Log In
BREAKING NEWS >
ಲಾಕ್ ಡೌನ್ ಒಪನ್- ಮಾಸ್ಕ್, ಅ೦ತರ ಪಾಲನೆ ತಪ್ಪದೇ ಅನುಸರಿಸಿ....

ನವದೆಹಲಿ: ಮುಂಬರುವ ಶ್ರೀಲಂಕಾ ಪ್ರವಾಸಕ್ಕೆ ಭಾರತ ಕ್ರಿಕೆಟ್ ತಂಡದ ಕೋಚ್ ಆಗಿ ರಾಹುಲ್ ದ್ರಾವಿಡ್ ಅವರು ಆಯ್ಕೆಯಾಗಿದ್ದಾರೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹೇಳಿದ್ದಾರೆ. ಇಂಗ್ಲೆಂಡ್ ನಲ್ಲಿ ಭಾರತ ಹಿರಿಯ ತಂಡ ನ್ಯೂಜಿಲೆಂಡ್ ವಿರುದ್ಧ ಐಸಿಸಿ ಟೆಸ್ಟ್ ಚಾಂಪಿಯನ್ ಷಿಪ್ ಫೈನಲ್ ಪಂದ್ಯದಲ್ಲಿ ಆಡುತ್ತಿದ್ದು, ಅದೇ ಹೊತ್ತಿನಲ್ಲೇ ಶ್ರೀಲಂಕಾ ಪ್ರವಾಸ

ಉಡುಪಿಯ ವಿವಿದೆಡೆಯಲ್ಲಿ ಪೆಟ್ರೋಲ್ ಬೆಲೆ ಏರಿಕೆಯನ್ನು ವಿರೋಧಿಸಿ ಉಡುಪಿ ಜಿಲ್ಲಾ ಕಾ೦ಗ್ರೆಸ್ ವತಿಯಿ೦ದ ಪ್ರತಿಭಟನೆಯು ಮು೦ದುವರಿದಿದೆ ನಗರದ ಹಲವು ಪೆಟ್ರೋಲ್ ಪ೦ಪ್ ಗಳ ಮು೦ಭಾಗದಲ್ಲಿ ಮ೦ಗಳವಾರವೂ ಪ್ರತಿಭಟನೆ ನಡೆಸಲಾಯಿತು. ಜಿಲ್ಲಾ ಕಾ೦ಗ್ರೆಸ್ ನ ಮಹಿಳಾ ಸದಸ್ಯರು ಸೇರಿದ೦ತೆ ಹಲವು ಮುಖ೦ಡರು ಈ ಪ್ರತಿಭಟನೆಯಲ್ಲಿ ಭಾಗವಹಿಸಿದರು.

ನವದೆಹಲಿ, ಜೂ 15:ಕೊರೊನಾವೈರಸ್ ಲಸಿಕೆ ಪಡೆದ ನಂತರ 68 ವರ್ಷದ ವ್ಯಕ್ತಿಯೊಬ್ಬರು ಅನಾಫಿಲ್ಯಾಕ್ಸಿಸ್‌ನಿಂದ ಸಾವನ್ನಪ್ಪಿದ್ದಾರೆ ಎಂದು ಲಸಿಕೆ ಅಡ್ಡಪರಿಣಾಮಗಳನ್ನು (ಎಇಎಫ್‌ಐ) ಅಧ್ಯಯನ ಮಾಡುತ್ತಿರುವ ಸರ್ಕಾರಿ ಸಮಿತಿಬಹಿರಂಗಪಡಿಸಿದೆ. ಎಇಎಫ್‌ಐ ಸಮಿತಿಯೂ ನೀಡಿದ ವರದಿಯಲ್ಲಿ ಕೋವಿಡ್ -19 ವಿರುದ್ಧ ವ್ಯಾಕ್ಸಿನೇಷನ್ ಮಾಡಿದ ನಂತರ 31 ಗಂಭೀರ ಪ್ರತಿಕೂಲ ಘಟನೆಗಳ ಬಗ್ಗೆ ಸರ್ಕಾರಿ ಸಮಿತಿಯ

