡ್ಡಾಲ್ ದಟ್ಟಾರಣ್ಯದ ಉಗ್ರರು ಅಡಗಿದ್ದರು. ಈ ವೇಳೆ ಸೇನಾ ಕಾರ್ಯಾಚರಣೆ ಆರಂಭವಾಗುತ್ತಿದ್ದಂತೆಯೇ

ಯೋಗ ಭಂಗಿಗಳನ್ನು ಮಾಡುವುದು ಅಷ್ಟು ಸುಲಭದ ಮಾತಲ್ಲ. ಅದೆಷ್ಟೋ ವರ್ಷಗಳ ಕಲಿಕೆ ಮುಖ್ಯ. ಜತೆಗೆ ಸತತ ಪ್ರಯತ್ನದ ಮೂಲಕ ಹಂತ ಹಂತವಾಗಿ ಸಾಧಿಸಬೇಕು. ಹಾಗಾದಾಗ ಮಾತ್ರ ಕಷ್ಟಕರವಾದ ಯೋಗ ಭಂಗಿಯನ್ನು ನಿರ್ವಹಿಸಲು ಸಾಧ್ಯ. ಇಲ್ಲೋರ್ವ 4 ವರ್ಷದ ಬಾಲಕಿ ಅತಿ ಸುಲಭದಲ್ಲಿ ಯೋಗ ಭಂಗಿಗಳನ್ನು ನಿರ್ವಹಿಸುತ್ತಾಳೆ. ನಿಜವಾಗಿಯೂ ಆಶ್ಚರ್ಯವಾಗುವಂತಿದೆ.

ಗುರುವಾರ ಸ್ವೀಡನ್‌ನ ಒರೆಬ್ರೊ ಬಳಿ ವಿಮಾನ ಪತನವಾಗಿದೆ. ವಿಮಾನದಲ್ಲಿದ್ದ 8 ಸ್ಕೈಡೈವರ್ಸ್, ಓರ್ವ ಪೈಲಟ್ ಸೇರಿ ಎಲ್ಲಾ ಒಂಬತ್ತು ಜನರು ಶವವಾಗಿ ಪತ್ತೆಯಾಗಿದ್ದಾರೆ ಎಂದು ಸ್ವೀಡಿಷ್ ಪೊಲೀಸರು ತಿಳಿಸಿದ್ದಾರೆ. “ಇದು ತುಂಬಾ ತೀವ್ರವಾದ ಅಪಘಾತ” ಎಂದು ಸ್ವೀಡಿಷ್ ಪೊಲೀಸರು ತಮ್ಮ ವೆಬ್‌ಸೈಟ್‌ನಲ್ಲಿ ತಿಳಿಸಿದ್ದಾರೆ. “ಅಪಘಾತಕ್ಕೀಡಾದ ವಿಮಾನದಲ್ಲಿದ್ದ ಎಲ್ಲರೂ ಮೃತಪಟ್ಟಿದ್ದಾರೆ.” ಡಿಎಚ್‌ಸಿ

ಉಡುಪಿ: ಉಡುಪಿ–ಚಿಕ್ಕಮಗಳೂರು ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ಅವರು ಮೋದಿ ಸಂಪುಟ ಸೇರಿದ್ದು ಕೇಂದ್ರ ಕೃಷಿ ಹಾಗೂ ರೈತರ ಅಭಿವೃದ್ಧಿ ಖಾತೆ ಸಿಕ್ಕಿದೆ. ಎಸ್ 7 ವರ್ಷಗಳ ನಂತರ ಉಡುಪಿ- ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಸಚಿವ ಸ್ಥಾನ ಅಲಂಕರಿಸಿದ್ದಾರೆ. ಇದರ ಬೆನ್ನಲ್ಲೇ ಕ್ಷೇತ್ರದ ಜನತೆಯಲ್ಲಿ ಹಲವಾರು ಪ್ರಶ್ನೆ ಎದ್ದಿದೆ. ಶೋಭಾ

ಕಾರ್ಕಳದ ಕಾಂಗ್ರೆಸ್ ಕಾರ್ಯಕರ್ತ ರಾಧಾಕೃಷ್ಣ ನಾಯಕ್ ಅವರ ಮೇಲೆ ಪೊಲೀಸರು ದೌರ್ಜನ್ಯ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದ ಬೆನ್ನಲ್ಲೇ ವಿಪಕ್ಷ ಮುಖಂಡ ಸಿದ್ದರಾಮಯ್ಯ ಅವರು ಈ ಕುರಿತು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿ ಘಟನೆ ಕುರಿತು ಖಂಡಿಸಿದ್ದಾರೆ. "ಕಾರ್ಕಳದ ಕಾಂಗ್ರೆಸ್ ಕಾರ್ಯಕರ್ತ ರಾಧಾಕೃಷ್ಣ ನಾಯಕ್ ಮೇಲೆ ನಡೆದ

ಬೆಂಗಳೂರು: ಪದವಿ ಪೂರ್ವ ಶಿಕ್ಷಣ ಇಲಾಖೆ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರಥಮ ಪಿಯುಸಿ ಮತ್ತು ಎಸ್ ಎಸ್ ಎಲ್ ಸಿ ಅಂಕಗಳನ್ನು ವೀಕ್ಷಿಸುವ ಅವಕಾಶವನ್ನು ನೀಡಿದ್ದು, ವಿದ್ಯಾರ್ಥಿ ಸಾಧನೆ ಟ್ರ್ಯಾಕಿಂಗ್ ವ್ಯವಸ್ಥೆಯ ಪೋರ್ಟಲ್(SATS) ನಲ್ಲಿ ವೀಕ್ಷಿಸಬಹುದು. ಪೋರ್ಟಲ್ ಲಿಂಕ್ ನಾಳೆಯಿಂದ ಸಕ್ರಿಯವಾಗಲಿದ್ದು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು https://sts.karnataka.gov.in/SATSPU/ ಈ ಲಿಂಕ್ ಮೂಲಕ ನೋಡಬಹುದು. ಅಂಕಗಳನ್ನು

ಚಾಮರಾಜನಗರ: ತಾನು ಚಲಾಯಿಸುತ್ತಿದ್ದ ಟ್ರ್ಯಾಕ್ಟರ್ ಹರಿದ ಪರಿಣಾಮ ಗಾಯಗೊಂಡ ಬಾಲಕ ಸಾವನ್ನಪ್ಪಿದ್ದಾನೆ ಎಂದು ಪಶ್ಚಾತ್ತಾಪದಿಂದ ನೊಂದ ಚಾಲಕನೊಬ್ಬ ತಾನೂ ಆತ್ಮಹತ್ಯೆ ಮಾಡಿಕೊಂಡ ದುರಂತ ಘಟನೆ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕು ಸವಕನಪಾಳ್ಯ ಎಂಬಲ್ಲಿ ವರದಿಯಾಗಿದೆ. ಚಾಲಕ ಸುನಿಲ್(23) ಆತ್ಮಹತ್ಯೆ ಮಾಡಿಕೊಂಡಿದ್ದು ಈತ ಚಲಾಯಿಸಿದ್ದ ಟ್ರ್ಯಾಕ್ಟರ್  ಅಡಿಯಲ್ಲಿ ಸಿಕ್ಕು ಹರ್ಷ (5)