Log In
BREAKING NEWS >
ಉಡುಪಿ: ಇಂದ್ರಾಳಿ ರೈಲ್ವೆ ಬ್ರಿಡ್ಜ್ ಬಳಿ ಕಾಂಕ್ರೀಟಿಕರಣ ಹಿನ್ನಲೆ : 45 ದಿನ ಘನ ವಾಹನ ಸಂಚಾರಕ್ಕೆ ನಿಷೇಧ- ಡಿಸಿ ಆದೇಶ...

ನಟಿ ಶಾನ್ವಿ ಶ್ರೀವಾತ್ಸವ ತಮ್ಮ ಬ್ಯಾಂಗ್ ಸಿನಿಮಾ ಶೂಟಿಂಗ್ ಗೆ ಮರಳಿದ್ದಾರೆ. ಕೊರೋನಾ ಎರಡನೇ ಅಲೆಯಿಂದಾಗಿ ನಟಿ ಶಾನ್ವಿ ಹಲವು ದಿನಗಳಿಂದ ಯಾವುದೇ ಚಿತ್ರೀಕರಣದಲ್ಲಿ ಭಾಗವಹಿಸಿರಲಿಲ್ಲ. ಜುಲೈ 16 ರಿಂದ ಶೂಟಿಂಗ್ ಪುನಾರಂಭವಾಗಲಿದ್ದು, ಶಾನ್ವಿ ಭಾಗವಹಿಸಲಿದ್ದಾರೆ.  ಶ್ರೀ ಗಣೇಶ್ ಪರಶುರಾಮ್ ನಿರ್ದೇಶನದ ಬ್ಯಾಂಗ್ ಒಂದು  ದರೋಡೆಕೋರ ಚಿತ್ರ. ಸ್ಟಂಟ್ ಪ್ರಾಕ್ಟೀಸ್

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದಲ್ಲಿ ರಾಜಕೀಯ ವ್ಯವಹಾರಗಳ ಎಲ್ಲ ಪ್ರಮುಖ ಸಂಪುಟ ಮಿತಿಯ ಭಾಗವಾಗಿ ಕೇಂದ್ರ ಸಚಿವರಾದ ಸ್ಮೃತಿ ಇರಾನಿ, ಭೂಪೇಂದರ್ ಯಾದವ್ ಮತ್ತು ಸರ್ಬಾನಂದ ಸೋನೊವಾಲ್ ನೇಮಿಸಿ ಸರ್ಕಾರ ಸಂಪುಟ ಸಮಿತಿಗಳನ್ನು ಪುನರ್ರಚಿಸಿದೆ. ಕೇಂದ್ರ ಸಚಿವರಾದ ವೀರೇಂದ್ರ ಕುಮಾರ್, ಅನುರಾಗ್ ಸಿಂಗ್ ಠಾಕೂರ್ ಅವರನ್ನು ರಕ್ಷಣಾ

ನವದೆಹಲಿ: ಕೊರೋನಾ ವೈರಸ್ ನಿಯಂತ್ರಣಕ್ಕೆ ನೀಡಲಾಗುತ್ತಿರುವ ಲಸಿಕೆಯ ಅಭಿಯಾನದಲ್ಲಿ ಜೂನ್ 21 ರಿಂದ ದೈನದಿಂದ ಸರಾಸರಿ ಲಸಿಕೆ ನೀಡುವಿಕೆ ಪ್ರಮಾಣ ಕುಸಿತ ಕಂಡಿದೆ. ಕೊರೋನಾ ಲಸಿಕೆಯ ಸಾರ್ವತ್ರೀಕರಣದ ಹೊಸ ಹಂತ ಪ್ರಾರಂಭವಾದಾಗಿನಿಂದ ಈ ಕುಸಿತ ದಾಖಲಾಗಿದೆ ಎಂದು ಸರ್ಕಾರಿ ಅಂಕಿ-ಅಂಶಗಳಿಂದ ತಿಳಿದುಬಂದಿದೆ. ಕೋವಿನ್ ವೇದಿಕೆಯಲ್ಲಿ ಲಭ್ಯವಿರುವ ಡೇಟಾ ಪ್ರಕಾರ, ಜೂನ್ 21-27 ರ