ಬೆಂಗಳೂರು: ರಾಬರ್ಟ್ ಚಿತ್ರದ ನಿರ್ಮಾಪಕ ಉಮಾಪತಿ ಶ್ರೀನಿವಾಸ್‌ ಅವರ ಹತ್ಯೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ರೌಡಿ ಶೀಟರ್ ರಾಜೀವ್ ಅಲಿಯಾಸ್ ಕರಿಯ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರು ದಕ್ಷಿಣ ವಿಭಾಗದ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದು, ನೇಪಾಳ ಬಾರ್ಡರ್ ನಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ಕೆ.ಜೆ.ನಗರ ಇನ್ಸ್‌ಪೆಕ್ಟರ್‌ ಚೇತನ್ ಅವರ ನೇತೃತ್ವದಲ್ಲಿ

ನವದೆಹಲಿ: ಕೇರಳ ಕರಾವಳಿ ತೀರದಲ್ಲಿ ಭಾರತದ ಮೀನುಗಾರರ ಹತ್ಯೆ ಮಾಡಿದ್ದ ಇಟಲಿ ನಾವಿಕರ ವಿರುದ್ಧದ ಕ್ರಿಮಿನಲ್ ಪ್ರಕರಣವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಕೇರಳ ಕರಾವಳಿಯಲ್ಲಿ 2012ರ ಫೆಬ್ರವರಿ ತಿಂಗಳಲ್ಲಿ ತಮ್ಮ ನೌಕೆಯತ್ತ ಆಗಮಿಸಿದ್ದ ಇಬ್ಬರು ಮೀನುಗಾರರನ್ನು ಕಡಲ್ಗಳ್ಳರು ಎಂದು ತಪ್ಪಾಗಿ ಭಾವಿಸಿದ್ದ ಇಟಲಿ ನಾವಿಕರು ಗುಂಡು ಹಾರಿಸಿದ್ದರು. ಈ ವೇಳೆ ಭಾರತದ

ಉಡುಪಿ, ಜೂ.15: ಭಾರತೀಯ ಭೂಸೇನೆಯಲ್ಲಿ ಸೇವೆ ಸಲ್ಲಿಸಿದ್ದ ನಿವೃತ್ತ ಸೇನಾಧಿಕಾರಿ, ಸಮಾಜ ಸೇವಕ ಕರ್ನಲ್ ರಾಮಚಂದ್ರ ರಾವ್(88) ಸೋಮವಾರ ರಾತ್ರಿ ಮೃತಪಟ್ಟಿದ್ದಾರೆ. ರಾಮಚಂದ್ರ ರಾವ್ ಅವರು ಭಾರತೀಯ ಭೂಸೇನೆಯಲ್ಲಿ ವಿವಿಧ ಹುದ್ದೆಗಳನ್ನು ಪಡೆದು 1962ರ ಚೀನಾ, 1967ರ ಪಾಕಿಸ್ತಾನದೊಂದಿಗಿನ ಯುದ್ಧ ಹಾಗೂ 1972ರ ಬಾಂಗ್ಲಾ ವಿಮೋಚನೆಯ ಕಾರ್ಯಾಚರಣೆಯಲ್ಲಿ ಭಾಗವಹಿಸಿ ದೇಶ

ಮಣಿಪಾಲ:ಪ್ರಖ್ಯಾತ ಜೋತಿಷ್ಯರಾದ ಹಾಗೂ ತರಂಗದಲ್ಲಿ ಜೋತಿಷ್ಯ ಬಗ್ಗೆ ಹಲವಾರು ಲೇಖನ ಗಳನ್ನೂ ಬರೆದ್ದಿದ್ದರು. ಯನ್. ಎಸ್ . ಭಟ್ ರವರು ಸೋಮವಾರ ರಾತ್ರಿ ದೈವದೀನರಾಗಿದ್ದಾರೆ.

ಬೆಂಗಳೂರು: ಕೊರೊನಾ ಸೋಂಕನ್ನು ನಿಯಂತ್ರಿಸಲು ತಾಂತ್ರಿಕ ಸಲಹಾ ಸಮಿತಿ ನೀಡಿದ್ದ ಸಲಹೆಯನ್ನು ಪರಿಗಣಿಸಿ ರಾಜ್ಯ ಸರ್ಕಾರ ಎರಡನೆಯ ಅಲೆಯ ವೇಳೆ ಇಡೀ ರಾಜ್ಯದಲ್ಲಿ ಲಾಕ್​ಡೌನ್​ ಘೋಷಿಸಿತ್ತು. ಅದೀಗ ಹಂತಹಂತವಾಗಿ ಅನ್​ಲಾಕ್​ ಆಗುತ್ತಿದೆ. ಜೂನ್ 21 ರಿಂದ ಅನ್​ಲಾಕ್ 2.O ಜಾರಿಗೆ ತಾಂತ್ರಿಕ ಸಲಹಾ ಸಮಿತಿ ಇದೀಗ ಗ್ರಿನ್ ಸಿಗ್ನಲ್

ಬೆಂಗಳೂರು: ರಾಜ್ಯ ಪ್ರವಾಸೋದ್ಯಮ ಇಲಾಖೆಯಲ್ಲಿ ನೋಂದಣಿಯಾಗಿರುವ ಪ್ರವಾಸಿ ಮಾರ್ಗದರ್ಶಿಗಳಿಗೆ ಕೋವಿಡ್ ಪರಿಹಾರವಾಗಿ 5 ಸಾವಿರ ರೂಪಾಯಿ ನೀಡಲು ನಿರ್ಧಾರ ಕೈಗೊಂಡಿರುವುದಾಗಿ ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ್ ತಿಳಿಸಿದ್ದಾರೆ. ಪ್ರವಾಸೋದ್ಯಮ ಇಲಾಖೆಯಲ್ಲಿ 384 ಪ್ರವಾಸಿ ಗೈಡ್‌ಗಳು ನೋಂದಣಿಯಾಗಿದ್ದಾರೆ. ಅವರಿಗೆ ಕೊರೋನಾ ಸಮಯದಲ್ಲಿ ನೆರವಾಗಲು ನಿರ್ಧರಿಸಿದ್ದೇವೆ. ಪ್ರತಿಯೊಬ್ಬರಿಗೂ ಐದು ಸಾವಿರ ರೂಪಾಯಿ ಬಿಡುಗಡೆ

ಬೆಂಗಳೂರು: ಮಹತ್ವದ ಬೆಳವಣಿಗೆಯಲ್ಲಿ ಕರ್ನಾಟಕ ವೈದ್ಯಕೀಯ ಮಂಡಳಿಗೆ (ಕೆಎಂಸಿ) ನಡೆದ ಚುನಾವಣೆಯನ್ನು ರದ್ದುಪಡಿಸಿ ಇನ್ನು ಆರು ತಿಂಗಳಲ್ಲಿ ಮತ್ತೆ ಚುನಾವಣೆ ನಡೆಸಲು ಕರ್ನಾಟಕ ಹೈಕೋರ್ಟ್ ಮಂಡಳಿಗೆ ಆದೇಶಿಸಿದೆ. ಹೈಕೋರ್ಟ್‌ನ ಕಲಬುರಗಿ ನ್ಯಾಯಪೀಠದಲ್ಲಿ ಕಲಬುರಗಿಯ 70 ವರ್ಷದ ವೈದ್ಯ ಗಚ್ಚಿನಮನಿ ನಾಗನಾಥ  ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ  ನ್ಯಾಯಮೂರ್ತಿ ಎಂ. ನಾಗಪ್ರಸನ್ನ