ನವದೆಹಲಿ: ಮಾಜಿ ಕ್ರಿಕೆಟಿಗ ಮತ್ತು 1983ರ ವಿಶ್ವ ಕಪ್ ವಿಜೇತ ತಂಡದ ಸದಸ್ಯರಾಗಿದ್ದ ಯಶ್ ಪಾಲ್ ಶರ್ಮಾ ಹೃದಯಾ ಘಾತದಿಂದ ಮಂಗಳವಾರ ನಿಧನರಾಗಿದ್ದಾರೆ. ಅವರಿಗೆ 66 ವರ್ಷ ವಯಸಾಗಿತ್ತು.  70  ಹಾಗೂ 80ರ ದಶಕದಲ್ಲಿ ಕ್ರಿಕೆಟ್ ವೃತ್ತಿಜೀವನದಲ್ಲಿ ಮಿಂಚಿದ್ದ ಮಾಜಿ ಪಂಜಾಬ್ ಆಟಗಾರ, ಆಗಸ್ಟ್ 11, 1954ರಲ್ಲಿ ಲೂದಿಯಾನದಲ್ಲಿ ಜನಿಸಿದ್ದರು. ಟೀಂ

ನವದೆಹಲಿ: ಉತ್ತರ ಭಾರತದ ವಿವಿಧ ರಾಜ್ಯಗಳಲ್ಲಿ ಸಂಭವಿಸಿದ ಸಿಡಿಲು ಬಡಿತ ಪ್ರಕರಣದಲ್ಲಿ ಸಾವನ್ನಪ್ಪಿದವರ ಸಂಖ್ಯೆ 75ಕ್ಕೆ ಏರಿಕೆಯಾಗಿದೆ. ಉತ್ತರ ಪ್ರದೇಶ ಮತ್ತು ರಾಜಸ್ತಾನ, ಮಧ್ಯ ಪ್ರದೇಶ ರಾಜ್ಯಗಳಲ್ಲಿ ಬಾರಿ ಮಳೆ, ಗುಡುಗು ಹಾಗು ಸಿಡಿಲಿಗೆ ಕನಿಷ್ಠ 75 ಮಂದಿ ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ. ಉತ್ತರ ಪ್ರದೇಶದ 11 ಜಿಲ್ಲೆಗಳಲ್ಲಿ ಕನಿಷ್ಠ

ನವದೆಹಲಿ: ಎರಡಕ್ಕಿಂತ ಹೆಚ್ಚಿನ ಮಕ್ಕಳನ್ನು ಹೊಂದಿರುವವರನ್ನು ಸರ್ಕಾರದ ಯೋಜನೆಯಿಂದ ಹೊರಗಿಟ್ಟು ಉತ್ತರ ಪ್ರದೇಶದ ರಾಜ್ಯ ಕಾನೂನು ಆಯೋಗ ಬಿಡುಗಡೆ ಮಾಡಿದ ಜನಸಂಖ್ಯೆ ನಿಯಂತ್ರಣದ ಕರಡು ಪ್ರಸ್ತಾವನೆಗೆ  ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಅಂಗಸಂಸ್ಥೆಯಾದ ವಿಶ್ವ ಹಿಂದೂ ಪರಿಷತ್ ಸೋಮವಾರ ತೀವ್ರ ವಿರೋಧ ವ್ಯಕ್ತಪಡಿಸಿದೆ. ಈ ಸಂಬಂಧ ರಾಜ್ಯ ಕಾನೂನು ಆಯೋಗಕ್ಕೆ ಪತ್ರ

ಚಿಕ್ಕಮಗಳೂರು: ಹಿರಿಯ ಕ್ರೈಮ್ ವರದಿಗಾರ, 43 ವರ್ಷದ ಸುನೀಲ್ ಹೆಗ್ಗರವಳ್ಳಿ ಅಕಾಲಿಕ ಸಾವನ್ನಪ್ಪಿದ್ದಾರೆ. ಹಾಯ್ ಬೆಂಗಳೂರು ಪತ್ರಿಕೆಯ ಮೂಲಕ ತಮ್ಮ ವೃತ್ತಿಜೀವನವನ್ನುಆರಂಭಿಸಿದ ಸುನೀಲ್ ಹೆಗ್ಗರವಳ್ಳಿ, ತಮ್ಮ ಸ್ವಂತ ಜಿಲ್ಲೆಯಾದ ಚಿಕ್ಕಮಗಳೂರಿನ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಹಾಯ್ ಬೆಂಗಳೂರು ಪತ್ರಿಕೆಯ ವರದಿಗಾರರಾಗಿ ಅವರು ಮಾಡಿದ ಸಾಕಷ್ಟು ವರದಿಗಳು ದೊಡ್ಡ ಸಂಚಲನವನ್ನೇ ಮೂಡಿಸಿದ್ದವು. ರವಿ ಬೆಳಗೆರೆಯವರ

ಬ್ರಹ್ಮಾವರ: ಆಘಾತಕಾರಿ ಘಟನೆಯಲ್ಲಿ, ಬ್ರಹ್ಮಾವರದ ಉಪ್ಪಿನಕೋಟೆಯ ಖಾಸಗಿ ಅಪಾರ್ಟ್ ಮೆಂಟ್ ನಲ್ಲಿ ಮಹಿಳೆಯೊಬ್ಬರ ಶವ ಪತ್ತೆಯಾಗಿದೆ. ಪ್ರಾಥಮಿಕ ಮೂಲಗಳ ಪ್ರಕಾರ, ಭಾನುವಾರ ಕೊಲೆ ನಡೆದಿದ್ದರೂ, ಸೋಮವಾರ ಈ ಬಗ್ಗೆ ಸುದ್ದಿ ತಿಳಿದುಬಂದಿದೆ. ಕೆಲ ದಿನಗಳ ಹಿಂದೆ ದುಬೈನಿಂದ ಭಾರತಕ್ಕೆ ಮರಳಿದ ಗಂಗೊಳ್ಳಿ ಮೂಲದ ವಿಶಾಲಾ ಗಾಣಿಗ (35) ಹೀಗೆ ಶವವಾಗಿ ಪತ್ತೆಯಾಗಿರುವ ಮಹಿಳೆ. ಮಹಿಳೆ

ಬೆಂಗಳೂರು: ತಾವರ್ ಚಂದ್ ಗೆಹ್ಲೋಟ್ ಕರ್ನಾಟಕದ ನೂತನ ರಾಜ್ಯಪಾಲರಾಗಿ ಪ್ರಮಾಣ ವಚನ ಸ್ವೀಕರಿಸಿದರು ಗೆಹ್ಲೋಟ್ ರಾಜ್ಯದ 19ನೇ ರಾಜ್ಯಪಾಲರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಅವರು ತಾವರ್ ಚಂದ್ ಗೆಹ್ಲೋಟ್‌ಗೆ ಪ್ರಮಾಣವಚನ ಬೋಧಿಸಿದ್ದಾರೆ. ರಾಜಭವನದಲ್ಲಿ ನಡೆದ ಕಾರ್ಯಕ್ರ್ಮದಲ್ಲಿ ನಿರ್ಗಮಿತ ರಾಜ್ಯಪಾಲ ವಜುಭಾಯಿ ವಾಲಾ, ಮುಖ್ಯಮಂತ್ರಿ ಬಿ,ಎಸ್,

ರಾಯಚೂರು, ಜು.11: ದೇವದುರ್ಗ ತಾಲೂಕಿನ ಗಬ್ಬೂರಿನಲ್ಲಿ ಮದುವೆ ನಿಶ್ಚಯವಾದ ಮೇಲೆ ಹುಡುಗ ಕಪ್ಪು ಎಂದು ವಿವಾಹ ನಿರಾಕರಿಸಿದ ತಂಗಿಯನ್ನು ಅಣ್ಣ ಕೊಡಲಿಯಿಂದ ಕೊಚ್ಚಿ ಹತ್ಯೆಗೈದ ಘಟನೆ ನಡೆದಿದೆ. ಹತ್ಯೆಯಾದ ಯುವತಿಯನ್ನು ಚಂದ್ರಕಲಾ ( 22) ಎಂದು ಗುರುತಿಸಲಾಗಿದೆ. ಜು.13ರಂದೇ ಮದುವೆ ನಿಶ್ಚಯವಾಗಿದ್ದು, ಮದುವೆ ಬೇಡ ಎಂದು ಯುವತಿ ಹೇಳಿದಕ್ಕೆ ಕೋಪಗೊಂಡ ಅಣ್ಣ